ಕೆಜಿಎಫ್: ಇಲ್ಲಿನ ಎಲ್ಲ ನಿವಾಸಿಗಳು ಕಾನೂನಿನ ಪ್ರಕಾರವೇ ನಡೆದುಕೊಳ್ಳುವವರು. ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿ ಮಾಡುವದರಲ್ಲೂ ಎಲ್ಲರಿಗಿಂತ ಮುಂದು. ರಸ್ತೆ, ಚರಂಡಿ ಮೊದಲಾದ ಮೂಲಸೌಕರ್ಯಗಳನ್ನು ಸಹ ತಮ್ಮ ಹಣದಿಂದಲೇ ಮಾಡಿಕೊಂಡು ಮಾದರಿಯಾದವರು. ಆದರೆ ಈಗ ಅವರಲ್ಲಿ ಜನಪ್ರತಿನಿಧಿಗಳ ಕುರಿತು ಅಸಮಾಧಾನ ಹೆಪ್ಪುಗಟ್ಟಿದೆ.

ಇಂಥ ಪರಿಸ್ಥಿತಿ ಏರ್ಪಟ್ಟಿರುವುದು ಬೆಮೆಲ್ ನಗರದ ಸುತ್ತಮುತ್ತಲಿನ ಬಡಾವಣೆಗಳಲ್ಲಿ. ಬೆಮೆಲ್ ನಗರದ ವ್ಯಾಪ್ತಿಯಲ್ಲಿರುವ ಎಚ್.ಪಿ.ನಗರ, ಭಾರತ್ ನಗರ, ಬಾಬಾ ನಗರ, ಪಾಲಾರ್ ನಗರ, ಚೈತನ್ಯ ನಗರ, ಟ್ಯಾಂಕ್ ನಗರ ಮೊದಲಾದ ಪ್ರದೇಶದ ಜನತೆ ಈಗ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸುಮಾರು 2 ಸಾವಿರಕ್ಕೂ ಹೆಚ್ಚು ಮನೆಗಳಿರುವ ಪ್ರಮುಖ ಬಡಾವಣೆಗಳಾದ ಎಚ್.ಪಿ.ನಗರ ಮತ್ತು ಭಾರತ್ ನಗರದಲ್ಲಿ ಕಾರ್ಮಿಕರೇ ರಚಿಸಿಕೊಂಡ ಸಂಘಗಳ ಮೂಲಕ ತಾವೇ ಹಣ ಹೂಡಿ ಮೂಲ ಸೌಕರ್ಯ ಕಲ್ಪಿಸಿಕೊಂಡು ಬಾಳ್ವೆ ನಡೆಸುತ್ತಿದ್ದರು. ಸುಮಾರು ಎರಡು ದಶಕ ಈ ಪದ್ಧತಿ ಜಾರಿಯಲ್ಲಿತ್ತು. ಆದರೆ ಈಚಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನ ಗ್ರಾಮ ಪಂಚಾಯಿತಿ ಮತ್ತು ಶಾಸಕರ ಅನುದಾನ ಬಯಸಿದ್ದರು. ಇಂಥ ಪರಿಸ್ಥಿತಿಯಲ್ಲಿ ಶಾಸಕ ಎಂ.ನಾರಾಯಣಸ್ವಾಮಿ ಈಚಿನ ದಿನಗಳಲ್ಲಿ ಇಲ್ಲಿನ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕಲ್ಲುಗಳನ್ನು ನೆಟ್ಟು ನಂತರ ಕಾಮಗಾರಿ ಆರಂಭಿಸದೇ ಇರುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.

ನಾರಾಯಣಸ್ವಾಮಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ 200 ಮೀಟರ್ ರಸ್ತೆ ಹಾಕಿದ್ದನ್ನು ಬಿಟ್ಟರೆ ಇದುವರೆವಿಗೂ ಒಂದು ಅಭಿವೃದ್ಧಿ ಕೆಲಸ ಸಹ ಮಾಡಿಲ್ಲ ಎಂದು ಎಚ್.ಪಿ.ನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಬಿಜಿಎಂಎಲ್ನಿಂದ ಕಲ್ಲುಗಳನ್ನು ತಂದು ಹಳ್ಳದಿನ್ನೆಗಳನ್ನು ಸಮತಟ್ಟು ಮಾಡಿ ರಸ್ತೆಯನ್ನು ನಾವೇ ಮಾಡಿಕೊಂಡಿದ್ದೆವು ಎಂದು ನೆನಪು ಬಿಚ್ಚಿಡುತ್ತಾರೆ.

ಕೆಜಿಎಫ್ ಸಮೀಪದ ಬೆಮೆಲ್ನ ಎಚ್.ಪಿ.ನಗರದ ಮುಂಭಾಗದಲ್ಲಿ ಕಾಮಗಾರಿಗಾಗಿ ಮೂರು ತಿಂಗಳ ಹಿಂದೆ ಹಾಕಲಾಗಿರುವ ಜಲ್ಲಿ ಕ್ಲ್ಲಲಿನ ರಾಶಿ ಹಾಗೇ ಉಳಿದಿದೆ. ಬೆಮೆಲ್ ನಗರದ ಭಾರತ್ ನಗರದಲ್ಲಿ ಎರಡು ದಶಕದ ಹಿಂದೆ ಹಾಕಲ್ಪಟ್ಟ ರಸ್ತೆ ಹಾಳಾಗಿದ್ದರೂ; ಅದರ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ಶಾಸಕರು ನಮ್ಮ ಪಾರ್ಟಿಯವರೇ ಆಗಿದ್ದರೂ ಕಾಮಗಾರಿ ನಡೆಸದೆ ಶಂಕುಸ್ಥಾಪನೆ ಕಲ್ಲುಗಳನ್ನು ಹಾಕಿಕೊಂಡು ಹೋಗಿದ್ದಾರೆ. ಪ್ರತಿ ದಿನ ಕಾಮಗಾರಿ ಎಂದು ಶುರುವಾಗುತ್ತದೆ ಎಂದು ಕೇಳುವ ನಿವಾಸಿಗಳ ಪ್ರಶ್ನೆಗಳಿಗೆ ಉತ್ತರ ಹೇಳುವುದಕ್ಕೆ ಹಿಂಜರಿಕೆಯಾಗುತ್ತದೆ ಎಂದು ಬಿಜೆಪಿ ಮುಖಂಡ ಮತ್ತು ನಗರಸಭೆ ಸದಸ್ಯ ಶಿವಪ್ರಸಾದ್ನಾಯ್ಡು ಹೇಳುತ್ತಾರೆ.

ಇಲ್ಲಿ ರಸ್ತೆ ನಾವೇ ಹಾಕಿಕೊಂಡಿದ್ದೇವೆ. ಚರಂಡಿಯನ್ನೂ ನಾವೇ ನಿರ್ಮಿಸಿದ್ದೇವೆ. ಕೊಳವೆಬಾವಿ ನಿರ್ವಹಣೆಯನ್ನು ಸಹ ನಾವೇ ಮಾಡುತ್ತೇವೆ. ನಮ್ಮಿಂದ ವೋಟು ಹಾಕಿಸಿಕೊಂಡವರು ಸ್ವಲ್ಪವಾದರೂ ನಮ್ಮ ಸಮಸ್ಯೆ ಆಲಿಸದಿದ್ದರೆ ಹೇಗೆ? ಎಂದು ಬೆಮೆಲ್ ಕಾರ್ಮಿಕ ಸಂಘದ ಪದಾಧಿಕಾರಿಯಾಗಿದ್ದ ಎಸ್.ಎಸ್.ಗುಮಾಸ್ತೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.