ಸೋಮವಾರ, ಜೂನ್ 14, 2021
28 °C

ಆರತಿ ಕೃಷ್ಣ ನಾಮಪತ್ರ ಅಂಗೀಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯ­ರ್ಥಿಯ ಆಯ್ಕೆಗಾಗಿ ನಡೆಯುತ್ತಿರುವ ಪ್ರಾಥಮಿಕ ಚುನಾವಣೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಅಧಿಕಾರಿ ಆರತಿ ಕೃಷ್ಣ ಅವರು ಸಲ್ಲಿಸಿರುವ ನಾಮಪತ್ರವನ್ನು ಎಐಸಿಸಿ ಮಾನ್ಯಮಾಡುವ ಸಾಧ್ಯತೆ ಇದೆ.ಆರತಿ ಅವರು ‘ಸಾರ್ವಜನಿಕ ಸೇವೆ’ ವಿಭಾಗದಡಿ ಸ್ಪರ್ಧೆಗೆ ಅವಕಾಶ ಕೋರಿ­ದ್ದಾರೆ. ಅವರು ಈ ವಿಭಾಗದಡಿ ಸ್ಪರ್ಧೆಗೆ ಅರ್ಹರೇ ಎಂಬುದನ್ನು ಖಾತರಿ­ಪಡಿಸಿಕೊಳ್ಳಲು ಚುನಾವಣಾಧಿ­ಕಾರಿ­ಗಳು, ನಾಮಪತ್ರವನ್ನು ದೆಹಲಿಗೆ ರವಾನಿಸಿದ್ದಾರೆ. ಎಐಸಿಸಿ ಪ್ರಾಥಮಿಕ ಚುನಾವಣಾ ಉಸ್ತುವಾರಿ ವಿಭಾಗವು ಪರಿಶೀಲನೆ ನಡೆಸಿದ್ದು, ಸ್ಪರ್ಧೆಗೆ ಸಮ್ಮತಿ ಸೂಚಿಸಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಭಾನುವಾರ ಚಿಹ್ನೆ ಹಂಚಿಕೆ ಮಾಡಲಾ­ಗುತ್ತದೆ. ಈ ಸಂದರ್ಭದಲ್ಲೇ ಆರತಿ ಅವರ ನಾಮಪತ್ರವನ್ನು ಅಂಗೀಕರಿಸುವ ವಿಷಯವನ್ನು ಚುನಾವಣಾಧಿಕಾರಿ­ಗಳಾದ ಜಸ್‌ಪ್ರೀತ್‌ ಸಿಂಗ್‌ ಮತ್ತು ನಿತಿನ್‌ ಕುಂಭಾಲ್ಕರ್‌ ಪ್ರಕಟಿಸಲಿದ್ದಾರೆ ಎಂದು ಗೊತ್ತಾಗಿದೆ.ಒಟ್ಟು ಸಲ್ಲಿಕೆಯಾಗಿದ್ದ ಎಂಟು ನಾಮ­ಪತ್ರಗಳಲ್ಲಿ ಮೂರನ್ನು ಚುನಾ­ವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಎಐಸಿಸಿ ವಕ್ತಾರ ಎಂ.ವಿ.ರಾಜೀವ್‌ ಗೌಡ ಮತ್ತು ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್‌ ಅವರ ನಾಮಪತ್ರವನ್ನು ಅಂಗೀಕರಿಸಲಾಗಿತ್ತು. ಆರತಿ ಕೃಷ್ಣ ಅವರ ಸ್ಪರ್ಧೆಗೆ ಸಮ್ಮತಿ ದೊರೆತರೆ ಪ್ರಾಥಮಿಕ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳ ಸಂಖ್ಯೆ ಐದಕ್ಕೇರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.