ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಪಾಡಲು ಧ್ಯಾನ, ಯೋಗ ಪೂರಕ

Last Updated 10 ಅಕ್ಟೋಬರ್ 2015, 5:45 IST
ಅಕ್ಷರ ಗಾತ್ರ

ಮೂಡಿಗೆರೆ: ಜೀವನದ ಸಂಧ್ಯಾಕಾಲ ದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು  ಜೆಎಂಎಫ್‌ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಕೆ. ನವೀನ್‌ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ತಾಲ್ಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ನಡೆದ ಹಿರಿಯ ನಾಗರಿಕರ ದಿನಾಚರಣೆ
ಹಾಗೂ ಆರೋಗ್ಯ ತಪಾಸಣಾ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಳಿವಯಸ್ಸಿನಲ್ಲಿ ಆರೋಗ್ಯ ಮೇಲೆ ಹೆಚ್ಚು ನಿಗಾ ಅವಶ್ಯಕ. ಪ್ರತಿನಿತ್ಯ ಧ್ಯಾನ, ಯೋಗಭ್ಯಾಸಗಳನ್ನು ರೂಢಿಸಿಕೊಂಡು ಚಟುವಟಿಕೆಯುಕ್ತ ಬದುಕನ್ನು ನಡೆಸ ಬೇಕು. ಜೀವನವಿಡೀ ಸರ್ಕಾರ ಸೇವೆ ಯಲ್ಲಿ ಕಳೆದ ಜೀವಗಳು ಸಂಘದ ಮೂಲಕ ಸಮಾಜಮುಖಿ ಚಟುವಟಿಕೆ ಗಳನ್ನು ನಡೆಸುವ ಮೂಲಕ ನಿವೃತ್ತ ಜೀವನವನ್ನು ಕೇವಲ ವಿಶ್ರಾಂತಿಗೆ ಸೀಮಿತಗೊಳಿಸಿಕೊಳ್ಳದೇ ಚರ್ಚೆ, ವಿಚಾರ ವಿನಿಮಯಗಳಿಗೆ ಸದುಪ ಯೋಗ ಪಡಿಸಬೇಕು ಎಂದರು.

ತಹಶೀಲ್ದಾರ್‌ ಶಾರದಾಂಬಾ ಮಾತನಾಡಿ, ನಿವೃತ್ತ ಜೀವನವನ್ನು ಸಂಘದ ಮೂಲಕ ಚಟುವಟಿಕೆ ಯುಕ್ತವಾಗಿಸಿರುವುದು ಶ್ಲಾಘನೀಯ ವಾಗಿದ್ದು, ನಿವೃತ್ತ ನೌಕರರ ಸಂಘದ ಮೂಲಕ ಎಲ್ಲಾ ಹಿರಿಯ ನಾಗರರಿ ಕರಿಗೂ ಉಪಯುಕ್ತವಾಗು ವಂತಹ ಚಟುವಟಿಕೆಗಳನ್ನು ನಡೆಸ ಬೇಕು. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಸಂಘದ ಆಶ್ರಯದಲ್ಲಿ ಯೋಗ, ವ್ಯಾಯಾಮಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಯೋಗೇಶ್‌ ಮಾತನಾಡಿ,  ಕಾಲಕಾಲಕ್ಕೆ ನಿಗದಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಿ ಆರೋಗ್ಯದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ನಿಗಾ ವಹಿಸ ಬೇಕು. ಇಳಿ ವಯಸ್ಸನ್ನು ಚಿಂತೆಗಳಿಗೆ ಗುರಿಮಾಡಿಕೊಳ್ಳದೇ ಹರ್ಷದಾಯ ಕವಾಗಿ ಕಳೆಯಲು ಯೋಜನೆ ಹಾಕಿ ಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎನ್. ವಿ. ಅರವಿಂದ್‌, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ರಘುಪತಿ ತಾಲ್ಲೂಕು ಅಧ್ಯಕ್ಷ ಗಣಪತಿಆಚಾರ್‌, ಕಾರ್ಯದರ್ಶಿ ತಿಮ್ಮರಾಜ್‌, ವಕೀಲರ ಸಂಘದ ಅಧ್ಯಕ್ಷ ಯು.ಎಂ. ಅಶೋಕ್‌, ಕಾರ್ಯದರ್ಶಿ ಕೆ.ಟಿ. ಮಹೇಶ್‌ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT