ಮಂಗಳವಾರ, ಮೇ 11, 2021
25 °C

ಆರ್ಚರಿ: ಭಾರತಕ್ಕೆ ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಭಾರತದ ರಜತ್ ಚೌಹಾಣ್ ಮತ್ತು ಮಂಜುದಾ ಸೋಯ್ ಅವರು ಟರ್ಕಿಯ ಅಂತಾಲ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಸ್ಟೇಜ್-2' ಕೂಟದ ಕಾಂಪೌಂಡ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲರಾದರು.ಶನಿವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ ಕೇವಲ ಒಂದು ಪಾಯಿಂಟ್ ಅಂತರದಿಂದ ಇಟಲಿಯ ಜೋಡಿಯ ಎದುರು ನಿರಾಸೆ ಅನುಭವಿಸಿತು.ಪ್ರಬಲ ಪೈಪೋಟಿ ಕಂಡುಬಂದ ಫೈನಲ್‌ನಲ್ಲಿ ಇಟಲಿಯ ಸೆರ್ಜಿಯೊ ಪಾಗ್ನಿ ಹಾಗೂ ಮಾರ್ಸೆಲಾ ಟೋನಿಯೊಲಿ 112-111 ರಲ್ಲಿ ರಜತ್- ಮಂಜುದಾ ಅವರನ್ನು ಮಣಿಸಿದರು.ವಿಶ್ವಕಪ್‌ನ ಕಾಂಪೌಂಡ್ ವಿಭಾಗದಲ್ಲಿ ಭಾರತ ಇದುವರೆಗೆ ಚಿನ್ನ ಜಯಿಸಿಲ್ಲ. ಈ ಬಾರಿ ಚಿನ್ನ ಗೆಲ್ಲುವ ಅವಕಾಶವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡಿತು. 2011 ರ ವಿಶ್ವಕಪ್‌ನಲ್ಲಿ (ಸ್ಟೇಜ್-3) ಮಹಿಳೆಯರ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದು ಭಾರತದ ಇದುವರೆಗಿನ ಉತ್ತಮ ಪ್ರದರ್ಶನ ಎನಿಸಿಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.