ಆರ್ಥಿಕ ಚಿಂತಕರ ವೇದಿಕೆ ಆರಂಭ

ಶುಕ್ರವಾರ, ಮೇ 24, 2019
24 °C

ಆರ್ಥಿಕ ಚಿಂತಕರ ವೇದಿಕೆ ಆರಂಭ

Published:
Updated:

ಚನ್ನರಾಯಪಟ್ಟಣ: ಜಾಗತೀಕರಣದ ನಂತರ ಅರ್ಥ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಹೊಸ ಆವಿಷ್ಕಾರಗಳು ನಡೆದಿವೆ ಎಂದು ಕರ್ನಾಟಕ ಲೋಕಾ ಸೇವಾ ಆಯೋಗದ ಸದಸ್ಯ ಡಾ.ಎಂ. ಮಹದೇವ್ ತಿಳಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ `ಆರ್ಥಿಕ ಚಿಂತಕರ ವೇದಿಕೆ~ಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಚಿಂತಕರ ವೇದಿಕೆಗಳು ತಾಲ್ಲೂಕು ಮಟ್ಟದಲ್ಲಿ ಉತ್ತಮ ಸಂಘಟನೆಯಾಗಿ ವಿಚಾರ ಸಂಕಿರಣ, ಕಾರ್ಯಾಗಾರ ಏರ್ಪಡಿಸಿದರೆ ಅರ್ಥಿಕ ಚಿಂತಕರು ಹೆಚ್ಚಾಗುತ್ತಾರೆ. ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ, ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ ಎಸ್. ಮಹೇಂದ್ರಕುಮಾರ್. ಕಾಲೇಜು ಪ್ರಾಚಾರ್ಯ ಪ್ರೊ.ಎಂ.ಕೆ. ಉಮಾನಾಥ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನೇ.ತಿ. ಸೋಮಶೇಖರ್, ಅರ್ಥಶಾಸ್ತ್ರ ಚಿಂತಕರ ವೇದಿಕೆ ಅಧ್ಯಕ್ಷ ಎಂ.ಎನ್. ಲೋಕೇಶ್, ಡಾ. ಲಿಂಗರಾಜು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ  `ಅರ್ಥ ಚಿಲುಮೆ ಪತ್ರಿಕೆ~ ಹಾಗೂ  `ಅರ್ಥಸ್ಫೂರ್ತಿ ಗೋಡೆ~ ಪತ್ರಿಕೆ ಬಿಡುಗಡೆ ಮಾಡಲಾಯಿತು. ಅರ್ಥಶಾಸ್ತ್ರದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಕೆ.ಎಂ. ಕುಸುಮ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಕೆ.ಯು. ದಿವ್ಯ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry