ಮಂಗಳವಾರ, ಮೇ 11, 2021
20 °C

ಆರ್ಯ ದ್ರಾವಿಡ ಸಿದ್ಧತೆ ವೀಕ್ಷಿಸಿದ ದೇಜಗೌ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತಾಲ್ಲೂಕಿನ ಕಲ್ಲುಮಂಟಿ ಗ್ರಾಮದ ಹೊರವಲಯದ ಸಮೀಪ ಹವ್ಯಾಸಿ `ಚಾರ್ವಾಕ~ ರಂಗ ತಂಡ  ಬಯಲು ಪ್ರದೇಶದಲ್ಲಿ ಆಯೋಜಿಸಲು ಉದ್ದೇಶಿಸಿರುವ `ಆರ್ಯ ದ್ರಾವಿಡ~ ನಾಟಕ ಪ್ರದರ್ಶನದ ಸಿದ್ಧತೆಗಳನ್ನು ವಿಶ್ರಾಂತ ಕುಲಪತಿ ದೇಜಗೌ ಶುಕ್ರವಾರ ವೀಕ್ಷಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯಲ್ಲಿ  ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಔಷಧಿ ಆಗುವಂತೆ ಹೆಚ್ಚಿನ ನಾಟಕಗಳು ಬರಬೇಕು ಎಂದು ಅಭಿಪ್ರಾಯಪಟ್ಟರು.ರಂಗಭೂಮಿ, ಯಕ್ಷಗಾನ, ಬಯಲಾಟಗಳು ಶೈಕ್ಷಣಿಕ ಸಂಸ್ಥೆಗಳ ಹಾಗಿದ್ದು, ಸಮಾಜವನ್ನು ತಿದ್ದಲು ಪ್ರಬಲವಾದ ಮಾಧ್ಯಮ ಆಗುತ್ತದೆ. ಆದರೆ,  ಸಾಹಿತಿಗಳು ಇಂದು ಏಕೆ  ಇಂದು ಸಮಕಾಲೀನ ಸಮಸ್ಯೆಗಳ ಬಗೆಗೆ ನಾಟಕಗಳನ್ನು ರಚಿಸುತ್ತಿಲ್ಲವೋ ತಿಳಿಯುತ್ತಿಲ್ಲ ಎಂದರು.ಭ್ರಷ್ಟಾಚಾರ ತಡೆಯಲು ಮಾಧ್ಯಮಗಳು, ಜನರೇ ಆಂದೋಲನ ಶುರು ಮಾಡಬೇಕು. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವುದೇ ಸಮಸ್ಯೆಗೆ ಉತ್ತಮ ಪರಿಹಾರ ಆಗಬಲ್ಲದು ಎಂದರು.ಈ ಸಂದರ್ಭದಲ್ಲಿ `ಆರ್ಯ ದ್ರಾವಿಡ~ ನಾಟಕದ ನಿರ್ದೇಶಕ ಗಿರೀಶ್ ಮಾಚಹಳ್ಳಿ ಅವರು ನಾಟಕದ ಸಿದ್ಧತೆಗಳು, ಸ್ವರೂಪ ಕುರಿತು ದೇಜಗೌ ಅವರಿಗೆ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.