`ಮಾತಾಡುತ್ತಲೇ ಕೇಳುಗರ ಮನಸನ್ನಾವರಿಸಿಕೊಳ್ಳುವ, ಯಾರದ್ದೋ ಹೃದಯದಲ್ಲಿ ಖುಷಿ ಬಿತ್ತುವ ವೃತ್ತಿ ನನ್ನದು. ಖಂಡಿತವಾಗಿಯೂ ನನ್ನಲ್ಲಿನ ವಾಚಾಳಿತನ ಪಕ್ವಗೊಂಡು ಅದೇ ಅನ್ನ ಹುಟ್ಟಿಸುತ್ತೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ಅನ್ನ ಮಾತ್ರವಲ್ಲ, ಆತ್ಮ ತೃಪ್ತಿ, ನಿಸ್ವಾರ್ಥ ಪ್ರೀತಿ...

ಆರ್ಜೆ ವೃತ್ತಿ ನನಗೆಲ್ಲವನ್ನೂ ಕೊಟ್ಟಿದೆ. ನನ್ನಲ್ಲಿ ನಾನೇ ಮಾತಾಡಿಕೊಳ್ಳುವಂತಹ ಏಕಾಂತದ ಗಳಿಗೆಯಲ್ಲಿ ತಾನೇ ತಾನಾಗಿ ಅಂಟಿಕೊಂಡ ಕನಸು ಈ ಬದುಕಿಗೆ ಎಂತೆಂತಹ ಅನುಭವ, ಅವಕಾಶ ದಕ್ಕಿಸಿಕೊಟ್ಟಿತಲ್ಲಾ ಅಂತ ಆಶ್ಚರ್ಯವಾಗುತ್ತದೆ...

ಅಜ್ಜಿ ತಾತನ ಅಕ್ಕರೆಯಲ್ಲಿಯೇ ನನ್ನ ಬಾಲ್ಯದ ನೆನಪುಗಳು ತೊಯ್ದಂತಿವೆ. ಏರ್ಪೋರ್ಟ್ ರಸ್ತೆಯಲ್ಲಿರುವ ಎಚ್.ಎ.ಎಲ್ ಕ್ವಾಟ್ರರ್ಸ್ನಲ್ಲಿ ತಂದೆ ತಾಯಿ ಇದ್ದರೂ ನನಗೆ ಬಸವನಗುಡಿಯಲ್ಲಿದ್ದ ಅಜ್ಜಿ ತಾತನ ಜೊತೆಯೇ ಆಪ್ತವಾಗಿತ್ತು. ಸಂಪ್ರದಾಯಸ್ಥ ಕುಟುಂಬದ ಅಜ್ಜ ಅಜ್ಜಿಯ ಬಳಿ ಸ್ವಚ್ಛಂದವಾಗಿ ಬೆಳೆದಿದ್ದೆ.

ಅಜ್ಜ ಅಜ್ಜಿಯ ಮುದ್ದಿನ ಕಾರಣದಿಂದ ತೊದಲುನುಡಿ ಕಲಿತ ಕ್ಷಣದಿಂದಲೂ ವಿಪರೀತ ವಾಚಾಳಿಯಾಗಿದ್ದೆ. ಸಂಗೀತ, ನೃತ್ಯ, ಕಾರ್ಯಕ್ರಮ ನಿರೂಪಣೆಯಲ್ಲಿ ನಾನೇ ಮಿಂಚುತ್ತಿದ್ದೆ. ಕ್ರೀಡೆಯಲ್ಲಿಯೂ ನಾನೇ ಫಸ್ಟ್. ಅದೆಲ್ಲದರ ನಡುವೆ ತಲೆಹರಟೆಗೂ ಫೇಮಸ್ಸಾಗಿದ್ದೆ. ತರಗತಿ ವೇಳೆ ಮಾತಾಡಿದ್ದಕ್ಕೆ ಎಷ್ಟು ಬಾರಿ ಹೊರದಬ್ಬಿಸಿಕೊಂಡಿದ್ದೆನೋ!

ಆದರೂ ನನ್ನ ಬಾಯಿ ಹತೋಟಿಗೆ ತರಲಾಗದ ಟೀಚರ್ಸ್ ಕ್ಲಾಸಿಗೆ ನನ್ನನ್ನೇ ಲೀಡರ್ ಮಾಡಿದರೆ ಅದರಿಂದಲಾದರೂ ಮಾತು ಕಮ್ಮಿ ಮಾಡಬಹುದು ಅನ್ನೋ ಪ್ಲಾನು ಮಾಡಿದ್ದರು. ಅದೂ ವರ್ಕೌಟ್ ಆಗಲಿಲ್ಲ. ಎಲ್ಲರಿಗೂ ಒಂದು ಕನಸು ಅಂತಿರುತ್ತಲ್ಲಾ? ನಾನು ಡಾಕ್ಟರ್ ಆಗಬೇಕು ಅಂತ ಆಸೆ ಹೊಂದಿದ್ದೆ. ಆದರೆ ಬದುಕು ಬೇರೆಯದೇ ದಿಕ್ಕಿನತ್ತ ಕೈ ಹಿಡಿದು ನಡೆಸಲಾರಂಭಿಸಿತ್ತು. ಡಿಪ್ಲೊಮಾ ಮೊದಲ ವರ್ಷದಲ್ಲಿದ್ದಾಗಿನಿಂದಲೂ ಅದೇನೋ ಗೊತ್ತಿಲ್ಲ, ರೇಡಿಯೊ ಅಂದರೆ ಕ್ರೇಜ್ ಶುರುವಾಗಿತ್ತು.

ಹಾಗೆ ರೇಡಿಯೊ ಕೇಳ್ತಾ ಕೇಳ್ತಾ ನಾನೂ ಸಹ ರೇಡಿಯೊದಲ್ಲಿ ಮಾತಾಡಬೇಕು ಅನ್ನೋ ಬಯಕೆಯಾಗ್ತಾ ಇತ್ತು. ಬಹಳಷ್ಟು ರೇಡಿಯೊಗಳಿಗೆ ಆಡಿಷನ್ಗೂ ಹೋಗ್ತಾ ಇದ್ದೆ. ಈ ಹಂತದಲ್ಲಿಯೇ ರೇಡಿಯೊ ಸಿಟಿಯ ಮುಖ್ಯಸ್ಥರೊಬ್ಬರು ಪರಿಚಯವಾಗಿದ್ದರು. ಅದೇ ಸಮಯಕ್ಕೆ ರೇಡಿಯೊ ಸಿಟಿಯ ಆರ್.ಜೆ. ಒಬ್ಬರು ಕೆಲಸ ಬಿಡುವ ಸೂಚನೆ ಸಿಕ್ಕಿತು.

`ಆಡಿಷನ್ಗೆ ಬನ್ನಿ' ಎಂಬ ಆಹ್ವಾನ ಬಂತು. ರೇಡಿಯೊ ಸಿಟಿ ಕಚೇರಿಗೆ ಹೋಗಿ ಆಡಿಷನ್ ಕೊಟ್ಟು ಬಂದೆ. ನಂತರ ಆ ಕಡೆಯಿಂದ ಕರೆ ಬರಬಹುದೆಂದು ಸುಮಾರು ಹತ್ತು ದಿನ ಕಾದೆ. ಆದರೆ ಯಾವುದೇ ಸೂಚನೆ ಬರಲಿಲ್ಲ. ಮತ್ತೊಮ್ಮೆ ಹಳೆಯ ನಿರಾಸೆ. ಜೂನ್ 2, 2009. ಡಿಪ್ಲೊಮಾ ದ್ವಿತೀಯ ವರ್ಷದ ಪರೀಕ್ಷೆ ಮುಗಿಸಿ ಫ್ರೆಂಡ್ಸ್ ಜೊತೆ ಕ್ಯಾಂಟೀನ್ನಲ್ಲಿ ಕೂತಿದ್ದೆ. ಆಗ ರೇಡಿಯೊ ಸಿಟಿಯಿಂದ ಕರೆ ಬಂತು. `ನೀವು ನಾಳೆಯಿಂದ ಕೆಲಸಕ್ಕೆ ಸೇರಲು ಆಗುತ್ತದೆಯಾ' ಅಂತ ಕೇಳಿದರು.

ನನಗೆ ಒಂದು ಕ್ಷಣ ಸ್ವರ್ಗವೇ ಬೊಗಸೆಗೆ ಬಂದು ಬಿದ್ದಂತೆ ಖುಷಿಯಾಗಿತ್ತು. ಆದರೆ ಅಲ್ಲಿ ನನಗೆ ಸಿಕ್ಕಿರುವುದು ಆರ್.ಜೆ. ಕೆಲಸವೋ ಅಥವಾ ಇನ್ಯಾವುದೋ ಕೆಲಸವೋ ಅನ್ನೋದೂ ಸರಿಯಾಗಿ ಗೊತ್ತಿರಲಿಲ್ಲ. ಮೊದಲ ದಿನ ಉತ್ಸಾಹದಿಂದ ಹೋದೆನಾದರೂ ನನಗೆ ಕೆಲಸ ಏನೆಂದು ಗೊತ್ತಿರಲಿಲ್ಲ. ಆ ದಿನವಿಡೀ ಆತಂಕದಲ್ಲೇ ಕಳೆದಿದ್ದೆ. ಎರಡನೇ ದಿನವಷ್ಟೇ ಗೊತ್ತಾಗಿದ್ದು ನನಗೆ ಸಿಕ್ಕಿರೋದು ಆರ್.ಜೆ. ಕೆಲಸ ಎಂಬ ವಿಚಾರ!

ಮೈಕ್ ಆನ್ ಮಾಡದೆ ಮಾತಾಡಿದೆ!
ಆರಂಭದ ಎರಡು ದಿನ ಸಹಾಯ ಮಾಡಲು ಜೊತೆಗೊಬ್ಬರು ಇದ್ದರು. ಆದರೆ ಮೂರನೇ ದಿನ ನಾನೊಬ್ಬಳೇ ಮಾತಾಡಬೇಕಿತ್ತು. ಮೈಕಿನ ಮುಂದೆ ನಿಂತು ಬಡಬಡ ಮಾತಾಡಿದೆ. ಸ್ವಲ್ಪ ಹೊತ್ತಾದ ಮೇಲೆ ಗೊತ್ತಾಯ್ತು... ನಾನು ಅಷ್ಟೂ ಹೊತ್ತು ಮೈಕ್ ಆನ್ ಮಾಡದೆಯೇ ಮಾತಾಡಿದ್ದೆ ಎಂದು! ನಾನು ಮಾತನಾಡಿದ್ದು ಯಾವುದೂ ರೇಡಿಯೊದಲ್ಲಿ ಬಂದಿರಲೇ ಇಲ್ಲ. ಹೊಸಬಳಾದ ಕಾರಣ ನನ್ನನ್ನು ಎಲ್ಲರೂ ಕ್ಷಮಿಸಿದ್ದರು.

ರೇಡಿಯೊ ಜಾಕಿಯಾಗಿ ಈಗ ಐದು ವರ್ಷಗಳಾಗಿವೆ. ಮೊದಮೊದಲು ದಿನಕ್ಕೆ ಎರಡೆರಡು ಶೋ ಮಾಡಬೇಕಿದ್ದರಿಂದ ತುಂಬಾ ಕಷ್ಟ ಅನ್ನಿಸೋದು. ಬರಬರುತ್ತಾ ವೃತ್ತಿಗೆ ನಾನೇ ಹೊಂದಿಕೊಂಡೆ. ನಾವು ತುಂಬಾ ಇಷ್ಟಪಟ್ಟ ಕೆಲಸವನ್ನು ಮಾಡಿದರೆ ಅದರಲ್ಲಿ ಕಷ್ಟ ಇರೋದಿಲ್ಲ ಅಂತ ನನ್ನ ಭಾವನೆ.

ನಾನು ಸ್ಪಷ್ಟವಾಗಿ ಕನ್ನಡ ಮಾತಾಡೋದು ಮತ್ತು ನನ್ನಲ್ಲಿನ ಹಾಸ್ಯಪ್ರಜ್ಞೆ ಜನರಿಗೆ ಇಷ್ಟ ಆಗಿದೆ ಅಂದುಕೊಂಡಿದ್ದೇನೆ. ಬೆಳಗ್ಗೆ ಐದರಿಂದ ಆರರವರೆಗೆ ಶುಭೋದಯ ಅನ್ನೋ ಕಾರ್ಯಕ್ರಮ ಪ್ರಸಾರವಾಗುತ್ತದೆ. ದೇವರು, ಭಕ್ತಿಗೀತೆಗಳು, ದೇವಸ್ಥಾನಗಳು, ನಮ್ಮ ಪುರಾತನ ಪದ್ಧತಿ, ಪುರಾಣಗಳ ಕುರಿತಾದ ಈ ಕಾರ್ಯಕ್ರಮದಲ್ಲಿ ನಾನು ಒಂದೇ ಒಂದು ಆಂಗ್ಲ ಪದವನ್ನೂ ಬಳಸುವುದಿಲ್ಲ. ಅಚ್ಚ ಕನ್ನಡದಲ್ಲಿ ಮಾತಾಡುವುದು ಮಾತ್ರವಲ್ಲ, ಕಂಗ್ಲಿಷ್ನಲ್ಲಿ ಮಾತಾಡಿದರೂ ಅದರಲ್ಲಿ ನನ್ನ ಉಚ್ಚಾರ ತುಂಬಾ ಇಷ್ಟವಾಗಿದೆ ಅಂತ ಜನ ಹೇಳ್ತಾರೆ.

ಹೀಗೆ ಮಾತಾಡುತ್ತಲೇ ಆದ ಮರೆಯಲಾರದ ಅನುಭವಗಳೂ ಸಾಕಷ್ಟಿವೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಭೇಟಿಯಾದಾಗ `ನಿನ್ನ ಕಾರ್ಯಕ್ರಮ ಕೇಳಿದೀನಿ' ಅಂದ್ರು. ಒಮ್ಮೆ ನ್ಯಾಷನಲ್ ಕಾಲೇಜ್ ಆಡಿಟೋರಿಯಮ್ನಲ್ಲಿ ಸ್ವತಃ ಎಸ್.ಪಿ.ಬಿ. ಅವರಿಂದಲೇ ಸನ್ಮಾನ ಮಾಡಿಸಿಕೊಂಡಿದ್ದು ನನ್ನ ಜೀವನದ ಅವಿಸ್ಮರಣೀಯ ಗಳಿಗೆ. ಒಮ್ಮೆ ನನ್ನ ಸಹಪಾಠಿ ಆರ್.ಜೆ. ಪ್ರದೀಪ್, ಇನ್ಫೋಸಿಸ್ನ ಸುಧಾ ಮೂರ್ತಿ ಅವರೊಟ್ಟಿಗೆ ಮಾತಾಡುವಾಗ `ಬೆಳಗ್ಗೆ ಸೌಜನ್ಯ ಪ್ರೋಗ್ರಾಂ ಕೇಳ್ತಾ ಕೇಳ್ತಾ ನನ್ನ ಕೆಲಸಗಳನ್ನು ಆರಂಭಿಸುತ್ತೇನೆ. ತುಂಬಾ ಚೆನ್ನಾಗಿದೆ ಕಾರ್ಯಕ್ರಮ' ಅಂತ ಹೇಳಿದ್ದರು. ಇವೆರಡೂ ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳು.

ಮಾತು ಕೇಳುತ್ತಲೇ ಮನೆ ಮಗಳ ಸ್ಥಾನ ಕೊಟ್ಟು ಪ್ರೀತಿಸುವವರೂ ಇದ್ದಾರೆ. ಚಾಮರಾಜಪೇಟೆಯ ಅಜ್ಜಿಯೊಬ್ಬರು ರೇಡಿಯೊದಲ್ಲಿ ನನ್ನ ಮಾತು ಕೇಳಿಯೇ ನನ್ನನ್ನು ಮೆಚ್ಚಿಕೊಂಡಿದ್ದರು. ಅವರು ಅದು ಹೇಗೋ ನಮ್ಮ ಕಚೇರಿಯವರ ಬಳಿ ನನ್ನನ್ನು ನೋಡಬೇಕು ಎಂದು ಹೇಳಿಕಳುಹಿಸಿದ್ದರು. ಆ ಅಜ್ಜಿಗೆ ಕ್ಯಾನ್ಸರ್ ಕಾಯಿಲೆಯಿತ್ತು. ಆ ಯಾತನೆಯ ನಡುವೆಯೂ ಬೆಳಗ್ಗೆ ಅಲಾರಂ ಇಟ್ಟುಕೊಂಡು ಎದ್ದು ನನ್ನ ಕಾರ್ಯಕ್ರಮ ಕೇಳುತ್ತಿದ್ದರಂತೆ.

ನನಗೂ ಅವರನ್ನೊಮ್ಮೆ ನೋಡಬೇಕೆನಿಸಿತ್ತು. ಆ ದಿನ ಅವರೆದುರು ನಿಂತಾಗ ಖುಷಿಗೊಂಡ ಅಜ್ಜಿ `ನನಗೆ ನಿನ್ನಂಥ ಮೊಮ್ಮಗಳಿರಬೇಕಿತ್ತು. ಇನ್ನು ನಾನು ಸತ್ತರೂ ಪರವಾಗಿಲ್ಲ' ಎಂದರು. ಆಡುವ ಮಾತಿಗೆ, ಕೇಳುಗರ ಅಭಿಮಾನಕ್ಕೆ ಮತ್ತು ಅದರಿಂದಲೇ ರೂಪುಗೊಂಡ ಬದುಕಿಗೆ ಯಾವ ಕೊರತೆಯೂ ಕಾಡಿಲ್ಲ. ಅದೇ ರೀತಿ ಕನಸುಗಳಿಗೂ ಕೊರತೆಯಿಲ್ಲ.

ಹಿನ್ನೆಲೆ ಗಾಯಕಿ ಆಗಬೇಕೆಂಬ ಕನಸೂ ಇತ್ತು. ಹತ್ತು ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿದ್ದೀನಿ. ಮುಂದೆ ಎಂದಾದರೂ ಗಾಯಕಿಯಾಗೇ ಆಗ್ತೀನಿ. ನಮ್ಮ ಕನಸುಗಳಿಂದ ಕಾಡಿಸಿಕೊಳ್ಳುತ್ತಲೇ ಬೇರೆಯವರಲ್ಲಿಯೂ ಕನಸು ಬಿತ್ತುವ ಅವಕಾಶ ನನ್ನ ವೃತ್ತಿಗಿದೆ. ಆದರೂ ಕೆಲವೊಮ್ಮೆ ಇವತ್ತು ಮೂಡ್ ಸರಿ ಇರಲಿಲ್ಲ, ಅಂಥಾ ಚೆನ್ನಾಗಿ ಪ್ರೋಗ್ರಾಂ ನಡೆಸಿಕೊಡಲು ಆಗಲೇ ಇಲ್ಲ ಅನ್ನಿಸಿದ್ದಿದೆ.

ಆದರೆ ಅದು ಕೇಳುಗರಿಗೆ ಗೊತ್ತಾಗಿರುವುದಿಲ್ಲ. ನಮಗೆ ಎಷ್ಟೇ ಸಮಸ್ಯೆ ಇದ್ದರೂ `ಆನ್ ಏರ್'ನಲ್ಲಿ ಗೊತ್ತಾಗದಂತೆ ಮಾತಾಡುವುದೇ ದೊಡ್ಡ ಸವಾಲು. ಆದರೂ ಪ್ರತೀ ದಿನದ ಕೆಲಸವೂ ತುಂಬಾ ತುಂಬಾ ಖುಷಿ ಕೊಡುತ್ತೆ. ನನ್ನ ಲೈಫಲ್ಲಿ ಪ್ಯಾಥೋ ಮೂಡಿನ ಯಾವ ಕಥೆಗಳೂ ಇಲ್ಲ. ನಾನು ಕೆಲಸಕ್ಕೆ ಸೇರಿದ ಮೇಲೆ ನಾನು ಓಡಾಡುವ ಖರ್ಚಿನಿಂದ ಹಿಡಿದು ನಾನು ಬಳಸುವ ಕರ್ಚೀಫಿನ ವರೆಗೆ ಒಂದೇ ಒಂದು ರೂಪಾಯಿಯನ್ನೂ ನನ್ನ ಪೋಷಕರಿಂದ ಪಡೆದಿಲ್ಲ.

ನನಗೆ ಬೇಕಿರುವ ಪ್ರತಿಯೊಂದು ವಸ್ತುವನ್ನೂ ನನ್ನ ಸ್ವಂತ ಹಣದಲ್ಲೇ ಕೊಂಡುಕೊಳ್ಳುತ್ತೇನೆ. ಮನೆಯ ಬಾಡಿಗೆಯಿಂದ ಹಿಡಿದು ವಿದ್ಯುತ್/ನೀರಿನ ಬಿಲ್ ತನಕ ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ. ಎಲ್ಲೂ ದುಂದು ವೆಚ್ಚ ಮಾಡುವುದಿಲ್ಲ. ಒಂದು ದಿನ ನನ್ನ ಮಾತೆಲ್ಲ ಖಾಲಿಯಾಗಿ ಬಿಟ್ಟರೆ ಗತಿಯೇನು ಅನ್ನೋ ಭಯ ಕೆಲವೊಮ್ಮೆ ಕಾಡುತ್ತದೆ.

ಆದರೆ ನನ್ನೊಳಗಿನ ಮಾತು ಯಾವತ್ತಿಗೂ ಖಾಲಿ ಆಗುವುದಿಲ್ಲ ಎಂಬ ಭರವಸೆಯನ್ನು ನನ್ನ ಮನಸ್ಸು ನನಗೆ ಕೊಡುತ್ತದೆ. ಆದರೂ ನನ್ನ ಮಾತು ಎಂದಾದರೂ ಕೇಳುಗರಿಗೆ ಏಕತಾನತೆ ಅನ್ನಿಸಿದರೆ? ಬಹುಶಃ ಹಾಗನ್ನಿಸಿದ ದಿನ ನನ್ನ ಜಾಗದಲ್ಲಿ ಬೇರೊಬ್ಬರು ಮಾತಾಡುತ್ತಿರುತ್ತಾರೆ ಅಷ್ಟೇ.
ನಿರೂಪಣೆ: ರಮ್ಯಶ್ರೀ ಬಿ.ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.