ಮುಂದಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶಕ್ಕೆ ಆರ್.ಟಿ.ಇ. ಕಾಯ್ದೆಯ ಅನ್ವಯ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಯಾವ ಮಕ್ಕಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಗೇಟಿನ ಒಳಗೂ ಪ್ರವೇಶವಿರಲಿಲ್ಲವೋ ಅಂತಹ ಬಡ ಮಕ್ಕಳು ಈ ಕಾನೂನಿನ ಕಾರಣದಿಂದ ಅದೇ ಶಾಲೆಗಳ ತರಗತಿ ಕೊಠಡಿಗಳ ಒಳಗೆ ಶ್ರೀಮಂತರ ಮಕ್ಕಳ ಜೊತೆಗೆ ಪಾಠ ಕೇಳುವ ಅವಕಾಶ ಪಡೆದಿದ್ದಾರೆ. ಆದರೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲಗಳು ಮುಂದುವರಿದಿವೆ. ಕೆಲವು ಖಾಸಗಿ ಶಾಲೆಗಳ ಆಡಳಿತ
ಮಂಡಳಿ ಕಣ್ಣು ಕೆಂಪಾಗಿದೆ. ಪ್ರವೇಶ ನಿರಾಕರಿಸಲು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇದ್ದಾರೆ.

ನಮ್ಮ ಸಮಾಜದಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾದ ಬಡ ಹಾಗೂ ತಳ ಸಮುದಾಯದ ಜನರ ಬಾಳಿನಲ್ಲಿ ಈ ಕಾನೂನು ಹೊಸ ಹುರುಪನ್ನು ಉಂಟುಮಾಡಿರುವುದರಲ್ಲಿ ಅನುಮಾನವಿಲ್ಲ. ಈಗಿನ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಎಷ್ಟೇ ಸೌಲಭ್ಯ ನೀಡಿದ್ದರೂ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಅವು ಕಡಿಮೆಯೇ. ಹೆಚ್ಚು ಡೊನೇಷನ್ ಕೊಟ್ಟು ಇಂತಹ ಶಾಲೆಗಳಲ್ಲಿ ಓದುವ ಅವಕಾಶ ಎಲ್ಲರಿಗೂ ಸಿಗಲಾರದು. ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಂಡ ಪರಿಣಾಮವಾಗಿ ಬಡವರ್ಗದ ವಿದ್ಯಾರ್ಥಿಗಳೂ ಖಾಸಗಿ ಶಾಲೆಗಳಲ್ಲಿ ಕಲಿಯುವ ಅವಕಾಶ ಒದಗಿಬಂತು.

ಶಾಲೆಯೊಂದರಲ್ಲಿ ಲಭ್ಯವಿರುವ ಶೇಕಡ 25ರಷ್ಟು ಸೀಟಿಗಿಂತ ಹೆಚ್ಚಿನ ಪ್ರಮಾಣದ ಅರ್ಜಿಗಳು ಬರಲಾರಂಭಿಸಿದಾಗ ಶಿಕ್ಷಣ ಇಲಾಖೆಗೆ ಆಯ್ಕೆ ಪ್ರಕ್ರಿಯೆ ಸವಾಲಿನದ್ದಾಯಿತು. ಈ ಸಮಸ್ಯೆ ಬಗೆಹರಿಸಲು ಇಲಾಖೆ ಕಂಡುಕೊಂಡ ಸುಲಭದ ಮಾರ್ಗ ಎಂದರೆ ವಿದ್ಯಾರ್ಥಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಅದನ್ನು ಎತ್ತುವ ಮೂಲಕ ಆಯ್ಕೆ ಮಾಡುವುದು. ಮೇಲ್ನೋಟಕ್ಕೆ ಈ ಚೀಟಿ ಎತ್ತಿ ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿ ಕಾಣಬಹುದು. ಆದರೆ ಈ ಆಯ್ಕೆ ಪ್ರಕ್ರಿಯೆ ಸಾಮಾಜಿಕ ನ್ಯಾಯ ತತ್ವಕ್ಕೆ ಬದ್ಧವಾಗಿಲ್ಲ ಎಂಬುದನ್ನು ಅರಿಯಬೇಕು.

ಈಗ ತಾನೆ ಶಾಲೆಯ ಮೆಟ್ಟಿಲು ಹತ್ತಲು ಹೊರಟ ಮಗುವನ್ನು, ಮಗುವಿನ ಭವಿಷ್ಯವನ್ನು ಮತ್ತು ಅದರ ಮನಸ್ಸನ್ನು ಅದೃಷ್ಟದ ಆಟಕ್ಕೆ ಒಡ್ಡುವುದು ಮಾನವೀಯ ಪ್ರಕ್ರಿಯೆಯೂ ಅಲ್ಲ. ಯಾವುದು ಅದೃಷ್ಟ, ಯಾವುದು ದುರದೃಷ್ಟ, ಯಾವುದು ಪೂರ್ವಾರ್ಜಿತ ಪುಣ್ಯ, ಯಾವುದು ಪಾಪದ ಫಲ ಎಂಬುದರ ಕಿಂಚಿತ್ತೂ ಅರಿವಿರದ ಮಗುವಿನ ಭವಿಷ್ಯವನ್ನು ಅದೃಷ್ಟ ಚೀಟಿಯ ಮೂಲಕ ಬರೆಯ ಹೊರಟದ್ದು ಅಮಾನವೀಯ ಪ್ರಕ್ರಿಯೆಯಲ್ಲವೇ? ಮೂಢನಂಬಿಕೆಯನ್ನು ಪ್ರತಿಬಂಧಿಸ ಹೊರಟ ನಮಗೆ ಅದೃಷ್ಟ ಚೀಟಿಯ ಮೂಲಕ ನಡೆಸುವ ಆಯ್ಕೆ ಕ್ರಮದ ಹಿಂದಿನ ನಂಬಿಕೆ ಮೌಢ್ಯವಾಗಿ ಕಾಣುವುದಿಲ್ಲವೇ? ಇದೇ ವಿಷಯಯನ್ನು ಇನ್ನೊಂದು ನೆಲೆಯಿಂದ ನೋಡುವುದಾದರೆ ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿ ಬಡತನವನ್ನು ಕರ್ಮ ಸಿದ್ಧಾಂತದ ಅಡಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ.

ಈ ಜನ್ಮದ ಪ್ರತಿಯೊಂದು ಸ್ಥಿತಿಯೂ ಹಿಂದಿನ ಜನ್ಮಗಳ ಪುಣ್ಯದ ಅಥವಾ ಪಾಪಗಳ ಫಲವೆಂದೇ ಭಾವಿಸಲಾಗುತ್ತದೆ. ಅಂದರೆ ಶ್ರೀಮಂತಿಕೆಯು ಈ ಹಿಂದಿನ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಂದ ದತ್ತವಾದುದಾದರೆ, ಬಡತನ ಹಿಂದಿನ ಜನ್ಮದ ಕೆಡುಕಿನಿಂದ ಪಡೆದ ಶಾಪ ಎಂಬ ಭಾವನೆ ಬಲವಾಗಿದೆ. ಇಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯೊಳಗೆ ಸರ್ಕಾರಕ್ಕೆ ತಾನು ನಡೆಸುವ ಪ್ರತಿಯೊಂದು ಆಯ್ಕೆಯೂ ವೈಜ್ಞಾನಿಕ ಮಾನದಂಡದಿಂದಲೇ ಆಗಿದೆ ಎಂಬುದನ್ನು ತೋರಿಸುವ ಜವಾಬ್ದಾರಿ ಇದೆ. ಆದರೆ ಚೀಟಿ ಎತ್ತಿ ಆಯ್ಕೆ ಮಾಡುವ ವಿಧಾನ ಬಡವನ ಅದೃಷ್ಟ ಹೀನತೆಯ ಪಾಪ ಪ್ರಜ್ಞೆಯನ್ನು ಇನ್ನಷ್ಟು ಬಲಗೊಳಿಸಬಹುದು. ಯಾಕೆಂದರೆ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಯಾರು ಹೆಚ್ಚು ಬಡವರು? ಯಾರು ಕಡಿಮೆ ಬಡತನ ಹೊಂದಿದವರು ಎಂಬುದು ಮಾನದಂಡವಲ್ಲ.

ಒಬ್ಬ ವ್ಯಕ್ತಿಯ ಆದಾಯ ರೂ. 2.5 ಲಕ್ಷವಾಗಿದ್ದರೆ ಆತನು ರೂ. 1 ಲಕ್ಷ ಆದಾಯ ಹೊಂದಿದ ವ್ಯಕ್ತಿಗಿಂತ ಕಡಿಮೆ ಬಡತನ ಹೊಂದಿರುವಾತ ಎಂದೇ ಅರ್ಥ. ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ಹೆಚ್ಚು ಬಡತನ ಹೊಂದಿದವರಿಗೆ ನೀಡುವುದಾದರೆ ರೂ. 1 ಲಕ್ಷ ಆದಾಯ ಹೊಂದಿದ ವ್ಯಕ್ತಿಗೆ ಸೀಟು ಲಭಿಸಬೇಕು. ಅರ್ಹತೆಯ ಹಿನ್ನೆಲೆಯಿಂದ ನೋಡುವುದಾದರೆ ಇಲ್ಲಿ ಬಡತನವೇ ಅರ್ಹತೆ. ಹೆಚ್ಚು ಬಡತನ ಹೊಂದಿದ ವ್ಯಕ್ತಿಯೇ ಹೆಚ್ಚು ಅರ್ಹ.

ಅದು ಸಾಮಾಜಿಕ ನ್ಯಾಯ ಕೂಡ ಹೌದು. ಆದರೆ ಚೀಟಿ ಎತ್ತಿ ಆಯ್ಕೆ ಮಾಡುವಾಗ ಇಲ್ಲಿ ಎಲ್ಲರಿಗೂ ಒಂದೇ ಪ್ರಾಶಸ್ತ್ಯ. ಈ ಅದೃಷ್ಟದಾಟದಲ್ಲಿ ರೂ. 2.5 ಲಕ್ಷ ಆದಾಯದ ವ್ಯಕ್ತಿಗೆ ಸೀಟು ಲಭಿಸಿದರೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಅನ್ಯಾಯವಾದುದು ಬಡವನಿಗೆ. ಯಾಕೆಂದರೆ ರೂ. 2.5 ಲಕ್ಷ ಆದಾಯದ ವ್ಯಕ್ತಿ ಪ್ರಯತ್ನಿಸಿದರೆ ರೂ. 1 ಲಕ್ಷ ಆದಾಯದ ವ್ಯಕ್ತಿಗಿಂತ ಹೆಚ್ಚು ಸುಲಭದಲ್ಲಿ ತನ್ನ ಮಗುವಿಗೆ ಪ್ರವೇಶ ಕೊಡಿಸಬಹುದು. ಈ ಹಿನ್ನೆಲೆಯಿಂದ ನೋಡಿದಾಗ ಈ ಆಯ್ಕೆ ಪ್ರಕ್ರಿಯೆ ಅವೈಜ್ಞಾನಿಕ ಎಂದೇ ಭಾವಿಸಬೇಕು.

ಚೀಟಿ ಎತ್ತುವ ಪ್ರಕ್ರಿಯೆಯ ಪಾರದರ್ಶಕತೆಯೂ ಪ್ರಶ್ನಾರ್ಹ. ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಪೂರ್ವಗ್ರಹ ಪೀಡಿತರಾಗಿದ್ದರೆ ಇಲಾಖೆಯ ಜೊತೆ ಸೇರಿಕೊಂಡೆ ಅವ್ಯವಹಾರ ನಡೆಸಬಹುದು. ಅರ್ಜಿ ಹಾಕಿದ ವಿದ್ಯಾರ್ಥಿಗಳ ಹೆಸರನ್ನು ಶಾಲೆಯವರೇ ಚೀಟಿಯಲ್ಲಿ ಬರೆದು ಪೆಟ್ಟಿಗೆಯಲ್ಲಿ ಹಾಕುವುದರಿಂದ ತಾವು ಆಯ್ಕೆ ಮಾಡಲೇ ಬೇಕು ಎಂದು ತೀರ್ಮಾನಿಸಿದ ಒಬ್ಬೊಬ್ಬ ವಿದ್ಯಾರ್ಥಿಯ ಹೆಸರನ್ನು ನಾಲ್ಕಾರು ಸಲ ಚೀಟಿಗಳಲ್ಲಿ ಬರೆದು ಹಾಕಿದ್ದರೆ ಅಂತಹ ವಿದ್ಯಾರ್ಥಿಯ ಆಯ್ಕೆ ಸಲೀಸು. ಆಯ್ಕೆ ಮಾಡಲೇಬಾರದೆಂದು ತೀರ್ಮಾನಿಸಿದ ಹೆಸರುಗಳನ್ನು ಚೀಟಿಯಲ್ಲಿ ಹಾಕಿರದಿದ್ದರೆ? ಯಾಕೆಂದರೆ ಅಲ್ಲಿ ಆಯ್ಕೆಯಾಗದೇ ಉಳಿದ ವಿದ್ಯಾರ್ಥಿಗಳ ಹೆಸರು ಅಲ್ಲಿನ ಚೀಟಿಗಳಲ್ಲಿ ಇದೆಯೇ ಎಂಬುದನ್ನು ತೋರಿಸುವ ವ್ಯವಸ್ಥೆ ಇಲ್ಲ.

ಆಯ್ಕೆ ಪ್ರಕ್ರಿಯೆಯಲ್ಲಿ ಬಾಲಕ-ಬಾಲಕಿಯರಿಗೆ ಸಮಾನ ಪ್ರಾತಿನಿಧ್ಯ ಸಿಗುವುದಿಲ್ಲ. ಸ್ತ್ರೀ ಶಿಕ್ಷಣದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲೂ ಚೀಟಿಯಾಟದಲ್ಲಿ ತಕ್ಕ ಪ್ರಾತಿನಿಧ್ಯ ಸಿಗದಿರಬಹುದು. ವೈಜ್ಞಾನಿಕ ಆಯ್ಕೆ ಪ್ರಕ್ರಿಯೆಯಲ್ಲಿ ಒಂದು ಮಗು ತನಗೆ ಸೀಟು ಸಿಗದಿದ್ದರೆ, ತನಗಿಂತ ಹೆಚ್ಚು ಅರ್ಹರಿಗೆ ಸೀಟು ಸಿಕ್ಕಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ‘ಚೀಟಿ’ ಪ್ರಕ್ರಿಯೆಯಲ್ಲಿ ಸೀಟು ವಂಚಿತ ಮಗು ತಾನು ಅದೃಷ್ಟಹೀನ ಎಂದು ತನ್ನನ್ನೇ ಶಪಿಸಿಕೊಂಡರೆ ಯಾರು ಹೊಣೆ? ವೈಜ್ಞಾನಿಕ ಮತಿಯನ್ನು ಬೆಳೆಸಬೇಕಾದ ಶೈಕ್ಷಣಿಕ ಪ್ರಕ್ರಿಯೆಯ ಪ್ರವೇಶವೇ ಮಗುವಿನ ಪಾಲಿಗೆ ಅದೃಷ್ಟದಾಟವಾದರೆ ಮುಂದೆ ಆ ಮಗು ಎಂತಹ ಮನಸ್ಥಿತಿ ರೂಪಿಸಿಕೊಳ್ಳಬಹುದು?

ಈ ಪ್ರಕ್ರಿಯೆಯ ಮೂಲಕ ಸರ್ಕಾರ ಸಮಾಜಕ್ಕೆ ನೀಡಹೊರಟ ಸಂದೇಶ ಏನು? ಬಡವರ ಪಾಲಿಗೆ ವರದಾನವಾಗಿ ಬಂದ ಈ ಕಾನೂನನ್ನು ಕೇವಲ ಕಾಟಾಚಾರಕ್ಕೆ ಜಾರಿಗೊಳಿಸದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ಯೋಚನೆ ಮಾಡಬೇಕಾಗಿದೆ. ಸೀಟು ಆಯ್ಕೆಯ ಪ್ರಕ್ರಿಯೆಯಲ್ಲಿ ಮಗುವಿನ ಅದೃಷ್ಟವನ್ನು ಪರೀಕ್ಷೆಗೊಡ್ಡುವುದಕ್ಕಿಂತ ಅರ್ಹತೆಯೇ ಮಾನದಂಡವಾಗುವಂತೆ ಮಾಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.