ಆರ್‌ಟಿಪಿಎಸ್ ದುರಂತ ಒಬ್ಬನ ಸ್ಥಿತಿ ಗಂಭೀರ

7

ಆರ್‌ಟಿಪಿಎಸ್ ದುರಂತ ಒಬ್ಬನ ಸ್ಥಿತಿ ಗಂಭೀರ

Published:
Updated:

ರಾಯಚೂರು:  ಬುಧವಾರ ಬೆಳಿಗ್ಗೆ 2ನೇ ಘಟಕದ ಬಾಯ್ಲರ್ ಕೆಳಭಾಗದಲ್ಲಿ ಬೂದಿ ಮಿಶ್ರಿತ ಕೆಂಡ ಚಿಮ್ಮಿ ತೀವ್ರವಾಗಿ ಗಾಯಗೊಂಡು ಹೈದರಾಬಾದ್ ಖಾಸಗಿ ಆಸ್ಪತ್ರೆ ಸೇರಿರುವ ಇಬ್ಬರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿಯೇ ಇದೆ.

ಶೇ 90ರಷ್ಟು ಸುಟ್ಟು ಗಾಯಗಳಾಗಿರುವ ಜಿಂದಾವಲಿ ಅವರಿಗೆ ಚಿಕಿತ್ಸೆ ನಿರಂತರ ಮುಂದುವರಿದಿದೆ. 72 ತಾಸು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಸರ್ಜನ್ ಡಾ. ಗಣೇಶ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಶಕ್ತಿನಗರದ ಕೆಪಿಸಿ ಆಸ್ಪತ್ರೆಯ ವೈದ್ಯ ಡಾ.ಧನ್ಯಕುಮಾರ `ಪ್ರಜಾವಾಣಿ~ಗೆ ತಿಳಿಸಿದರು.

ಮತ್ತೊಬ್ಬರಾದ ನರಸಪ್ಪ ಎಂಬುವವರಿಗೆ ಶೇ 30ರಷ್ಟು ಸುಟ್ಟ ಗಾಯಗಳಾಗಿವೆ.

ಶಕ್ತಿನಗರ ಕೆಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಆರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry