ಗುರುವಾರ , ಜನವರಿ 30, 2020
20 °C

ಆಲಮಟ್ಟಿ: ನಗರದ ಯುವಕನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಇಲ್ಲಿಯ ಅಣೆಕಟ್ಟೆ ಮುಂಭಾಗದ ಕೃಷ್ಣಾ ಸೇತುವೆ ಸಮೀಪ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಮಂಗಳವಾರ ಪತ್ತೆಯಾಗಿದೆ.ಮೃತನನ್ನು ಬೆಂಗಳೂರು ಆವಲಹಳ್ಳಿಯ ಪಿ.ಎನ್. ಪ್ರಮೋದ (29) ಎಂದು ಗುರುತಿಸಲಾಗಿದೆ. ಪ್ರಮೋದ ಧರಿಸಿದ್ದ ಪ್ಯಾಂಟ್‌ನಲ್ಲಿ ಗುರುತಿನ ಚೀಟಿಯ ಮೂಲಕ ಹೆಸರು ಪತ್ತೆ ಮಾಡಲಾಗಿದೆ.ರೈಲ್ವೆ ಸೇತುವೆ ಬಳಿ ಶವ ಪತ್ತೆಯಾಗಿದ್ದರಿಂದ ರೈಲಿನಿಂದ ಬಿದ್ದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ನದಿ ದಡದಲ್ಲಿ ತೇಲುತ್ತಿದ್ದ ಶವವನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ.

ಆಲಮಟ್ಟಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)