ಪುಣೆ (ಪಿಟಿಐ): ಐಪಿಎಲ್ನಲ್ಲಿ ಸತತ ಎರಡು ಗೆಲುವು ಲಭಿಸಿರುವುದು ಪುಣೆ ವಾರಿಯರ್ಸ್ ತಂಡದ ನಾಯಕ ಸೌರವ್ ಗಂಗೂಲಿ ಸಂತಸಕ್ಕೆ ಕಾರಣವಾಗಿದೆ. ಆಲ್ರೌಂಡ್ ಪ್ರದರ್ಶನದಿಂದಾಗಿ ಈ ಜಯ ದೊರೆತಿದೆ ಎಂದಿರುವ ಗಂಗೂಲಿ, ಆಟಗಾರರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ವಾರಿಯರ್ಸ್ 22 ರನ್ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಜಯ ಪಡೆದಿತ್ತು. 167 ರನ್ಗಳ ಗುರಿ ಬೆನ್ನಟ್ಟಿದ್ದ ಆ್ಯಡಮ್ ಗಿಲ್ಕ್ರಿಸ್ಟ್ ನೇತೃತ್ವದ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 144 ರನ್ ಮಾತ್ರ ಪೇರಿಸಿತ್ತು.

`ಮೊದಲ 10 ಓವರ್ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದೆವು. ಅದೇ ರೀತಿ ಕೊನೆಯ 10 ಓವರ್ಗಳಲ್ಲಿ ನಮ್ಮ ಬ್ಯಾಟ್ಸ್ಮನ್ಗಳು ಬಿರುಸಿನ ಆಟವಾಡಿದರು. ಚೆಂಡು ತೀರಾ ಕೆಳಮಟ್ಟದಲ್ಲಿ ನುಗ್ಗಿಬರುತ್ತಿದ್ದ ಕಾರಣ ಈ ಪಿಚ್ನಲ್ಲಿ ಬ್ಯಾಟಿಂಗ್ ಸುಲಭವಲ್ಲ. ಆದರೂ 160 ಕ್ಕೂ ಅಧಿಕ ರನ್ ಪೇರಿಸಲು ಯಶಸ್ವಿಯಾದೆವು~ ಎಂದು ಪಂದ್ಯದ ಬಳಿಕ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಸತತ ಎರಡು ಗೆಲುವಿನ ಬಗ್ಗೆ ಕೇಳಿದಾಗ ಅವರು, `ಟೂರ್ನಿಯಲ್ಲಿ ಇನ್ನೂ ಸಾಕಷ್ಟು ಪಂದ್ಯಗಳಿವೆ. ಸಾಗಬೇಕಾದ ಹಾದಿ ಬಹಳಷ್ಟಿದೆ~ ಎಂದ ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.