ಮಂಗಳವಾರ, ಮೇ 24, 2022
28 °C

ಆಸ್ಟಿಯೊಪೊರೋಸಿಸ್: ಅರಿವಿನ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆನ್ನು ಮೂಳೆ ಮುರಿತಕ್ಕೆ ಕಾರಣವಾಗುವ ಆಸ್ಟಿಯೊಪೊರೋಸಿಸ್ ರೋಗ 2013ರ ವೇಳೆಗೆ ದೇಶದ 36 ದಶಲಕ್ಷ ಮಂದಿಯನ್ನು ಬಾಧಿಸಲಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದ್ದು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಕೊರತೆ ಇದೆ~ ಎಂದು ಮಹಾವೀರ್ ಜೈನ್ ಆಸ್ಪತ್ರೆಯ ಬೆನ್ನುಮೂಳೆ ತಜ್ಞ ಡಾ.ಮಹೇಶ್ ಬಿಜ್ಜಾವರ ತಿಳಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು `50 ವರ್ಷ ಮೇಲ್ಪಟ್ಟ ಶೇ.20ರಷ್ಟು ಸ್ತ್ರೀಯರು ಮತ್ತು ಶೇ 10-15ರಷ್ಟು ಪುರುಷರು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿದ್ದಾರೆ. ವಿಶ್ವ ಆಸ್ಟಿಯೊಪೊರೋಸಿಸ್ ಸಪ್ತಾಹದ ಅಂಗವಾಗಿ ಅಖಿಲ ಭಾರತ ಬೆನ್ನುಮೂಳೆ ತಜ್ಞರ ಸಂಘಟನೆ (ಎಎಸ್‌ಎಸ್‌ಐ) ಜನಸಾಮಾನ್ಯರಿಗೆ ಅಧ್ಯಯನದ ಸಾರವನ್ನು ಪ್ರಚುರಪಡಿಸುತ್ತಿದೆ~ ಎಂದರು.ವೈದ್ಯ ಡಾ.ಬಿ.ಎನ್.ಉಪೇಂದ್ರ ಮಾತನಾಡಿ, `ಆಸ್ಟಿೂಪೊರೋಸಿಸ್ ಮೂಳೆಯ ಸಾಂದ್ರತೆ ಕಡಿಮೆ ಮಾಡಿ ಅದನ್ನು ದುರ್ಬಲಗೊಳಿಸುತ್ತದೆ . ಇದರಿಂದ ಪದೇ ಪದೇ ಮೂಳೆ ಮುರಿತ ಉಂಟಾಗುತ್ತದೆ ಅಥವಾ ತೀವ್ರವಾಗಿ ಬಾಗುತ್ತವೆ.  ಮೂಳೆ ಮುರಿತ ಸಂಭವಿಸುವವರೆಗೂ ಯಾವುದೇ ಮುನ್ಸೂಚನೆ ದೊರೆಯುವುದಿಲ್ಲ. ಆದ್ದರಿಂದಲೇ ಇದನ್ನು ಮೌನ ಹಂತಕ ಎಂದು ಪರಿಗಣಿಸಲಾಗಿದೆ~ ಎಂದು ತಿಳಿಸಿದರು.`ದೇಶದ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ನಗರದ ಜನರ ಮೇಲೂ ಇದು ಮಾರಕ ಪರಿಣಾಮ ಬೀರುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ ಇದಕ್ಕೆ ಕಾರಣ~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.