ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿನಿಯ ಹತ್ಯೆ
ಮೆಲ್ಬೋರ್ನ್ (ಪಿಟಿಐ): ಭಾರತೀಯ ಮೂಲದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ನಂತರ ಅವಳನ್ನು ಕೊಂದು, ದೇಹವನ್ನು ಸೂಟ್ಕೇಸ್ ಒಂದರಲ್ಲಿ ಬಚ್ಚಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಇಲ್ಲಿನ ಮೆಡ್ವಾಬ್ಯಾಂಕ್ ಪಾರ್ಕ್ ಬಳಿಯ ನೀರಿನ ಕಾಲುವೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಯುವತಿಯ ಶವ ಬಚ್ಚಿಟ್ಟ ಸೂಟ್ಕೇಸ್ ದೊರೆತಿದೆ ಎಂದು ಸ್ಥಳೀಯ ಪೊಲೀಸರು ನೀಡಿದ್ದಾರೆ.
ಕೊಲೆಯಾದ ಯುವತಿಯನ್ನು ತೊಷಾ ಠಕ್ಕರ್ (24) ಎಂದು ಗುರುತಿಸಲಾಗಿದೆ. ಕೊನೆಯ ಬಾರಿ ಬುಧವಾರ ಅವಳನ್ನು ಕಂಡವರಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯನ್ನು ಕಾಯುತ್ತಿದ್ದು, ವರದಿ ಬಂದ ನಂತರ ಅವಳನ್ನು ಹೇಗೆ ಹತ್ಯೆಮಾಡಲಾಗಿದೆ ಎಂಬುದು ಗೊತ್ತಾಗಬಹುದೆಂದು ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನಿಯಲ್ ಸ್ಟ್ಯಾನಿ ರೆಜಿನಾಲ್ಡ್ (19) ಎಂಬುವವನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.