ಶುಕ್ರವಾರ, ಮೇ 14, 2021
31 °C

ಆಹಾ ಸೇವಂತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾ ಸೇವಂತಿಗೆ

ಆಗಸ್ಟ್ -ಸೆಪ್ಟಂಬರ್ ತಿಂಗಳುಗಳಲ್ಲಿ ಹಬ್ಬಗಳ ಸುಗ್ಗಿ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಮನೆ, ಮನೆಗಳ ಅಂಗಳ, ಹಿತ್ತಲುಗಳಲ್ಲಿ ಸೇವಂತಿಗೆ, ಡೇರೆ ಮತ್ತಿತರ ಮಳೆಗಾಲದ ಹೂವಿನ ಗಿಡಗಳಲ್ಲಿ ಪುಷ್ಪ ಜಾತ್ರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಸಮೀಪದ ಗೋಟಗಾರು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಈಗ ಸೇವಂತಿಗೆಯ ಸುಗ್ಗಿ. ಕೇವಲ ಐದು ಮನೆಗಳ ಪುಟ್ಟ ಊರು ಗೋಟಗಾರು ಬಣ್ಣ ಬಣ್ಣದ ಸೇವಂತಿಗೆ ಹೂಗಳಿಗೆ ಪ್ರಸಿದ್ಧಿ. ಅಲ್ಲಿ ಎಕರೆಗಟ್ಟಲೆ ಭೂಮಿಯಲ್ಲಿ ಸೇವಂತಿಗೆ ಬೆಳೆದಿರಬಹುದು ಎಂದು ಊಹಿಸಬೇಡಿ. ಅಲ್ಲಿನ ಮನೆಗಳ ಸುತ್ತ ಹಲವಾರು ಬಣ್ಣಗಳ ವಿವಿಧ ತಳಿಗಳ  ಸೇವಂತಿಗೆ ಹೂ ಬೆಳೆಯುತ್ತಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಸೇವಂತಿಗೆ ಹೂಗಳು ಈ ಪುಟ್ಟ ಊರಲ್ಲಿ ಬೆಳೆಯುತ್ತವೆ!ಕಾರದ ಕಡ್ಡಿ, ಹೊಸಬಾಳೆ, ಬಟನ್, ಗುಚ್ಚುಸೇವಂತಿಗೆ ಇತ್ಯಾದಿ ಹೆಸರುಗಳಿಂದ ಸ್ಥಳೀಯರು ಗುರುತಿಸುವ ನಾನಾ ಬಣ್ಣಗಳ ಸೇವಂತಿಗೆ ಹೂಗಳು ಬೆಳೆದಿದ್ದಾರೆ. ಪ್ರತಿ ಮನೆಯ ಅಂಗಳದಲ್ಲಿ ಹೂಗಳು ರಾರಾಜಿಸುತ್ತವೆ. ಪ್ರತಿ ವರ್ಷ ಒಂದೆರಡು ಹೊಸ ಜಾತಿಯ ಹೂವುಗಳು ಸೇರ್ಪಡೆಗೊಳ್ಳುತ್ತವೆ.ಇಲ್ಲಿನ ಐದೂ ಮನೆಗಳಲ್ಲಿನ ಹೂವುಗಳನ್ನು ನೋಡಲು ಸುತ್ತಲಿನ ಊರುಗಳ ಆಸಕ್ತರು ಬರುತ್ತಾರೆ. ಗೋಟಗಾರಿನ ಮನೆಗಳ ಯುವ ದಂಪತಿಗಳು ಕಳೆದ ಐದು ವರ್ಷಗಳಿಂದ ಶ್ರದ್ಧೆಯಿಂದ ಸೇವಂತಿಗೆ ಹೂ ಬೆಳೆಸುತ್ತಿದ್ದಾರೆ.  ಇಲ್ಲಿ ಹೂಗಳನ್ನು ಕೀಳುವುದಿಲ್ಲ. ಅವುಗಳನ್ನು ನೋಡಿ ಸಂತೋಷ ಪಡಬೇಕಷ್ಟೆ. ಸಾಗರ ಸುತ್ತಮುತ್ತಲಿನ ಮಂಕಾಳೆ, ಇಕ್ಕೇರಿ ಮತ್ತಿತರ ಊರುಗಳಲ್ಲಿ ಡೇರೆ ಹಾಗೂ ಸೇವಂತಿ ಹೂವುಗಳನ್ನು ಅಂದಕ್ಕಾಗಿಯೇ ಬೆಳಸುವ  ಹವ್ಯಾಸಿಗಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.