ಶನಿವಾರ, ಜೂನ್ 19, 2021
27 °C
ಬಿಜೆಪಿಯಲ್ಲಿ ಇನ್ನೂ ಬಗೆಹರಿಯದ ಅಭ್ಯರ್ಥಿ ಆಯ್ಕೆ ಕಗ್ಗಂಟು

ಇಂದಿನಿಂದ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಬುಧವಾರ ಅಧಿಸೂಚನೆ ಪ್ರಕಟಣೆ­ಯೊಂದಿಗೆ ಆರಂಭವಾಗಲಿದೆ. ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಜೊತೆಗೆ ಗುಲ್ಬರ್ಗ ಜಿಲ್ಲೆಯ ಆಳಂದ, ಚಿಂಚೋಳಿ ಕ್ಷೇತ್ರಗಳು ಬರಲಿವೆ.ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಹಾಲಿ ಸಂಸದ ಧರ್ಮಸಿಂಗ್ ಮತ್ತು ಜೆಡಿಎಸ್‌ ಮಾಜಿ ಸಚಿವ ಬಂಡೆಪ್ಪಾ ಕಾಶೆಂಪುರ ಅವರ ಹೆಸರನ್ನು ಪ್ರಕಟಿಸಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟು ಇನ್ನು ಮುಂದುವರಿದ್ದು, ಅಭ್ಯರ್ಥಿ ಯಾರು ಎಂಬುದು ಪ್ರಶ್ನಾರ್ಥಕವಾಗಿದೆ.ಉಳಿದಂತೆ ಆಮ್‌ ಅದ್ಮಿ ಪಕ್ಷವು ತನ್ನ ಅಭ್ಯರ್ಥಿಯಾಗಿ ಚಂದ್ರಕಾಂತ ಕುಲ­ಕರ್ಣಿ ಅವರ ಹೆಸರನ್ನು ಪ್ರಕಟಿಸಿದೆ. ನಾಮಪತ್ರವನ್ನು ಸಲ್ಲಿಸಲು ಮಾ.26 ಕಡೆಯ ದಿನವಾಗಿದ್ದು, 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 29 ನಾಮಪತ್ರ ವಾಪಸಾ­ತಿಗೆ ಕಡೆಯ ದಿನವಾಗಿದೆ. ಮತದಾನ ಏಪ್ರಿಲ್‌ 17ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ನಡೆಯಲಿದೆ.ನಾಮಪತ್ರ ಸಲ್ಲಿಕೆ ಎಲ್ಲಿ: ಅಭ್ಯರ್ಥಿ­ಗಳು ನಾಮಪತ್ರಗಳನ್ನು ಜಿಲ್ಲೆಯಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳ ಬಳಿ ಸಲ್ಲಿಸಬಹುದು. ಸಹಾಯಕ ಚುನಾವಣಾಧಿಕಾರಿಗಳ ಪದನಾಮ, ಕಚೇರಿಯ ವಿಳಾಸ ಹೀಗಿದೆ.ಬಸವಕಲ್ಯಾಣ ಕ್ಷೇತ್ರ: ಸಹಾಯಕ ಆಯು­­ಕ್ತರು, ಸಹಾಯಕ ಆಯುಕ್ತರ ಕಚೇರಿ, ಮಿನಿ ವಿಧಾನಸೌಧ, ಬಸವಕಲ್ಯಾಣ.

ಹುಮನಬಾದ್‌ ಕ್ಷೇತ್ರ: ಜಿಲ್ಲಾ ಜಲಾ­ನಯನ ಅಭಿವೃದ್ಧಿ ಅಧಿಕಾರಿ, ತಹಶೀ­ಲ್ದಾರ್‌ ಕಚೇರಿ, ಮಿನಿ ವಿಧಾನಸೌಧ, ಹುಮನಬಾದ್‌,

ಬೀದರ್ (ದಕ್ಷಿಣ) ಕ್ಷೇತ್ರ: ಜಂಟಿ ನಿರ್ದೇ­­ಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ತಹಶೀಲ್ದಾರ್‌ ಕಚೇರಿ, ಬೀದರ್.

ಬೀದರ್ ಕ್ಷೇತ್ರ: ಸಹಾಯಕ ಆಯು­ಕ್ತರು, ಬೀದರ್, ಸಹಾಯಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬೀದರ್‌.

ಭಾಲ್ಕಿ ಕ್ಷೇತ್ರ: ಉಪ ಕಾರ್ಯ­ದರ್ಶಿಗಳು, ಜಿಲ್ಲಾಪಂಚಾಯಿತಿ, ತಹಶೀಲ್ದಾರ್ ಕಚೇರಿ, ಭಾಲ್ಕಿ.

ಔರಾದ್‌ ಕ್ಷೇತ್ರ: ಜಂಟಿ ಕೃಷಿ ನಿರ್ದೇಶಕರು, ತಹಶೀಲ್ದಾರ್‌ ಕಚೇರಿ, ಮಿನಿ ವಿಧಾನಸೌಧ, ಔರಾದ್‌ (ಬಿ).

ಮತದಾರರು: ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಒಟ್ಟು ಮತದಾರರ ಸಂಖ್ಯೆ 15,46,208 ಆಗಿದ್ದು, ಈ ಪೈಕಿ 7,35,745 ಮಹಿಳೆ­ಯರು. ಒಟ್ಟಾರೆ ಕ್ಷೇತ್ರದ ವ್ಯಾಪ್ತಿಯಲ್ಲಿ 1,896 ಮತಗಟ್ಟೆ­ಗಳಿದ್ದು, ಇವುಗಳಲ್ಲಿ 328 ಸೂಕ್ಷ್ಮ, 438 ಅತಿಸೂಕ್ಷ ಮತಗಟ್ಟೆಗಳು ಸೇರಿವೆ.ನಾಳೆ ಸಂಸದ ಧರ್ಮಸಿಂಗ್ ನಾಮಪತ್ರ

ಬೀದರ್: ಹಾಲಿ ಸಂಸದ ಎನ್. ಧರ್ಮಸಿಂಗ್ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ಮಧ್ಯಾಹ್ನ 12.40 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ನಗರದ ಗಣೇಶ ಮೈದಾನದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಭೆ­ಯಲ್ಲಿ ಮಾತನಾಡುವರು.  ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ಪ್ರಚಾ­ರಕ್ಕೂ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರಶದ್ ಅಲಿ ತಿಳಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೇಮಕ:  ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಪದಾಧಿ­ಕಾರಿಗಳನ್ನು ನೇಮಕ ಮಾಡಿ ಪಕ್ಷ ಹೇಳಿಕೆ ನೀಡಿದೆ. ವಿವರ ಹೀಗಿವೆ. ನಾಸೀರ್‍ಖಾನ್ ಬೀದರ್, ಸುಧಾಕರ ಗುರ್ಜರ್, ಸಿದ್ರಾಮ ವಾಘಮಾರೆ, ಅನ್ವರ್ ಭೋಸ್ಗೆ, ಮೆಹಬೂಬ್ ಪಟೇಲ್ (ಸಂಘಟನಾ ಕಾರ್ಯದರ್ಶಿಗಳು), ರಾಹುಲ್ ನಾವದಗಿ, ಅಜಮತ್ ಪಟೇಲ್ ಮತ್ತು ಶಿವಕುಮಾರ್ ಸ್ವಾಮಿ (ಹೆಚ್ಚುವರಿ ಕಾರ್ಯದರ್ಶಿಗಳು).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.