ಗುರುವಾರ , ಏಪ್ರಿಲ್ 15, 2021
20 °C

ಇಂದಿನಿಂದ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜುಲೈ 8ರಿಂದ 14ರ ವರೆಗೆ ರಾಜ್ಯ ಮಟ್ಟದ ಫೈವ್ ಸ್ಟಾರ್ ಸ್ಟೇಟ್ ರ‌್ಯಾಂಕಿಂಗ್ ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ.13, 15 ಮತ್ತು 17 ವರ್ಷದೊಳಗಿನವರ ಬಾಲಕ, ಬಾಲಕಿಯರ ವಿಭಾಗದಲ್ಲಿ ಪಂದ್ಯ ನಡೆಯಲಿದೆ. ಪುರುಷ ಮತ್ತು ಮಹಿಳೆಯರ ಹಿರಿಯರ ವಿಭಾಗದ ಪಂದ್ಯ ಮತ್ತು ವಯಸ್ಕರ ವಿಭಾಗದಲ್ಲಿಯೂ ಪಂದ್ಯಾವಳಿ ನಡೆಯಲಿದೆ. ಜೂನಿಯರ್ ವಿಭಾಗದ ಬಹುಮಾನ ವಿತರಣೆ ಸಮಾರಂಭ 11ರಂದು ನಡೆಯಲಿದೆ.ಈಗಾಗಲೇ ಒಂದು ಸಾವಿರ ಮಂದಿ ವಿವಿಧ ವಿಭಾಗಗಳಲ್ಲಿ ಆಡಲು ಹೆಸರು ನೋಂದಣಿ ಮಾಡಿದ್ದಾರೆ.  ಸ್ಪರ್ಧೆಯ ವಿವರಗಳನ್ನು ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ವೆಬ್‌ಸೈಟ್‌ನಲ್ಲಿ ನೋಡಬಹುದು.10 ವೀಕ್ಸ್ ತರಬೇತಿ: ಬ್ಯಾಡ್ಮಿಂಟನ್ ಆಟಗಾರರಿಗೆ ತರಬೇತಿ ನೀಡಲು ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ನೇತೃತ್ವದ `10 ವೀಕ್ಸ್ ಸಂಸ್ಥೆ~ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.