ಪಿಇಎಸ್ ಶಿಕ್ಷಣ ಸಂಸ್ಥೆಯು ಮಾ.7 ಮತ್ತು 8ರಂದು ‘ಆತ್ಮತೃಷಾ’ ಎಂಬ ತಾಂತ್ರಿಕ–ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಂಡಿದ್ದು, ರಾಜ್ಯದೆಲ್ಲೆಡೆಯಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ‘ಕಲರ್ಸ್ ಆಫ್ ಇಂಡಿಯಾ’ ಪರಿಕಲ್ಪನೆಯಲ್ಲಿ ನಡೆಯುವ ಈ ಉತ್ಸವದಲ್ಲಿ ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸಲಾಗುತ್ತದೆ. ನೃತ್ಯ ಸ್ಪರ್ಧೆ, ಪಿಕ್ಸೆಲ್ ಫೋಟೊಗ್ರಫಿ ಕ್ಲಬ್, ಮ್ಯಾಡ್–ಆ್ಯಡ್ ಟೀಮ್ ಮತ್ತು ಬೀದಿ ನಾಟಕ ಪ್ರಮುಖವಾಗಿ ಪ್ರಸ್ತುತಗೊಳ್ಳಲಿವೆ.

ನೃತ್ಯ ತಂಡಗಳನ್ನು ಸಂಸ್ಕೃತಿ, ಪಲ್ಸ್ ಮತ್ತು ಟ್ರಾನ್ಸ್ ಎಂದು ಹೆಸರಿಸಲಾಗಿದ್ದು, ಬೀದಿ ನಾಟಕ ತಂಡವನ್ನು ‘ನೌಟಂಕಿ’ ಎಂದು ಗುರುತಿಸಲಾಗಿದೆ. ತಾಂತ್ರಿಕ ಪ್ರದರ್ಶನಗಳನ್ನು ನೀಡುವ ತಂಡಗಳನ್ನು ಟೀಮ್ ಪೇಸ್, ಟೀಮ್ ಹಯ ಮತ್ತು ಟೀಮ್ ಏಲಸ್ ಇತ್ಯಾದಿ ಹೆಸರಿಸಲಾಗಿದೆ. ಪಿಇಎಸ್ನ ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಉತ್ಸವ ಆಯೋಜನೆಯಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಜವಾಹರ್ ದೊರೆಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.