ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) 76ನೇ ವಾರ್ಷಿಕ ಮಹಾಸಭೆ ಭಾನುವಾರ ನಡೆಯಲಿದ್ದು, ಹಲವು ಕಾರಣಗಳಿಂದ ಇದು ಕುತೂಹಲ ಕೆರಳಿಸಿದೆ.

ಮುಂದಿನ ವರ್ಷ ನಡೆಯಲಿರುವ ಕೆಎಸ್ಸಿಎ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸಲು ಹಿಂದಿನ ಆಡಳಿತದಾರರಾದ ಬ್ರಿಜೇಶ್ ಪಟೇಲ್ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಣಗಳು ಕೈಜೋಡಿಸಿರುವುದರಿಂದ ಸಭೆ ಮತ್ತಷ್ಟು ಆಸಕ್ತಿಗೆ ಕಾರಣವಾಗಿದೆ. ಈ ಬಣ ಹಾಲಿ ಆಡಳಿತದ ಕಾರ್ಯವೈಖರಿ ಬಗ್ಗೆ ಆಕ್ಷೇಪ ಎತ್ತುವ ಸಾಧ್ಯತೆ ಇದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ಸಭೆಯಲ್ಲಿ 2012ರ ಜನವರಿ 8ರಂದು ನಡೆದ ವಾರ್ಷಿಕ ಮಹಾಸಭೆಯ ನಿಲುವಳಿಗಳನ್ನು ದೃಢಪಡಿಸುವುದು, 2011-12ರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡನೆ, 2013ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ವಾರ್ಷಿಕ ಪರಿಷ್ಕೃತ ಬಜೆಟ್ಗೆ ಒಪ್ಪಿಗೆ ನೀಡಲಾಗುತ್ತಿದೆ. 2013-14ರ ಅವಧಿಯ ಬಜೆಟ್ ಪ್ರಸ್ತಾವ, 2012-13ರ ಅವಧಿಗೆ ಲೆಕ್ಕ ಪರಿಶೋಧಕರ ನೇಮಕ ಹಾಗೂ ಅವರ ವೇತನ ನಿಗದಿಪಡಿಸುವ ಸಂಬಂಧ ಚರ್ಚೆ ನಡೆಯಲಿದೆ.

ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್, ಸುಜಿತ್ ಸೋಮಸುಂದರ್ ಹಾಗೂ ಇನ್ನಿತರರನ್ನು ಒಳಗೊಂಡ ತಂಡ 2010ರ ನವೆಂಬರ್ 21ರಂದು ಅಧಿಕಾರ ವಹಿಸಿಕೊಂಡಿತ್ತು. ಇವರು ಅಧಿಕಾರವಹಿಸಿಕೊಂಡು ಇದೇ ತಿಂಗಳ 21ಕ್ಕೆ ಭರ್ತಿ ಎರಡು ವರ್ಷವಾಗಲಿದೆ.

ಆದರೆ ಈ ಬಳಗ ಪಾರದರ್ಶಕ ಆಡಳಿತ ನೀಡುವಲ್ಲಿ ವಿಫಲವಾಗಿದೆ ಹಾಗೂ ಕೆಲ ನಿರ್ಧಾರ ತೆಗೆದುಕೊಳ್ಳುವಾಗ ಸದಸ್ಯರ ಸಲಹೆಯನ್ನು ಪರಿಗಣಿಸುತ್ತಿಲ್ಲ ಎಂಬ ಆಕ್ಷೇಪವೂ ಕೇಳಿಬರುತ್ತಿದೆ. ಹಾಗಾಗಿ ಸಭೆಯಲ್ಲಿ ಮಾತಿನ ಚಕಮಕಿ ನಡೆಯುವ ಸಾಧ್ಯತೆಯೂ ಇದೆ. ಪ್ರಮುಖವಾಗಿ ಒಡೆಯರ್-ಬ್ರಿಜೇಶ್ ಬಣದ ಕೆಲ ಸದಸ್ಯರು ಹಾಲಿ ಆಡಳಿತದ ಕೆಲ ನಿರ್ಧಾರಗಳನ್ನು ವಿರೋಧಿಸುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ಸು ಗಳಿಸಿದ ಆಟಗಾರರನ್ನು ಒಳಗೊಂಡ ಕುಂಬ್ಳೆ ಹಾಗೂ ಅವರ ಬಳಗ ಕೆಎಸ್ಸಿಎ ಅಧಿಕಾರ ವಹಿಸಿಕೊಂಡಾಗ ಅದನ್ನು ಭಾರತದ ಕ್ರಿಕೆಟ್ನಲ್ಲಿ ಐತಿಹಾಸಿಕ ದಿನವೆಂದು ಬಣ್ಣಿಸಲಾಗಿತ್ತು. ಜೊತೆಗೆ ಹೊಸ ಭರವಸೆ, ನಿರೀಕ್ಷೆ, ಕನಸು ಚಿಗುರೊಡೆದಿದ್ದವು.

ಆ ನಿಟ್ಟಿನಲ್ಲಿ ಈ ಬಳಗ ರಾಜ್ಯದ ವಿವಿಧೆಡೆ 16 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಿದೆ. ಬೆಂಗಳೂರಿನ ಆಲೂರು ಕ್ರೀಡಾಂಗಣ, ಮೈಸೂರಿನಲ್ಲಿ ಜೆಎಸ್ಎಸ್ ಹಾಗೂ ಗಂಗೋತ್ರಿ ಗ್ಲೇಡ್ಸ್, ಮಂಡ್ಯದಲ್ಲಿ ಪಿಇಎಸ್, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಚೂರಿನಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಿದೆ. ಜೊತೆಗೆ ತರಬೇತಿಗೆ ಅನುಕೂಲ ಮಾಡಿಕೊಡಲು ತಂತ್ರಜ್ಞಾನದ ಮೊರೆ ಹೋಗಿದೆ. 2011ರಲ್ಲಿ ಶಿವಮೊಗ್ಗದಲ್ಲಿ ರಣಜಿ ಆಯೋಜಿಸಿದ್ದು, ಈ ಬಾರಿ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ರಣಜಿ ಪಂದ್ಯಗಳು ನಡೆಯಲಿವೆ.

ನಡೆಯದ ಕೆಪಿಎಲ್: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಎರಡು ವರ್ಷಗಳಿಂದ ಕೆಪಿಎಲ್ ಟೂರ್ನಿ ನಡೆಯಲೇ ಇಲ್ಲ ಎಂಬುದು ಕೆಲ ಸದಸ್ಯರ ಆರೋಪ. ಜೊತೆಗೆ ಕೆಲ ಲೀಗ್ ಪಂದ್ಯಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.