ಗುರುವಾರ , ಮೇ 19, 2022
21 °C

ಇಂದು ರಕ್ತ ರಾತ್ರಿಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀ ಮಹಾದೇವತಾತ ಕಲಾ ಸಂಘದ ಬಳ್ಳಾರಿ ಜಿಲ್ಲೆ ಗ್ರಾಮೀಣ ಭಾಗದ ಕಲಾವಿದರಿಂದ ಬುಧವಾರ (ಜೂ.6) ದಿ.ಕಂದಗಲ್ ಹನುಮಂತರಾಯ ಅವರ ರಚನೆಯ `ರಕ್ತ ರಾತ್ರಿ~ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.ಶ್ರೀ ಮಹಾದೇವತಾತ ಕಲಾ ಸಂಘ ರಾಜ್ಯದ ಅನೇಕ ಕಡೆ ಈ ನಾಟಕ ಪ್ರದರ್ಶನ ಮಾಡಿದ್ದು, 152ನೇ ಪ್ರದರ್ಶನ ಇದಾಗಿದೆ.ಮಹಾಭಾರತದ ಅಂತ್ಯದಲ್ಲಿ ಬರುವ ಉಪ ಪಾಂಡವರ ಹತ್ಯೆಯ ಸುತ್ತ ಹೆಣೆದಿರುವ ಕಥೆಯೇ `ರಕ್ತರಾತ್ರಿ~. ದ್ರೋಣಾಚಾರ್ಯರ ಮಗನೂ ದುರ್ಯೋಧನನ ಆಪ್ತಸ್ನೇಹಿತನೂ ಆದ ಅಶ್ವತ್ಥಾಮನು ತನ್ನ ಗೆಳೆಯನ ಮನಸ್ಸಿಗೆ ನೆಮ್ಮದಿ ನೀಡುವ ಸಲುವಾಗಿ ಪಾಂಡವರ ತಲೆ ಕಡಿದು ತರುವೆನೆಂದು ಪ್ರತಿಜ್ಞೆ ಮಾಡುತ್ತಾನೆ. ಅದರಂತೆ ಕಾಳರಾತ್ರಿಯಲ್ಲಿ ಮಲಗಿದ್ದ ಉಪಪಾಂಡವರನ್ನೇ ಪಾಂಡವರೆಂದು ತಿಳಿದು ಅವರ ತಲೆಗಳನ್ನು ಕಡಿದು ಗೆಳೆಯನಿಗೆ ಸಮರ್ಪಿಸಿದ ಕಥಾ ಸಾರವೇ  `ರಕ್ತರಾತ್ರಿ~.ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದೆ, ಗಾನ ಕೋಕಿಲೆ ಸುಭದ್ರಮ್ಮ ಮನ್ಸೂರು (ದ್ರೌಪದಿ), ವೀಣಾ ಆದವಾನಿ (ಉತ್ತರೆ), ಇಳಕಲ್ ಉಮಾರಾಣಿ(ಅನಂಗಪುಷ್ಪ), ವಂದನಾ ಗಂಗಾವತಿ (ಭಾನುಮತಿ), ತಿಮ್ಮನಗೌಡ ಗೆಣಕಿಹಾಳು (ಅಶ್ವತ್ಥಾಮ), ಚಿದಾನಂದ ಗವಾಯಿ (ಕೃಷ್ಣ), ಪುರುಷೋತ್ತಮ (ಶಕುನಿ) ಮುಂತಾದ ಪ್ರಖ್ಯಾತ ಕಲಾವಿದರು ನಟಿಸಿರುವ ಈ ನಾಟಕದ ಸಂಗೀತ ಸಾರಥ್ಯ ತೋಟಯ್ಯಸ್ವಾಮಿ, ವಿರೂಪಾಕ್ಷರಾವ್ ಅವರದು.

 

ಪ್ರಸಾದನ ಮತ್ತು ಮೇಕಪ್ ಬಿ.ಜಿ.ಕೆರೆ ವಾಜಿದ್ ಹಾಗೂ ಬೆಂಗಳೂರು ವೆಂಕಟೇಶ್ ಅವರದು. ನಾಟಕ ಆರಂಭಕ್ಕೂ ಮುನ್ನ ಡಾ.ವಾಣಿ ಹಿರೇಮಠ ಅವರಿಂದ ಭರತನಾಟ್ಯ ಪ್ರದರ್ಶನ.ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಟಕಕಾರ, ಪತ್ರಕರ್ತ ಗೋಪಾಲ್ ವಾಜಪೇಯಿ, ಪತ್ರಕರ್ತ ಗುಡಿಹಳ್ಳಿ ನಾಗರಾಜ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಶ್, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾಹಿತಿ ಸಾ.ಶಿ. ಮರುಳಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಜೆ 5.30.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.