ರಾಣಾ ಕಾ ಗಾಡಿ ಆಗಯಾ.... (ರಾಣಾನ ಗಾಡಿ ಬಂತು..) - ಇತ್ತೀಚೆಗೆ ನಡೆದ ರೇಡ್ ದಿ ಹಿಮಾಲಯ ಕಾರ್ ರ್ಯಾಲಿಯ ಮೊದಲ ದಿನವೇ (ಶಿಮ್ಲಾ ಜಿಲ್ಲೆಯ ಸರ್ಕಿಟ್ ಸಮಯ) ಶಾಲಟ್ ಎಂಬಲ್ಲಿ ರ್ಯಾಲಿ ಪಾಯಿಂಟ್ ಒಂದರ ಬಳಿ ಸುರೇಶ್ ರಾಣಾ ಅವರ ಮಾರುತಿ ಜಿಪ್ಸಿಯನ್ನು ದೂರದಿಂದ ಕಾಣಸಿಕೊಂಡಾಗ ಸ್ಥಳೀಯ ಕೆಲವು ರ್ಯಾಲಿ ಆಸಕ್ತರು ಉದ್ಘರಿಸಿದ್ದು ಹೀಗೆ...

ಗಿರಿಧಾಮಗಳಾದ ಶಿಮ್ಲಾ, ಕುಲ್ಲು, ಮನಾಲಿ ಜತೆ ಪಶ್ಚಿಮ ಹಿಮಾಲಯದ ಮನಮೋಹಕ ಪರ್ವತ ಶ್ರೇಣಿಗಳ ನಡುವೆಯಿರುವ ರೋಹ್ತಂಗ್ ಪಾಸ್, ಕಾಝಾ, ಕೆಲ್ಲಾಂಗ್, ಪಾಶ್ಚ್ಯು, ಬಾರಾಲಚಾ.... ‘ಮಾರುತಿ ಸುಜುಕಿ’ ಹಿಮಾಲಯನ್ ಮೋಟಾರ್ ರ್ಯಾಲಿ ಈ ಸಲ (ಅಕ್ಟೋಬರ್ 10 ರಿಂದ 15) ಸಾಗಿದ್ದು ಈ ಹಾದಿಯಲ್ಲಿ.

ವರ್ಷ ವರ್ಷ ರ್ಯಾಲಿ ಹಾದಿಯಲ್ಲಿ ಬದಲಾವಣೆ ಇರುತ್ತದೆ. ಆದರೆ ಎಷ್ಟೇ ಬದಲಾವಣೆಯಿರಲಿ 36 ವರ್ಷ ವಯಸ್ಸಿನ ಸುರೇಶ್ ರಾಣಾ ಮಾತ್ರ ಈ ಎಲ್ಲ ರೂಟುಗಳಲ್ಲಿ ಸರಾಗವಾಗಿ ಓಡಿಸುತ್ತಾರೆ. ಗೆಲ್ಲುತ್ತಾರೆ- ಎಲ್ಲ ಪರ್ವತ ಶ್ರೇಣಿ (ಟೆರೇನ್) ಚಿರಪರಿಚಿತ ಎಂಬಂತೆ. ಈ ಬಾರಿಯೂ ಫೆವರೀಟ್ ಪಟ್ಟಕ್ಕೆ ಚ್ಯುತಿ ಬರದಂತೆ ಎರಡನೇ ದಿನ ಪಡೆದ ಲೀಡನ್ನು ಕೊನೆಯವರೆಗೆ ಉಳಿಸಿಕೊಂಡರು.

ಅವರ ಕಾರು 9 ಗಂಟೆ 36 ನಿ.33 ಸೆ. ಪೆನಾಲ್ಟಿ ಟೈಂ ಪಡೆದರೆ, ಎರಡನೆಯದಾಗಿ ಬಂದ ಕ್ಯಾ.ಸಮೀರ್ ಪಾಂಡೆ ಮತ್ತು ಹನಿ ನರೂಲಾ ಅವರ ಜಿಪ್ಸಿ ತೆಗೆದುಕೊಂಡ ಪೆನಾಲ್ಟಿ 9ಗಂ.57ನಿ.64 ಸೆ. ಮೂರನೆಯವರಾಗಿ ಸುಮಾರು 1850 ಕಿ.ಮೀ. ದೂರ ಕ್ರಮಿಸಿದ್ದ ಹರಪ್ರೀತ್ ಸಿಂಗ್ ‘ಬಾವಾ’- ಥಾಕೂರ್ ಅವರಿಗೆ ದೊರೆತ ಪೆನಾಲ್ಟಿ ಸಮಯ 10ಗಂ.03.24 ಸೆ.

ಸಾಧಕ...ಸುರೇಶ್ ರಾಣಾ ಅವರ ಸ್ವಂತ ಊರು ಮನಾಲಿ ಬಳಿಯ ಪತ್ಲಿ ಕುಹಲ್. ಹೀಗಾಗಿ ಇಲ್ಲಿನ ಪರಿಸರ, ಹವೆ ಅವರಿಗೆ ಪರಿಚಿತ. ಗೆದ್ದ ತಕ್ಷಣ ಅವರು ನ್ಯಾವಿಗೇಟರ್ ಹಾಗೂ ಅನುಭವಿ ರೇಡರ್- ಕರ್ನಾಟಕದವರೇ ಆದ ಅಶ್ವಿನ್ ನಾಯಕ್ ಜತೆ ‘ಪ್ರಜಾವಾಣಿ’ಗೆ ಮಾತಿಗೆ ಸಿಕ್ಕರು.
‘ಗಾಡಿ ನೇ ಸಾತ್ ದಿಯಾ’ (ವಾಹನ ನನಗೆ ಸಹಕಾರ ನೀಡಿತು) ಎಂದು ಮಾತು ಆರಂಭಿಸಿದರು. ಈ 12 ವರ್ಷಗಳ ರ್ಯಾಲಿಯಲ್ಲಿ 2004 ರಿಂದ 2008ರವರೆಗೆ ಅವರೇ ಚಾಂಪಿಯನ್!. ಕಳೆದ ವರ್ಷ ರ್ಯಾಲಿಯ ಶೇ. 90ರಷ್ಟು ಭಾಗ ಅವರೇ ಮುಂದಿದ್ದರು. ಕೊನೆಯಲ್ಲಿ ಜಿಪ್ಸಿ ವಾಹನ ಕೈಕೊಟ್ಟಿತ್ತು. ಈ ಸಲ ಮತ್ತೆ ವಿಜೇತ. ಹೀಗಾಗಿ ಈ ರ್ಯಾಲಿಯ ಇತಿಹಾಸದಲ್ಲಿ ಅರ್ಧದಷ್ಟು ಸಲ ಅವರು ಗೆದ್ದು ವಿಜೃಂಭಿಸಿದ್ದಾರೆ!

ಇಷ್ಟೇ ಅಲ್ಲ, ಸುರೇಶ್ ರಾಣಾ 2007ರ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ ಫೋರ್ವೀಲರ್ ಚಾಂಪಿಯನ್. ಕಳೆದ ವರ್ಷ ಮರುಭೂಮಿಯ ಬಹುತೇಕ ಭಾಗ ಸಾಗುವ ‘ಡಸರ್ಟ್ ಸ್ಟಾರ್ಮ್’ ವಿಜೇತ. ಇನ್ನೂ ಅನೇಕ ರ್ಯಾಲಿಗಳಲ್ಲಿ ವಿಜೇತ. ‘ಬಹುತ್ ಸಾರೆ. ಮೇರೆಕೊ ಯಾದ್ ನಹೀ’ ಎನ್ನುತ್ತಾರೆ ನಗುತ್ತ!

‘ತುಂಬಾ ಗೆದ್ದಾಯಿತು. ಇನ್ನು ಟ್ರೋಫಿ ಇಡಲು ಜಾಗವಿಲ್ಲ’ ಎಂಬ ಮಾತನ್ನೂ ಸೇರಿಸುತ್ತಾರೆ. ಸೇಬು ಬೆಳೆಗಾರರಾದ ರಾಣಾ ವರ್ಕ್ಷಾಪ್ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ‘ರೆಡ್ ರೂಸ್ಟರ್ ಪರ್ಫಾಮೆನ್ಸ್’ ಅವರ ಗಾಡಿಯನ್ನು ರ್ಯಾಲಿಗಾಗಿ ಸುಧಾರಿಸಿದೆ. ಸುಮಾರು ಮೂರು ತಿಂಗಳ ಹಿಂದಷ್ಟೇ ಜಿಪ್ಸಿ ಖರೀದಿಸಿದ್ದರು.

ಪ್ರತಿ ಸಲ ಫೆವರೀಟ್. ಈ ‘ಟ್ಯಾಗ್’ ನಿಮಗೆ ಏನನಿಸುತ್ತಿದೆ ಎಂಬ ಪ್ರಶ್ನೆಗೆ, ‘ನಿಜ. ತುಂಬಾ ಆಯಿತು. ಸಾಕು ಮಾಡೋಣ ಎಂದಿದ್ದೇನೆ. ಬೇರೆಯವರಿಗೆ ಅವಕಾಶ ಸಿಗಬೇಕಲ್ಲ’ ಎನ್ನುತ್ತಾರೆ ಅವರು.

ರೇಡ್ ದಿ ಹಿಮಾಲಯನ್’ ಸ್ಪರ್ಧೆಯಲ್ಲಿ ಸ್ಮರಣೀಯ ಯಶಸ್ಸು:- ‘2004ರಲ್ಲಿ. ಆ ಸಲ ಹಿಮ ಸುರಿದು ಬಿದ್ದು ಸುಮಾರು ಎರಡು ದಿನ ಸ್ಪರ್ಧಿಗಳು ಕೆಲ್ಲಾಂಗ್ನಲ್ಲೇ (ಹಿಮಾಚಲ ಪ್ರದೇಶ) ಉಳಿಯಬೇಕಾಗಿತ್ತು. ಅದು ನನ್ನ ಮೊದಲ ವಿಜಯ ಕೂಡ. ಅದು ತೀರ ರೋಚಕ ಅನುಭವ.’
‘ಈ ಬಾರಿ ಎರಡನೇ ದಿನ ಮೊದಲ ಹಂತದ ರ್ಯಾಲಿ ತುಂಬಾ ಕಠಿಣವೆನಿಸಿತು. ರಸ್ತೆಗಳು ತೀರಾ ಕೆಟ್ಟುಹೋಗಿ ಸವಾಲಾಗಿದ್ದವು. ಆದರೆ ನಾವು ಉತ್ತಮ ರೀತಿಯಲ್ಲಿ ನೋಟ್ಸ್ ಮಾಡಿಕೊಂಡಿದ್ದೆವು.

ಈ ಸಲ ಎಕ್ಸ್ಟ್ರೀಮ್ ವಿಭಾಗದಲ್ಲಿ 43 ಕಾರುಗಳು ಕಣದಲ್ಲಿದ್ದವು. ಹೆಚ್ಚಿನವು ಬೇಗ ಹೊರಬಿದ್ದವು. ಹೀಗಾಗಿ ನಾವು ಸುಲಭವಾಗಿ ಲೀಡ್ ಪಡೆದುಕೊಳ್ಳಲು ಸಾಧ್ಯವಾಯಿತು’.

ಮುಂದಿನ ಫೆಬ್ರವರಿಯಲ್ಲಿ ನಡೆಯುವ ‘ಡಸರ್ಟ್ ಸ್ಟಾರ್ಮ್ ರ್ಯಾಲಿ’ (ಬಹುತೇಕ ರಾಜಸ್ತಾನದ ಮರುಭೂಮಿ ಪ್ರದೇಶದಿಂದ ದೆಹಲಿಗೆ)ಯಲ್ಲಿ ಭಾಗವಹಿಸುವ ಉದ್ದೇಶ ಇದೆ ಎನ್ನುತ್ತಾರೆ ರಾಣಾ.ರ್ಯಾಲಿ ಸಮಯದಲ್ಲಿ ಸ್ಪರ್ಧಿಗಳಿಗೆ ಸಂಜೆಯ ನಂತರ ಮಾತ್ರ ವಿಶ್ರಾಂತಿ. ಬೆಳಗಿನ ಜಾವದಿಂದ ಸಂಜೆಯವರೆಗೆ ವಾಹನದಲ್ಲಿ. ಕಡಿಮೆ ತಿನ್ನುತ್ತಾರೆ. ರ್ಯಾಲಿಯ ನಂತರ ಹೆಚ್ಚಿನ ಸ್ಪರ್ಧಿಗಳ ತೂಕ 2-3 ಕೆ.ಜಿ. ಕಡಿಮೆಯಾಗುವುದು ಸಾಮಾನ್ಯ.

ಅಶ್ವಿನ್ ಕನಸು:
ಮಂಗಳೂರಿನ ಅಶ್ವಿನ್ ನಾಯಕ್ ಅವರೂ ಪಳಗಿದ ರ್ಯಾಲಿ ಸ್ಪರ್ಧಿಯೇ. 1995 ರಿಂದ 2000 ವರೆಗೆ ವಿವಿಧ ರ್ಯಾಲಿಗಳಲ್ಲಿ ಬೈಕ್ ಓಡಿಸುತ್ತಿದ್ದರು. ನಂತರ ಚತುಶ್ಚಕ್ರ ವಿಭಾಗದತ್ತ ಆಸಕ್ತಿ.‘ಹಿಮಾಲಯ ರ್ಯಾಲಿ ಗೆಲ್ಲಬೇಕೆಂಬುದು ಪ್ರತಿಯೊಬ್ಬ ರ್ಯಾಲಿ ಸ್ಪರ್ಧಿಯ ಕನಸು. ಅದು ನನಸಾಗಿದೆ’ ಎನ್ನುತ್ತಾರೆ ಅಶ್ವಿನ್ ಸಂತಸದಿಂದ. ರಾಣಾ ಅವರೂ 33 ವರ್ಷದ ಅಶ್ವಿನ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ‘ಪ್ರೊಫೆಷನಲ್ ನ್ಯಾವಿಗೇಟರ್ ಜತೆ ರೈಡ್ ಮಾಡಲು ಸಿಕ್ಕಿದ್ದು ನನಗೆ ಅನುಕೂಲವೇ ಆಯಿತು’ ಎಂದರು.

ಕಳೆದ ವರ್ಷವೂ ಅಶ್ವಿನ್, ರಾಣಾ ಅವರಿಗೆ ಸಾಥಿಯಾಗಿದ್ದರು. ರ್ಯಾಲಿ ಮಾರ್ಗ ನೋಟ್ ಸಿದ್ಧಪಡಿಸಿ ಡ್ರೈವರ್ಗೆ ನೆರವಾಗುವುದು ಕೂಡ ನ್ಯಾವಿಗೇಟರ್ ಕೆಲಸ.

ಇನ್ನು ವಿದೇಶಿ ರ್ಯಾಲಿಗಳಲ್ಲಿ ಹೆಚ್ಚು ಗಮನಹರಿಸುವ ಉದ್ದೇಶ ಹೊಂದಿದ್ದಾರೆ ಅಶ್ವಿನ್. ಸದ್ಯ ನವೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಯೋಜನೆ ಇಟ್ಟುಕೊಂಡಿದ್ದಾರೆ.

‘ರ್ಯಾಲಿ ಜನಪ್ರಿಯಗೊಳಿಸುವುದು ಉದ್ದೇಶ’

‘ಮೋಟರ್ ಸ್ಪೋರ್ಟ್ಸ್ನಲ್ಲಿ ನಮ್ಮ ದೇಶ ಹಿಂದಿದೆ. ಈ ನಿಟ್ಟಿನಲ್ಲಿ ಮೋಟರ್ ಸ್ಪೋರ್ಟ್ಗೆ ವಿಶಾಲ ತಳಹದಿ ಒದಗಿಸಿ ಅದನ್ನು ಜನಪ್ರಿಯಗೊಳಿಸುವುದು ನಮ್ಮ ಉದ್ದೇಶ. ಈ (ರೇಡ್ ದಿ ಹಿಮಾಲಯ) ರ್ಯಾಲಿ ದೇಶದ ಅತಿ ಎತ್ತರದ ವಾಹನ ಸಾಗುವ ಪ್ರದೇಶಗಳಲ್ಲಿ ನಡೆಯುತ್ತದೆ. ಅತ್ಯಂತ ಎತ್ತರದ ಜನವಸತಿ ಪ್ರದೇಶದಲ್ಲಿ ಸಹ’ ಎನ್ನುತ್ತಾರೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಿಜಿಎಂ (ಮಾರ್ಕೆಟಿಂಗ್) ಶಶಾಂಕ್ ಶ್ರೀವಾಸ್ತವ.
‘ನಾವು ರೇಡ್ ದಿ ಹಿಮಾಲಯ ಸ್ಪರ್ಧೆಯ ಜತೆಗೆ ಡಸರ್ಟ್ ಸ್ಟಾರ್ಮ್ ರ್ಯಾಲಿಯನ್ನೂ ನಡೆಸುತ್ತೇವೆ. ದೇಶದ ದಕ್ಷಿಣ ಭಾಗದಲ್ಲಿ ದಕ್ಷಿಣ್ ರ್ಯಾಲಿಯನ್ನೂ ಏರ್ಪಡಿಸುತ್ತಿದ್ದೇವೆ. ರ್ಯಾಲಿಗೆ ಹೆಚ್ಚು ತಳಹದಿ ಸಿಗುತ್ತಿದೆ. ರ್ಯಾಲಿಗೆ ಬೆಂಬಲ ನೀಡುವ ನಮ್ಮ ಉದ್ದೇಶ ಕೂಡ ಸಾರ್ಥಕವಾಗುತ್ತಿದೆ’ ಎನ್ನುತ್ತಾರೆ ಅವರು.
ಜಿಪ್ಸಿ ವಾಹನಗಳು ಯಶಸ್ಸು ಗಳಿಸುತ್ತಿರುವ ಬಗ್ಗೆ ಹೆಮ್ಮೆಯಿದೆ. (ಎಕ್ಸ್ಟ್ರೀಮ್ ವಿಭಾಗದಲ್ಲಿ ಸ್ಪರ್ಧೆ ಮುಗಿಸಿದ 28 ಕಾರುಗಳಲ್ಲಿ 27 ಮಾರುತಿ ಜಿಪ್ಸಿ ಇದ್ದವು). ಭಾರತೀಯ ಸೇನೆ ಕೂಡ ಪರ್ವತ, ಗುಡ್ಡಗಾಡು ಪ್ರದೇಶಕ್ಕೆ ಸರಿಹೊಂದುವ ಕಾರಣದಿಂದ ಜಿಪ್ಸಿ ವಾಹನ ಖರೀದಿಸುತ್ತಿದೆ. ಪ್ರತೀ ವರ್ಷ ಸೇನೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವಾಹನ ಕೊಳ್ಳುತ್ತಾರೆ ಎನ್ನುತ್ತಾರೆ ಹೆಮ್ಮೆಯಿಂದ.
‘ನಾವು ರ್ಯಾಲಿಗಾಗಿ ಮಾತ್ರ ವಾಹನಗಳನ್ನು ಉತ್ಪಾದಿಸುತ್ತಿಲ್ಲ. ಜನಸಾಮಾನ್ಯರ ಅಭಿರುಚಿಯನ್ನೂ ಗಮನದಲ್ಲಿಟುಕೊಳ್ಳುತ್ತೇವೆ’ ಎಂದು ಶ್ರೀವಾಸ್ತವ ವಿವರಿಸುತ್ತಾರೆ.
ಅಡ್ವೆಂಚರ್ (ಹವ್ಯಾಸಿ) ವಿಭಾಗದಲ್ಲಿ ಮಹೀಂದ್ರಾ ಸ್ಕಾರ್ಪಿಯೊ ವಾಹನಗಳು ಹೆಚ್ಚಿನ ಯಶಸ್ಸು ಸಾಧಿಸಿದ ಬಗ್ಗೆ ‘ಅವರೂ ರ್ಯಾಲಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಜತೆಗೆ ಸ್ಪರ್ಧೆ ಒದಗಿದಾಗ ಮಾತ್ರ ನಾವು ಎಲ್ಲಿ ಸುಧಾರಿಸಬೇಕು ಎಂದು ತಿಳಿಯಲು ಸಾಧ್ಯ’ ಎನ್ನುವ ವಿಶ್ಲೇಷಣೆ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.