ಭಾರತ ಡಯಾಬಿಟಿಸ್ ಭೀತಿಯನ್ನು ಎದುರಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 2025ರ ಹೊತ್ತಿಗೆ ವಿಶ್ವದ ಡಯಾಬಿಟಿಸ್ ರೋಗಿಗಳಲ್ಲಿ ಅರ್ಧದಷ್ಟು ಜನರು ಭಾರತದಲ್ಲಿ ಇರಲಿದ್ದಾರಂತೆ. ಈ ಕಾಯಿಲೆ ಕರ್ನಾಟಕಕ್ಕೆ ಕೂಡ ಅತ್ಯಂತ ಮುಖ್ಯವಾಗಿದೆ.

ಕ್ಯಾನ್ಸರ್, ಡಯಾಬಿಟಿಸ್, ಹೃದಯಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ನಿವಾರಣೆ ಮತ್ತು ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ ದೇಶದ ಸರಾಸರಿ ಜನಸಂಖ್ಯೆಗೆ ಹೋಲಿಸಿದರೆ ರಾಜ್ಯದಲ್ಲಿ ಸುಮಾರು ಶೇ 10.2ರಷ್ಟು ಮಂದಿ ಡಯಾಬಿಟಿಸ್ ಹೊಂದಿದ್ದಾರೆ.

ನಗರದ ಕೊಳಚೆ ಪ್ರದೇಶಗಳಲ್ಲಿ ಈ ಕಾಯಿಲೆಯ ಪ್ರಮಾಣವು ಶೇ 14.7ರ ಪ್ರಮಾಣದಲ್ಲಿ ಹರಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಡಯಾಬಿಟಿಸ್ ನಿರ್ವಹಣೆ ಒಂದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ಡಯಾಬಿಟಿಸ್ ಜತೆಗೆ ಬದುಕುವುದು ಒಂದು ಸವಾಲು.

ಮಧುಮೇಹದ ಕುರಿತು ಮಾಹಿತಿ ನೀಡುವ ತಜ್ಞರು ಅದನ್ನು ನಿವಾರಿಸುವ, ನಿಯಂತ್ರಿಸುವ, ನಿರ್ವಹಿಸುವ ಮತ್ತು ಚಿಕಿತ್ಸೆ ನೀಡುವ ರೋಗಿಗಳಿಗೆ `ಫೆಸಿಲಿಟೇಟರ್' ಪಾತ್ರ ವಹಿಸುವುದು ಹೇಗೆ ಎಂದು ಅರಿವು ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಸಾಮೂಹಿಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಬೆಕ್ಟಾನ್, ಡಿಕಿನ್ಸನ್ ಸಂಸ್ಥೆಯ ಸಹಯೋಗದಲ್ಲಿ ಎಂಡೋಕ್ರಿನಾಲಜಿಸ್ಟ್ಗಳು ಹಾಗೂ ಮಧುಮೇಹ ತಜ್ಞರನ್ನು ಒಳಗೊಂಡ ಸಲಹಾ ಮಂಡಳಿ ಸಿದ್ಧಪಡಿಸಿದ ಮಧುಮೇಹಿಗಳಿಗೆ ನಿರ್ದಿಷ್ಟ ಇನ್ಸುಲಿನ್ ಇಂಜೆಕ್ಷನ್ ನೀಡುವ ವಿಧಾನ ಕುರಿತ ಪದ್ಧತಿಯನ್ನು ವಸಂತ ನಗರದಲ್ಲಿರುವ ಬೆಂಗಳೂರು ಡಯಾಬಿಟಿಸ್ ಸೆಂಟರ್ನಲ್ಲಿ ಆರಂಭಿಸಿರುವ `ಫೋರಂ ಫಾರ್ ಇಂಜೆಕ್ಷನ್ ಟೆಕ್ನಿಕ್' ವೇದಿಕೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಎಂಡೋಕ್ರಿನಾಲಜಿ ಹಾಗೂ ಮೆಟಬಾಲಿಸಂ ವಿಭಾಗದ ಮಾಜಿ ಮುಖ್ಯಸ್ಥ ಡಾ. ಕೆ.ಎಂ. ಪ್ರಸನ್ನ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.