ಮಂಗಳೂರು: ಕಂಕನಾಡಿ ಹಾಗೂ ನಂತೂರಿನ ಮಸಾಜ್ ಪಾರ್ಲರ್ಗಳ ದಾಳಿಗೆ ಪೊಲೀಸರ ಹಫ್ತಾ ವಸೂಲಿ ಹಿನ್ನೆಲೆಯೇ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕದ್ರಿ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.

ಕದ್ರಿ ಇನ್ಸ್ಪೆಕ್ಟರ್ ಕಿರಣ್, ಹೆಡ್ ಕಾನ್ಸ್ಟೇಬಲ್ ಶಿವಪ್ಪ, ಕಾನ್ಸ್ಟೆಬಲ್ ಪ್ರಮೋದ್ ಅಮಾನತುಗೊಂಡವರು.
`ತನಿಖೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆಸಲಾಗುವುದು~ ಎಂದು ಮಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಬುಧವಾರ ತಿಳಿಸಿದರು.

ವೇಶ್ಯಾವಾಟಿಕೆ ಆರೋಪದ ಮೇರೆಗೆ ಕದ್ರಿ ಠಾಣೆ ಪೊಲೀಸರು ಮೂನ್ಶೈನ್ ಹಾಗೂ ಅಲೆವೆರಾ ಮಸಾಜ್ ಸೆಂಟರ್ಗಳಿಗೆ ಫೆ. 13ರಂದು ದಾಳಿ ನಡೆಸಿ ನಾಲ್ವರು ಮಹಿಳಾ ಸಿಬ್ಬಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಹಫ್ತಾ ವಸೂಲಿಗೆ ಒತ್ತಾಯಿಸಿದ್ದ ಪೊಲೀಸರು, ಕೇಳಿದಷ್ಟು ಹಣ ನೀಡಲಿಲ್ಲವೆಂದು ದಾಳಿ ನಡೆಸಿದ್ದರು ಎಂದು ಮಾಲೀಕರಾದ ಸತೀಶ್ ರೈ ಹಾಗೂ ಲೋಕೇಶ್ ರೈ ಪೊಲೀಸ್ ಆಯುಕ್ತರಿಗೆ ಸೋಮವಾರ ದೂರು ಸಲ್ಲಿಸಿದ್ದರು.
ಆರೋಪಗಳ ಕುರಿತು ತನಿಖೆಗೆ ಎಸಿಪಿ ಜಿ.ವಿ.ಸುಬ್ರಹ್ಮಣ್ಯ ಅವರನ್ನು ನಿಯೋಜಿಸಲಾಗಿತ್ತು. ಅವರ ನೀಡಿದ ವರದಿ ಆಧರಿಸಿ ಆಯುಕ್ತರು ಶಿಸ್ತು ಕ್ರಮ ಕೈಗೊಂಡಿದ್ದಾರೆ.

`ಪೊಲೀಸರು ಪಾರ್ಲರ್ನ ಕ್ಯಾಶ್ಬಾಕ್ಸ್ಗೆ ಕಾಂಡೋಮ್ ಹಾಕುತ್ತಿರುವ ದೃಶ್ಯ ಪಾರ್ಲರ್ನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಬ್ಬರು ಪುರುಷರನ್ನೂ ಗಿರಾಕಿಗಳಂತೆ ಪೊಲೀಸರೇ ಕರೆತಂದಿದ್ದರು.

ದಾಳಿ ವೇಳೆ ಮಹಿಳೆಯರು ಹಾಗೂ ಗಿರಾಕಿಗಳು ಅರೆನಗ್ನ ಸ್ಥಿತಿಯಲ್ಲಿದ್ದರು ಎಂದು ಎಫ್ಐಆರ್ನಲ್ಲಿ ತೋರಿಸಲಾಗಿದೆ. ಹಫ್ತಾ ಕೊಡದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು~ ಮಸಾಜ್ ಪಾರ್ಲರ್ ಮಾಲೀಕರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.