ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರದಾನ

ಭಾನುವಾರ, ಮೇ 19, 2019
34 °C

ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರದಾನ

Published:
Updated:

ಮಂಡ್ಯ: ದೇಶದ ಅಭಿವೃದ್ಧಿಯನ್ನು ಹಳ್ಳಿಗಳ ಸ್ಥಿತಿ ನೋಡಿ ಗುರುತಿಸಬೇಕೇ ವಿನಾ ಕೆಲವೇ ಕಾರ್ಪೋರೇಟ್ ಸಂಸ್ಥೆಗಳ ಸ್ಥಿತಿಗತಿ ನೋಡಿ ಅಲ್ಲ ಎಂದು ನಾಟಕಕಾರ, ಕವಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ನಗರದ ರೈತ ಸಭಾಂಗಣದಲ್ಲಿ ಶನಿವಾರ ಜನದನಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರಿಗೆ `ದೇವಮ್ಮ ಮತ್ತು ಇಂಡುವಾಳು ಎಚ್.ಹೊನ್ನಯ್ಯ ಸ್ಮಾರಕ ಸಮಾಜ ಸೇವಾ ಪ್ರಶಸ್ತಿ~ ಪ್ರದಾನ ಮಾಡಿ ಮಾತನಾಡಿದರು.ಮುಂದಿನ ಕೆಲವು ವರ್ಷಗಳಲ್ಲಿ ಭಾರತ, ಚೀನಾ ಅಭಿವೃದ್ಧಿ ರಾಷ್ಟ್ರಗಳು ಆಗುತ್ತವೆ ಎಂದು ಕೆಲವರು ಹೇಳುತ್ತಾರೆ. ಅದು ಸುಳ್ಳು. ಕೆಲವೇ ಮಂದಿ ಶ್ರೀಮಂತರಾದರೆ ದೇಶ ಅಭಿವೃದ್ಧಿ ಆದಂತಲ್ಲ ಎಂದು ಪ್ರತಿಪಾದಿಸಿದರು.ಕಾರ್ಪೋರೇಟ್ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ದೇಶದ ಅಭಿವೃದ್ಧಿಯನ್ನು ಅಳೆಯುವ ಸಾಧನ ಅಲ್ಲ . ದೇಶದಲ್ಲಿ 7 ಲಕ್ಷ ಹಳ್ಳಿಗಳಿವೆ. ಇಲ್ಲಿ ವಾಸಿಸುತ್ತಿರುವ ಜನರ ಜೀವನಮಟ್ಟ ಸುಧಾರಿಸಬೇು. ಅವರು ಅಭಿವೃದ್ಧಿ ಆಗಬೇಕು ಎಂದರು. ಆಗ ಮಾತ್ರವೇ ದೇಶ ಅಭಿವೃದ್ಧಿಯತ್ತ ಕಾಗಲು ಸಾಧ್ಯ ಎಂದರು.ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಚ್.ಹೊನ್ನಪ್ಪ, ಪ್ರಾಧ್ಯಾಪಕ ಮ.ರಾಮಕೃಷ್ಣ ಇದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry