ಗುರುವಾರ , ಜನವರಿ 23, 2020
26 °C

ಇರಾಕ್‌ನಲ್ಲಿ ಸ್ಫೋಟ: 28 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್ (ಎಎಫ್‌ಪಿ): ನಗರದ ಆಸ್ಪತ್ರೆಯೊಂದರ ಬಳಿ ಶುಕ್ರವಾರ ಅಂತ್ಯಸಂಸ್ಕಾರ ಮೆರವಣಿಗೆಯೊಂದು ಸಾಗುತ್ತಿದ್ದಾಗ ಕಾರ್ ಬಾಂಬ್ ಸ್ಫೋಟಿಸಿ 28 ಜನ ಮೃತಪಟ್ಟಿದ್ದಾರೆ.ಆತ್ಮಾಹುತಿ ದಳಕ್ಕೆ ಸೇರಿದಾತ ಸ್ಫೋಟಕ ಸಾಮಗ್ರಿ ತುಂಬಿದ ಕಾರನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಒಳಾಡಳಿತ ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.ರಿಯಲ್ ಎಸ್ಟೇಟ್ ಏಜೆಂಟ್ ಮಹಮ್ಮದ್ ಮಲಿಕಿ, ಆತನ ಪತ್ನಿ ಮತ್ತು ಪುತ್ರನನ್ನು ಕೊಲೆ ಮಾಡಲಾಗಿತ್ತು. ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಸಂಭವಿಸಿದ ಈ ಸ್ಫೋಟದಲ್ಲಿ ಇತರೆ 50 ಜನ ಗಾಯಗೊಂಡಿದ್ದಾರೆ.ಇರಾಕ್‌ನಲ್ಲಿ ಶಿಯಾಪಂಥ ನೇತೃತ್ವದ ಸರ್ಕಾರ ಮತ್ತು ಪ್ರಮುಖ ಸುನ್ನಿ ಪಂಥದವರ  ಮಧ್ಯೆ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದು, ಮತೀಯಗಲಭೆಗಳು ಆಗಾಗ ಸಂಭವಿಸುತ್ತಿವೆ.

ಪ್ರತಿಕ್ರಿಯಿಸಿ (+)