ಬುಧವಾರ, ಮೇ 18, 2022
25 °C

ಇರಾನಿ ಕಪ್: ರಾಜಸ್ತಾನ ತಂಡದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ರಾಜಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇತರೆ ತಂಡದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ರಾಜಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 307 ರನ್ ಗಳಿಸಿದೆ.ಮೂರು ವಿಕೆಟ್‌ಗೆ 53 ರನ್‌ಗಳಿಂದ ದಿನದಾಟ ಆರಂಭಿಸಿದ ರಾಜಸ್ತಾನ ತಂಡದ ಪರ ರಾಬಿನ್ ಬಿಷ್ಟ್ (93) ಮತ್ತು ರಷ್ಮಿ ಪರಿದಾ (85) ಉತ್ತಮ ಪ್ರದರ್ಶನ ನೀಡಿದರು. ಆದರೆ ಆತಿಥೇಯ ತಂಡ ಇನ್ನೂ 356 ರನ್‌ಗಳಿಂದ ಹಿನ್ನಡೆಯಲ್ಲಿದೆ. ಮಾತ್ರವಲ್ಲ ಫಾಲೋಆನ್ ತಪ್ಪಿಸಲು ಇನ್ನುಳಿದ ನಾಲ್ಕು ವಿಕೆಟ್‌ಗಳಿಂದ 206 ರನ್ ಗಳಿಸಬೇಕಿದೆ.ದಿನದಾಟದ ಅಂತ್ಯಕ್ಕೆ ಅಶೋಕ್ ಮೆನೇರಿಯಾ (59) ಮತ್ತು ದೀಪಕ್ ಚಾಹರ್ (1) ಕ್ರೀಸ್‌ನಲ್ಲಿದ್ದರು. ಭಾರತ ಇತರೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 663 ರನ್ ಪೇರಿಸಿತ್ತು.ಸಂಕ್ಷಿಪ್ತ ಸ್ಕೋರ್: ಭಾರತ ಇತರೆ: ಮೊದಲ ಇನಿಂಗ್ಸ್ 153.4 ಓವರ್‌ಗಳಲ್ಲಿ 663 ರಾಜಸ್ತಾನ: ಮೊದಲ ಇನಿಂಗ್ಸ್ 111 ಓವರ್‌ಗಳಲ್ಲಿ 6 ವಿಕೆಟ್‌ಗೆ 307 (ರಾಬಿನ್ ಬಿಷ್ಟ್ 93, ರಷ್ಮಿ ಪರಿದಾ 85, ಅಶೋಕ್ ಮೆನೇರಿಯಾ ಬ್ಯಾಟಿಂಗ್ 59, ಆರ್. ವಿನಯ್‌ಕುಮಾರ್ 60ಕ್ಕೆ 2, ಉಮೇಶ್ ಯಾದವ್ 68ಕ್ಕೆ 2, ಪ್ರಗ್ಯಾನ್ ಓಜಾ 58ಕ್ಕೆ 2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.