ಮಂಗಳವಾರ, ಜೂನ್ 22, 2021
24 °C

ಇ- ಟೆಂಡರ್‌ಗೆ ವಿರೋಧ: ರೈತ ಸಂಘ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ನಗರದ ಎಪಿಎಂಸಿಯಲ್ಲಿ ನೂತನವಾಗಿ ಜಾರಿಗೆ ಬಂದಿರುವ ಏಕೀಕೃತ ಮಾರುಕಟ್ಟೆ ವೇದಿಕೆ ವ್ಯವಸ್ಥೆಯಿಂದ ರೈತರ ಕೊಬ್ಬರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವು­ದನ್ನು ಸಹಿಸಲಾಗದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ದೇವರಾಜು ಎಚ್ಚರಿಸಿದ್ದಾರೆ.ಮಾರುಕಟ್ಟೆಗೆ ರೈತರು ಕೊಬ್ಬರಿಯನ್ನು ವರ್ಗೀಕ­ರಣ ಮಾಡಿ ತರುವುದರಿಂದ ಕೊಬ್ಬರಿಗೆ ಸೂಕ್ತ ಧಾರಣೆ ಸಿಗುತ್ತದೆ. ನೇರ ನಗದು ವ್ಯವಸ್ಥೆಯೂ ರೈತರನ್ನು ವಂಚಿಸಲು ಅವಕಾಶವಿಲ್ಲದ ಅವಕಾಶ ಸೃಷ್ಟಿ­ಸಿದೆ. ಎಲ್ಲ ರೀತಿಯಲ್ಲೂ ಈ ಹೊಸ ಪದ್ಧತಿ ಅನು­ಕೂಲವಾಗಿದೆ. ಹೀಗಿದ್ದರೂ ಕೊಬ್ಬರಿ ವರ್ತಕರು ತಮ್ಮ ಅನುಕೂಲಕ್ಕಾಗಿ, ಪಾರದರ್ಶಕ ರೀತಿಯಲ್ಲಿ­ರುವ ಆನ್ಲೈನ್ ಮಾರಾಟ ವ್ಯವಸ್ಥೆಯನ್ನು

ವಿರೋ­ಧಿಸುತ್ತಿದ್ದಾರೆ.ಇದರಿಂದ ರೈತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಆನ್‌ಲೈನ್‌ ವ್ಯವಸ್ಥೆಯಲ್ಲೇ ಕೊಬ್ಬರಿ ಮಾರಾಟ ಮಾಡಲು ರೈತರು ಮಂದಾಗಬೇಕು. ಅಲ್ಲದೇ ರಾಜ್ಯ ಸರ್ಕಾರ ಈ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಯತ್ನ ಮಾಡಬಾರದು ಎಂದು ಬಿ.ಎಸ್.ದೇವರಾಜು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.ಕೊಬ್ಬರಿ ರವಾನೆದಾರರು, ದಲ್ಲಾಳಿಗಳು, ರೈತ­ರೊಂ­­ದಿಗೆ ಎಪಿಎಂಸಿಯಲ್ಲಿ ಅಧಿಕಾರಿಗಳು ಸಭೆ ನಡೆಸಿ ಸಾಧಕ, ಬಾಧಕ ಚರ್ಚಿಸಿಯೇ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಸಭೆ ಸಂದರ್ಭ ಸಮ್ಮತಿ ಸೂಚಿಸಿದ ವರ್ತಕರು ಈಗ ತಕರಾರು ತೆಗೆದಿರುವುದು ಸರಿಯಲ್ಲ.ಸ್ವತಃ ವರ್ತಕರೂ ಆದ ಶಾಸಕ ಕೆ.ಷಡಕ್ಷರಿ ಕೂಡ ಈ ಪದ್ಧತಿ ಬಗ್ಗೆ ಅಷ್ಟಾಗಿ ಆಸಕ್ತಿ ತಾಳಿದಂತೆ ಕಾಣದಿರುವುದು ಅನು­ಮಾನಕ್ಕೆ ಆಸ್ಪದ ನೀಡಿದೆ ಎಂದು ಆರೋ­ಪಿಸಿ­ದ್ದಾರೆ. ಏನೇ ಆದರೂ ಈ ಪದ್ಧತಿ ಕೈಬಿಡಲು ರೈತರ ಸಂಘ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.