ಭಾನುವಾರ, ಮೇ 22, 2022
21 °C

ಈಜು: ಭಾರತಕ್ಕೆ ಮತ್ತೆ ಎರಡು ಸ್ವರ್ಣ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಈಜು ಸ್ಪರ್ಧಿಗಳು ಜಕಾರ್ತಾದಲ್ಲಿ ನಡೆಯುತ್ತಿರುವ ಏಳನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ದಿನವಾದ ಬುಧವಾರವೂ ಪ್ರಾಬಲ್ಯ ಮೆರೆದರು.ಎರಡು ಸ್ವರ್ಣ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆಲ್ಲುವುದರೊಂದಿಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆಯನ್ನು ಭಾರತದವರು 24 ಆಗಿಸಿಕೊಂಡರು.ವೀರ್‌ಧವಳ್ ಖಾಡೆ ಭಾರತದ ಖಾತೆಗೆ ಏಳು ಸ್ವರ್ಣ ಹಾಗೂ ಎರಡು ಬೆಳ್ಳಿ ಪಕದ ಸೇರಿಸಿದ್ದಾರೆ. ಖಾಡೆ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ (ಕಾಲ: 0:50.31 ಸೆ.) ಬುಧವಾರ ಅಗ್ರಸ್ಥಾನದ ಗೌರವ ಪಡೆದರು. ಮೂರನೇ ದಿನ ಭಾರತಕ್ಕೆ ಇನ್ನೊಂದು ಬಂಗಾರ ಬಂದಿದ್ದು ರಿಚಾ ಮಿಶ್ರಾ ಪ್ರಯತ್ನದಿಂದ. ಅವರು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ (4:33.77 ಸೆ.) ಮೊದಲಿಗರಾಗಿ ಗುರಿ ಮುಟ್ಟಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.