ಈ ವಾರ ತೆರೆಗೆ
`ಮೊದಲ ಮಿಂಚು~
`ಮೊದಲ ಮಿಂಚು~ ವೆಸ್ಲಿ ಬ್ರೌನ್ ನಿರ್ದೇಶಿಸಿರುವ ಸಿನಿಮಾ. ಕತೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ಸಂಗೀತ, ನೃತ್ಯ ನಿರ್ದೇಶನ ಅವರದೇ. ಇದರೊಂದಿಗೆ ನಿರ್ಮಾಣದ ಹೊಣೆ ಕೂಡ ಅವರದೇ. ನಾಲ್ಕೂವರೆ ನಿಮಿಷದ ಹಾಡೊಂದನ್ನು ಒಂದೇ ಟೇಕ್ನಲ್ಲಿ ಸೆರೆ ಹಿಡಿದಿರುವುದು ವಿಶೇಷ.
ಚಿತ್ರದ ನಾಯಕ ಹೇಮಂತ್, ನಾಯಕಿ ಸುಪ್ರಿತಾ. ಸಾಧು ಕೋಕಿಲಾ, ದೊಡ್ಡಣ್ಣ ಹಾಗೂ ಇನ್ನಿತರರು ನಟಿಸಿದ್ದಾರೆ.
`ಶ್ರೀ ಕ್ಷೇತ್ರ ಆದಿಚುಂಚನಗಿರಿ~
ಓಂ ಸಾಯಿ ಪ್ರಕಾಶ್ ನಿರ್ದೇಶನದ `ಶ್ರೀ ಕ್ಷೇತ್ರ ಆದಿಚುಂಚನಗಿರಿ~ ಚಿತ್ರದಲ್ಲಿ ಶ್ರೀಮುರುಳಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಅಂಬರೀಷ್, ಶ್ರುತಿ, ಪದ್ಮಾ ವಾಸಂತಿ, ರಮೇಶ್ ಭಟ್, ಜಯಂತಿ, ಅನು ಪ್ರಭಾಕರ್, ಶಿವಕುಮಾರ್ ಅಭಿನಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.