ಬೈಂದೂರು: ಬೈಂದೂರು ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ಬುಧವಾರ ಇಲ್ಲಿನ ಪ್ರಮುಖ ನದಿ ಸೌಪರ್ಣಿಕಾ ಉಕ್ಕಿ ಹರಿದು ಇಕ್ಕಡೆಯ ಪ್ರದೇಶವನ್ನು ಜಲಾವೃತಗೊಳಿಸಿದೆ. ನದಿ ದಂಡೆಯ ಮೇಲಿನ ಮನೆಗಳ ಸುತ್ತ ಪ್ರವಾಹದ ನೀರು ನಿಂತಿದ್ದು, ಕೆಲವು ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ.

ಕೊಲ್ಲೂರು ಬಳಿಯ ಘಟ್ಟದಲ್ಲಿ ಹುಟ್ಟಿ ಹಲವು ಗ್ರಾಮಗಳನ್ನು ಬಳಸಿ ಹರಿದು ಗಂಗೊಳ್ಳಿಯಲ್ಲಿ ಸಮುದ್ರ ಸೇರುವ ಈ ನದಿಯ ಹೇರೂರು ಗ್ರಾಮ ಮತ್ತು ಹರಿವಿನ ಕೆಳಪ್ರದೇಶದಲ್ಲಿರುವ ನಾವುಂದ, ಬಡಾಕೆರೆ, ಮರವಂತೆ, ಹಡವು, ನಾಡ, ಸೇನಾಪುರ, ತ್ರಾಸಿ, ಹೊಸಾಡು ಗ್ರಾಮಗಳ ತಗ್ಗು ಪ್ರದೇಶ ಗಳಲ್ಲಿ ನೆರೆ ನೀರು ತುಂಬಿದ್ದು, ಸಂಪರ್ಕ ರಸ್ತೆಗಳು ಮುಳುಗಿಕೊಂಡಿವೆ.

ಮಂಗಳವಾರ ರಾತ್ರಿ ಆರಂಭವಾದ ನೆರೆ ಬುಧವಾರ ಹಗಲು ಒಂದೇ ಸಮನೆ ಏರುತ್ತಹೋಗಿ ಸಂಜೆ ನದಿ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತು. ಹೇರೂರು ಗ್ರಾಮದ ಚಿಕ್ತಾಡಿ, ಕೆಳಾಬೈಲು, ನಾವುಂದದ ಸಾಲ್ಬುಡ ಹೆಚ್ಚು ಬಾಧಿತವಾದುವು.

ಹೇರೂರಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ, ಯುವಕರರಾದ ಉಮೇಶ, ಉದಯ ಮೊಗವೀರ, ಕುಷ್ಟ ಅವರೊಂದಿಗೆ ಸೇರಿ ಸಂಭಾವ್ಯ ಅಪಾಯವಿರುವ ಕೆಳಾಬೈಲಿನ ಬಚ್ಚು ಪೂಜಾರಿ, ಚಿಕ್ತಾಡಿಯ ಶೀನ ಅಂಕೋಲೆ ಮನೆ, ರಾಧಾ, ಮರ್ಲಿ ಮೊಗವೀರ, ಸುಶೀಲಾ ದೇವಾಡಿಗ, ಕೆಳಹಿತ್ಲು ಕೃಷ್ಣ ಅವರ ಮನೆಯವರನ್ನು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ನಾವುಂದದ ಸಾಲ್ಬುಡ ನದಿ ತೀರದ ಅತ್ಯಂತ ತಗ್ಗು ಪ್ರದೇಶವಾಗಿದ್ದು, ಅಲ್ಲಿನ ಸುಮಾರು 60 ಮನೆಗಳಿಗೆ ನೆರೆನೀರು ಸಮಸ್ಯೆ ಸೃಷ್ಟಿಸಿದೆ. ಮಧ್ಯಾಹ್ನದ ಹೊತ್ತಿಗೆ ಅಲ್ಲಿನ ನಿವಾಸಿಗಳು ಮುಂಜಾಗ ರೂಕತಾ ಕ್ರಮವಾಗಿ ತಮ್ಮ ಜಾನು ವಾರನ್ನು ಎತ್ತರದ ಸ್ಥಳಕ್ಕೆ ಸಾಗಿಸಿದರು.

ಸಂಜೆ ಹೊತ್ತಿಗೆ ಮಳೆಯ ಅಬ್ಬರ ಕಡಿಮೆಯಾದರೂ ದಟ್ಟ ಮೋಡ ಮುಸುಕಿದೆ. ಗಾಳಿಯ ಆರ್ಭಟ ಅಷ್ಟಾಗಿಲ್ಲದಿರುವುದರಿಂದ ಘಟ್ಟದಲ್ಲಿ ಬೀಳುವ ಮಳೆ ಕಡಿಮೆಯಾಗಿ, ರಾತ್ರಿ ಹೊತ್ತಿಗೆ ಪ್ರವಾಹದ ಮಟ್ಟ ಕುಸಿಯುವ ನಿರೀಕ್ಷೆ ಹುಟ್ಟಿಸಿದೆ, ಗ್ರಾ.ಪಂ. ಅಧ್ಯಕ್ಷರು, ಕಂದಾಯ ಇಲಾಖೆಯ ಅಧಿಕಾರಿ ಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.