ವಿಶ್ವಸಂಸ್ಥೆ (ಪಿಟಿಐ): ಉಕ್ರೇನ್ ಬಿಕ್ಕಟ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತುಸಭೆ ನಡೆಸಿದ್ದು, ಮಾತುಕತೆಯ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ ಮಾಡಿದೆ.

‘ಉಕ್ರೇನ್ನಲ್ಲಿಯ ಇತ್ತೀಚಿನ ಬೆಳವಣಿಗೆಗಳನ್ನು ಭದ್ರತಾ ಮಂಡಳಿ ಅವಲೋಕಿಸಿದ್ದು ತೀವ್ರ ಕಳವಳ ವ್ಯಕ್ತಪಡಿಸಿತು’ ಎಂದು ಮಂಡಳಿ ಸಭೆಯ ಅಧ್ಯಕ್ಷತೆವಹಿಸಿದ್ದ, ಲಿಥುವಾನಿಯಾದ ಕಾಯಂ ಪ್ರತಿನಿಧಿ ರೈಮೊಂಡಾ ಮರ್ಮೊಕೇಟ್ ತಿಳಿಸಿದರು.

ಉಕ್ರೇನ್ ವಿದ್ಯಮಾನಗಳ ಕುರಿತು ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಸಹಾಯಕ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ತೆರಾಂಕೊ ಅವರು ಮಂಡಳಿಗೆ ವಿವರಣೆ ನೀಡಿದರು ಎಂದು ಮರ್ಮೊಕೇಟ್ ತಿಳಿಸಿದರು.

‘ಉಕ್ರೇನ್ನ ಸಾರ್ವಭೌಮತೆ, ಏಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಂಡಳಿ ಬೆಂಬಲ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ದೇಶದ ಎಲ್ಲ ರಾಜಕೀಯ ಶಕ್ತಿಗಳು ಒಮ್ಮತಾಭಿಪ್ರಾಯಕ್ಕೆ ಬರಬೇಕು. ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದು ಮಂಡಳಿ ಸಲಹೆ ನೀಡಿದೆ.

ಈ ಸಂದರ್ಭ ಹಾಜರಿದ್ದ ವಿಶ್ವಸಂಸ್ಥೆಯಲ್ಲಿನ ಉಕ್ರೇನ್ ರಾಯಭಾರಿ ಯೂರಿ ಸೆರ್ಜೆವ್, ‘ಉಕ್ರೇನ್ ಮೇಲೆ ದಾಳಿ ನಡೆಸಲು ಕಾನೂನುಬಾಹಿರವಾಗಿ ರಷ್ಯಾ ಸೇನಾ ವಿಮಾನಗಳನ್ನು ಹಾಗೂ ಹೆಲಿಕಾಪ್ಟರ್ಗಳನ್ನು ಕಳುಹಿಸಿ ಕೊಡುತ್ತಿದೆ’ ಎಂದು ದೂರಿದರು.

ಉಕ್ರೇನ್ನಲ್ಲಿ ರಷ್ಯಾ ಪರ ಹಾಗೂ ಅಮೆರಿಕ ಮತ್ತಿತರ ಪಶ್ಚಿಮ ರಾಷ್ಟ್ರಗಳ ಪರ ಇರುವ ಬಣಗಳ ನಡುವೆ ಸಂಘರ್ಷ ನಡೆಯುತ್ತಿದ್ದು ನೂರಾರು ಜನ ಸಾವನ್ನಪ್ಪಿದ್ದಾರೆ.

ಮಿಲಿಟರಿ ಕಾರ್ಯಾಚರಣೆಗೆ ಅನುಮತಿ ಕೋರಿದ ಪುಟಿನ್
ಕೀವ್ (ಎಪಿ): ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಲು ಅನುಮತಿ ನೀಡುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲ್ಲಿನ ಸಂಸತ್ತನ್ನು ಕೋರಿದ್ದಾರೆ.

ಉಕ್ರೇನ್ನಲ್ಲಿರುವ ರಷ್ಯನ್ನರ ರಕ್ಷಣೆ ದೃಷ್ಟಿಯಿಂದ ಅಲ್ಲಿ ಮಿಲಿಟರಿ ಕಾರ್ಯಾಚರಣೆ ಮಾಡುವುದು ಅನಿವಾರ್ಯ ಎಂದು ತಮ್ಮ ಮನವಿಯಲ್ಲಿ ಪುಟಿನ್ ತಿಳಿಸಿರುವುದಾಗಿ ರಷ್ಯಾ ಮಿಲಿಟರಿ ಕ್ರೇಮ್ಲಿನ್ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯವಾಗಿ ಕ್ರಿಮಿಯಾದಲ್ಲಿ ಕಾರ್ಯಾಚರಣೆ ಮಾಡುವುದಕ್ಕೆ ಅವರು ಅನುಮತಿ ಕೋರಿದ್ದಾರೆ.

‘ರಷ್ಯಾದಿಂದ ಆಕ್ರಮಣಕಾರಿ ನಡಿಗೆ’
ಸಿಂಫರ್ಪೊಲ್ (ಉಕ್ರೇನ್) (ಎಎಫ್ಪಿ): ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ದೇಶದ ಪ್ರಮುಖ ಪರ್ಯಾಯ ದ್ವೀಪ ಕ್ರಿಮಿಯಾಕ್ಕೆ ರಷ್ಯಾ ಸಾವಿರಾರು ಸೈನಿಕರನ್ನು ಕಳುಹಿಸುತ್ತಿದೆ ಎಂದು ಅದು ಆರೋಪ ಮಾಡಿದೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ಕ್ರಿಮಿಯಾದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದೆ.

ಈ ನಡುವೆ ಒಂದೊಮ್ಮೆ ಕ್ರಿಮಿಯಾದಲ್ಲಿ ರಷ್ಯಾ ತನ್ನ ಬಲ ಪ್ರಯೋಗಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಉಕ್ರೇನ್ನ ಮಧ್ಯಾಂತರ ಸರ್ಕಾರದ ಸಂಪುಟಕ್ಕೆ ಮಾಹಿತಿ ನೀಡಿರುವ ರಕ್ಷಣಾ ಸಚಿವ ಈಗೊರ್ ಟೆಯುಕ್, ಕ್ರಿಮಿಯಾಗೆ ರಷ್ಯಾ ಸುಮಾರು ಆರು ಸಾವಿರ ಹೆಚ್ಚುವರಿ ಸೈನಿಕರನ್ನು ಕಳುಹಿಸಿದೆ ಎಂದು ತಿಳಿಸಿದ್ದಾರೆ.

ಕ್ರಿಮಿಯಾ ರಾಜಧಾನಿ ಸಿಂಫರ್ಪೊಲ್ ಹೊರ ವಲಯದಲ್ಲಿ ರಷ್ಯಾ ಬೆಂಬಲಿತ ಶಸ್ತ್ರ ಸಜ್ಜಿತ ಪಡೆಗಳು ಕಾವಲು ಕಾಯುತ್ತಿವೆ. ಈ ಬಗ್ಗೆ ಉಕ್ರೇನ್ಗೆ ರಷ್ಯಾ ಮಾಹಿತಿ ನೀಡಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.