ಸೋಮವಾರ, ಮೇ 17, 2021
28 °C

ಉಗ್ರರ ದಾಳಿಗೆ ಜಿನ್ನಾ ಬಂಗಲೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ದಾಳಿಗೆ ಜಿನ್ನಾ ಬಂಗಲೆ ನಾಶ

ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಜಿರಾತ್ ನಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಅವರ ಐತಿಹಾಸಿಕ ಭವ್ಯ ಕಟ್ಟಡ ಉಗ್ರರ ಮತ್ತು ಪಾಕಿಸ್ತಾನ ಯೋಧರ ನಡುವೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ನಾಶವಾಗಿದೆ.ಉಗ್ರರು ಜಿನ್ನಾ ಅವರ ಬಂಗಲೆ ಸಮೀಪದಲ್ಲಿದ್ದ  ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಆಗ ಪಾಕಿಸ್ತಾನಿ ಯೋಧರು ಪ್ರತಿ ದಾಳಿ ನಡೆಸಿದಾಗ  ಉಗ್ರರು ಜಿನ್ನಾ ಅವರ ಬಂಗಲೆಯಲ್ಲಿ ಅಡಗಿಕೊಂಡಿದ್ದಾರೆ ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿ ಮತ್ತು ಬಾಂಬ್ ದಾಳಿಯಲ್ಲಿ ಜಿನ್ನಾ ಅವರ ಐತಿಹಾಸಿಕ ಬಂಗಲೆ ನಾಶವಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ದೃಶ್ಯ ಸಮೇತ ಬಿತ್ತರಿಸಿವೆ.ಘಟನೆಯಲ್ಲಿ ಓರ್ವ ಪಾಕ್‌ಯೋಧ ಸಾವನ್ನಪ್ಪಿದ್ದಾನೆ. ಈ ಕಟ್ಟಡಕ್ಕೆ  121 ವರ್ಷಗಳ ಇತಿಹಾಸವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.