ಲಾಹೋರ್ (ಪಿಟಿಐ): ನಿಷೇಧಿತ ಉಗ್ರ ಸಂಘಟನೆ `ಲಷ್ಕರ್-ಎ- ತೈಯಬಾ'ದ ಮಾರುವೇಷದ ಸಂಘಟನೆ `ಜಮಾತ್-ಉದ್-ದವಾ' (ಜೆಯುಡಿ) ಪ್ರಧಾನ ಕೇಂದ್ರಕ್ಕೆ ರೂ 6.1 ಕೋಟಿ ಅನುದಾನ ನೀಡಿರುವುದನ್ನು ಪಾಕ್ನ ಪಂಜಾಬ್ ಪ್ರಾಂತ್ಯದ ಸರ್ಕಾರ ಸಮರ್ಥಿಸಿಕೊಂಡಿದೆ. ಅಲ್ಲಿನ ಜನರ ಸೌಲಭ್ಯಗಳಿಗಾಗಿ ಇಷ್ಟು ಮೊತ್ತದ ಅನುದಾನ ನೀಡುವುದು ಅಗತ್ಯವಾಗಿತ್ತು ಎಂದು ಪಂಜಾಬ್ ಪ್ರಾಂತ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಜೆಡಿಯುನಿಂದ ನಡೆಸಲ್ಪಡುತ್ತಿರುವ ಸಂಸ್ಥೆಗಳ ಆಡಳಿತದ ನಿರ್ವಹಣೆಯನ್ನು ಪಂಜಾಬ್ ಪ್ರಾಂತ್ಯ ಸರ್ಕಾರವೇ ನಿಯಂತ್ರಿಸುತ್ತಿದೆ. ಈ ನಿಯಂತ್ರಣದ ಹಿಂದೆ ಎರಡು ಮುಖ್ಯ ಉದ್ದೇಶಗಳಿವೆ. ಮೊದಲನೆಯದು ಜೆಯುಡಿ ತನ್ನ ಚಟುವಟಿಕೆಗಳನ್ನು ಮುಂದುವರೆಸದಂತೆ ತಡೆಯುವುದು ಹಾಗೂ ಅಲ್ಲಿನ ಸ್ಥಳೀಯರಿಗೆ ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯ ಒದಗಿಸುವುದು ಎಂದು ವಕ್ತಾರರು ವಿವರಿಸಿದ್ದಾರೆ.

ಜನರಿಗೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಆಡಳಿತ ನಿರ್ವಹಣೆಗಾಗಿಯೇ ಪಂಜಾಬ್ ಪ್ರಾಂತ್ಯ ಸರ್ಕಾರ 2008ರಿಂದಲೇ ಅಧಿಕಾರಿಗಳನ್ನು ನೇಮಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.