ಉದ್ಯೋಗಕ್ಕಾಗಿ ಮೃತರ ಕುಟುಂಬದ ಪ್ರತಿಭಟನೆ

7

ಉದ್ಯೋಗಕ್ಕಾಗಿ ಮೃತರ ಕುಟುಂಬದ ಪ್ರತಿಭಟನೆ

Published:
Updated:

ಬೆಂಗಳೂರು: ಸೇವೆಯಲ್ಲಿರುವ ವೇಳೆ ಮೃತಪಟ್ಟ ಸಿಬ್ಬಂದಿಗಳ ಕುಟುಂಬ ವರ್ಗದವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ನಗರದ  ಬನ್ನೇರುಘಟ್ಟ ರಸ್ತೆಯ ಜಲಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.`ಸುಮಾರು ಹತ್ತು ವರ್ಷಗಳಿಂದ ಅರ್ಹರಿಗೆ ಉದ್ಯೋಗ ನೀಡದೆ ಮಂಡಲಿ ನಿರ್ಲಕ್ಷ್ಯ ಧೋರಣೆ ತಾಳಿದೆ. 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಉದ್ಯೋಗ ನೀಡಲು ಮಂಡಲಿ ಮುಂದೆ ಬರುತ್ತಿಲ್ಲ. ರಾಜ್ಯದ ವಿವಿಧ ಭಾಗಗಳ 250ಕ್ಕೂ ಹೆಚ್ಚು ಮೃತ ಉದ್ಯೋಗಿಗಳ ಕುಟುಂಬ ವರ್ಗದವರಿಗೆ ಕೆಲಸ ನೀಡಬೇಕಿದೆ~ ಎಂದು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದ ಗೌಡೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry