ಮಂಗಳವಾರ, ಏಪ್ರಿಲ್ 13, 2021
23 °C

ಉದ್ಯೋಗಾವಕಾಶಕ್ಕೆ ಸಂವಹನ ಕೌಶಲ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ:  ಆಧುನಿಕ ಜಗತ್ತಿನ ಉದ್ಯೋಗ ಅವಕಾಶದ ಸವಾಲುಗಳನ್ನು ಎದುರಿಸಲು ಸಂವಹನ ಕೌಶಲ ಅವಶ್ಯವಾಗಿದೆ, ಉತ್ತಮ ಸಂವಹನ ಕೌಶಲ ಇದ್ದವರಿಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳು ಇರುತ್ತವೆ ಎಂದು ಲಿಂಗರಾಜ ಕಾಲೇಜಿನ ಉಪನ್ಯಾಸಕಿ ಡಾ.ಗುರುದೇವಿ ಹುಲೆಪ್ಪನವರಮಠ ಅಭಿಪ್ರಾಯ ಪಟ್ಟರು.ನಗರದ ಕೆಎಲ್‌ಇ ಸಂಸ್ಥೆಯ ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ‘ಸಂವಹನ ನೈಪುಣ್ಯತೆ ಮತ್ತು ಮಾಹಿತಿ ತಂತ್ರಜ್ಞಾನ ಪ್ರಾಮುಖ್ಯತೆ’ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ಸಂವಹನ ಕೌಶಲ ಕಲೆ ಹಾಗೂ ಮಾಹಿತಿ ತಂತ್ರಜ್ಞಾನದ ಜ್ಞಾನದಿಂದ ಉದ್ಯೋಗದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ’ ಎಂದು ಅವರು ಹೇಳಿದರು.ಡಾ.ರಶ್ಮಿ ಕದಮ್ ಮಾತನಾಡಿ, ಜಾಗತೀಕರಣದಲ್ಲಿ ‘ಸಾಫ್ಟ್ ಸ್ಕಿಲ್ಸ್’ ಮಹತ್ವ ಪಡೆದುಕೊಂಡಿವೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಸ್. ಕೊಟ್ರಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಸಂವಹನ ಕೌಶಲ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.ಅನುಜಾ ಮುಸಳೆ ನಿರೂಪಿಸಿದರು. ಪ್ರೊ.ಜ್ಯೋತಿ ಪಾಟೀಲ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.