ಶುಕ್ರವಾರ, ಜೂನ್ 18, 2021
23 °C

ಉನ್ನತ ಮಟ್ಟಕ್ಕೆ ಏರಲು ಶಿಕ್ಷಣ ಅವಶ್ಯ: ಹೆಬ್ಬಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಉನ್ನತ ಶಿಕ್ಷಣ ಪಡೆ ಯಲು ಇಂದು ಹಲವಾರು ಅವಕಾಶ ಗಳಿದ್ದು, ಹೆಚ್ಚು ಶ್ರಮಪಡುವ ವಿದ್ಯಾರ್ಥಿಗಳು ಏಕ ಕಾಲದಲ್ಲಿಯೇ ಹಲವು ವಿಷಯಗಳಲ್ಲಿ ಪ್ರಾವಿಣ್ಯತೆ ಸಾಧಿಸಬಹುದು~ ಎಂದು ಸರಕಾರಿ ಕಾಲೇಜು ಉಪನ್ಯಾಸಕ ಎಂ.ಎಂ. ಹೆಬ್ಬಾಳ ಹೇಳಿದರು. ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಕಡು ಬಡತನಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಪದವಿಗೆ ಏರಿ ದೇಶ ಹಾಗೂ ಸಮಾಜ ಸೇವೆ ಮಾಡಿದ ಹಲವಾರು ಸಾಧಕರು ನಮ್ಮ ನಡುವೆ ಇದ್ದಾರೆ.ವಿದ್ಯಾರ್ಥಿಗಳು ಅರ್ಥಹೀನ ಕೆಲಸಗಳಲ್ಲಿ ವಿನಾಕಾರಣ ಸಮಯ ವನ್ನು ವ್ಯರ್ಥ ಮಾಡದೆ ಹೆಚ್ಚು ಹೆಚ್ಚು ಓದಬೇಕೆನ್ನುವುದನ್ನು ಮಾತ್ರ ಮನ ದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ~ ಎಂದು ಅವರು ಸಲಹೆ ನೀಡಿದರು.`ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ಕೆಲಸದ ಮೂಲಕ ಇಲಾಖೆ ಹಾಗೂ ಅಧಿಕಾರಿಗಳನ್ನು ತೃಪ್ತಿಪಡಿಸುವುಕ್ಕಿಂತ ಸಮಾಜದಲ್ಲಿರುವ ಜನರ ಹಾಗೂ ಪಾಲಕರು ಮೆಚ್ಚುವಂತೆ ಕೆಲಸ ಮಾಡಬೇಕು.ಸರಕಾರ ಹಾಗೂ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವುದಕ್ಕಿಂತ ಸಮಾಜದಿಂದ, ಪಾಲಕರಿಂದ ಮತ್ತು ಮಕ್ಕಳಿಂದ ಮನ್ನಣೆ ಗಳಿಸುವುದು ತುಂಬಾ ಅಗತ್ಯ~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೆರ ಹೇಳಿದರು. `ಶಿಕ್ಷಕರಿಗೆ ನೀಡುವ ವಿವಿಧ ಬಗೆಯ ತರಬೇತಿ ಹಾಗೂ ಅನ್ಯ ಕಾರ್ಯ ಗಳಿಂದಾಗಿ ಶಾಲೆಯ ಮಕ್ಕಳ ಅಭ್ಯಾಸಕ್ಕೆ ತುಂಬಾ ತೊಂದರೆಯಾಗು ತ್ತದೆ.  ಬರಲಿರುವ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ತಿಳಿದು ಬಂದಿದ್ದು, ಶಿಕ್ಷಕರಿಗೆ ಶಾಲಾ ಅವಧಿಯಲ್ಲಿ ತರಬೇತಿ ನೀಡು ವುದಕ್ಕಿಂತ ರಜಾ ಅವಧಿಯಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳುವ ಮೂಲಕ ಮಕ್ಕಳಿಗೆ ಉಂಟಾಗುವ ತೊಂದರೆ ಯನ್ನು ನಿವಾರಿಸಬೇಕು~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಸದಸ್ಯ ಶಿವಪ್ಪ ಕೋರಿಶಟ್ಟರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಕಾಶೀನಾಥ ಬಿಳಿಮಗ್ಗದ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ಗಂಗಾಧರ ಅಣ್ಣಿಗೇರಿ, ಶೇಖರಗೌಡ ಪಾಟೀಲ, ಈರಯ್ಯ ಹಿರೇಮಠ, ಕೊಟ್ರೇಶ ಅಂಗಡಿ ವೇದಿಕೆಯ ಮೇಲೆ ಹಾಜ ರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಎಂ.ಬಿ.ಮೇಟಿ ಸ್ವಾಗತಿಸಿ ದರು. ಭಾಗ್ಯಲಕ್ಷ್ಮಿ ಇನಾಮತಿ ಹಾಗೂ ಎಸ್.ಉಮಾದೇವಿ ಕಾರ್ಯ ಕ್ರಮ ನಿರೂಪಿಸಿದರು. ಉಮೇಶ ಬೂದಿಹಾಳ  ವಂದಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.