ಭಾನುವಾರ, ಏಪ್ರಿಲ್ 11, 2021
25 °C

ಉಪಚುನಾವಣೆ: ಮತ ಎಣಿಕೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ತಾಲ್ಲೂಕಿನ ಹಿರೇವಂಕಲಕುಂಟಾ ಜಿಪಂ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಮತದಾನದಲ್ಲಿ 16852 ಮತದಾರರು ಹಕ್ಕು ಚಲಾಯಿಸಿದ್ದಾರೆ. 8ರಂದು ನಡೆಯುವ ಮತಗಳ ಎಣಿಕೆಗೆ ಈಗಾಗಲೇ ವೇದಿಕೆ ಸಿದ್ದಗೊಂಡಿದೆ. ಹಾಗೆಯೇ ಕ್ಷೇತ್ರದಲ್ಲಿ ರಚಿಸಲಾದ ಒಟ್ಟು 31ಮತಗಟ್ಟೆಗಳ ಪೈಕಿ ದಾಖಲಾದ ಮತಗಳ ವಿವರ ಈ ಕೆಳಗಿನಂತಿವೆ.ಮಾಟಲದಿನ್ನಿ-1ರಲ್ಲಿ 655, 2ರಲ್ಲಿ471, ಕಲ್ಲಭಾವಿ412, ಯಡ್ಡೋಣಿ809, ಬುಡಕುಂಟಿ470, ಪುಟಗಮರಿ361, ಎನ್.ಜರಕುಂಟಿ222, ಹಿರೇವಂಕಲಕುಂಟಾ(1)579, 2ರಲ್ಲಿ657, ಉಪ್ಪಲದಿನ್ನಿ235, ಯಾಪಲದಿನ್ನಿ463, ನಿಲೋಗಲ್ಲ399, ಚಿಕ್ಕವಂಕಲಕುಂಟಾ446, ಉಚ್ಚಲಕುಂಟಾ429, ತಾಳಕೇರಿ-1ರಲ್ಲಿ605, 2ರಲ್ಲಿ 612,ಚೌಡಾಪೂರ445, ಚಿಕ್ಕಮನ್ನಾಪೂರ491, ಗುಳೆ429, ಬೋದೂರ728, ಗುಂಟಮಡು306, ಗಾಣದಾಳ-1ರಲ್ಲಿ718, 2ರಲ್ಲಿ522, ಮರಕಟ್582, ಹಿರೇವಡ್ರಕಲ್ಲ673, ಕಟಗಿಹಳ್ಳಿ571, ತಿಪ್ಪನಾಳ392, ಗುನ್ನಾಳ-1ರಲ್ಲಿ791, 2ರಲ್ಲಿ923, ಹುಣಸಿಹಾಳ-1ರಲ್ಲಿ664, 2ರಲ್ಲಿ792 ಮತ ಚಲಾವಣೆಯಾಗಿವೆ. ಮತ ಎಣಿಕೆಗೆ ತಹಸೀಲ್ ಕಚೇರಿಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ ಈ.ಡಿ. ಭೃಂಗಿ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.