ಶುಕ್ರವಾರ, ಜೂನ್ 18, 2021
28 °C

ಉಪಚುನಾವಣೆ: ಶಾಂತಿಯುತ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಐಎಎನ್‌ಎಸ್): ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ರಾಜೀನಾಮೆಯಿಂದ ತೆರವಾದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಮತದಾನವು ಭಾನುವಾರ ಶಾಂತಿಯುತವಾಗಿ ಮುಕ್ತಾಯ ಕಂಡಿದೆ.

ಶೇ. 60 ರಷ್ಟು ಮತದಾನವಾಗಿದ್ದು, ಎಲ್ಲೆಡೆ ಶಾಂತಿಯುತವಾಗಿತ್ತೆಂದು ಪ್ರಾಥಮಿಕ ವರದಿಗಳು ತಿಳಿಸಿವೆ

ಆರಂಭದಲ್ಲಿ ಬೆಳಿಗ್ಗೆ ಮತದಾನ ಅತ್ಯಂತ ನೀರಸವಾಗಿತ್ತೆಂದು ವರದಿಗಳು ತಿಳಿಸಿದರೂ ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ಕ್ರಮೇಣ ಚುರುಕುಗೊಂಡಿತು. ಮಧ್ಯಾಹ್ನದ ನಂತರವಂತೂ ಮತದಾನ ವೇಗ ಪಡೆದು ಅಂತಿಮವಾಗಿ ಸಂಜೆ ಹೊತ್ತಿಗೆ ಶೇ.60 ರಷ್ಟು ಮತದಾನವಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.