ಗುರುವಾರ , ಮೇ 13, 2021
39 °C

ಉಪನ್ಯಾಸಕರ ವರ್ಗಾವಣೆ ರದ್ದಿತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಹಿರೇಕೆರೂರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರೊಬ್ಬರ  ವರ್ಗಾವಣೆಯನ್ನು ರದ್ದುಪಡಿ ಸಲು ಒತ್ತಾಯಿಸಿ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.ಭೂಗೋಳಶಾಸ್ತ್ರ ಉಪನ್ಯಾಸಕ ಎಂ. ವೈ.ಜಟ್ಟೆಣ್ಣನವರ ಅವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತಮ ವಾಗಿ ಉಪನ್ಯಾಸ ಮಾಡುವ ಅವರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಗಿದೆ. ಕಾರಣ ಅವರ ವರ್ಗಾವಣೆ ರದ್ದುಪಡಿಸಿ ಇಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ   ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ಉಪತಹ ಸೀಲ್ದಾರ ತುಷಾರ ಹೊಸೂರ ಮನವಿ ಸ್ವೀಕರಿಸಿ, ಎಂ.ವೈ.ಜಟ್ಟೆಣ್ಣನವರ ಅವರನ್ನು ಸದ್ಯ ಬಿಡುಗಡೆಗೊಳಿಸದಂತೆ ಪ್ರಾಚಾರ್ಯರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡದ ನಂತರ ಪ್ರತಿಭಟನೆ ಕೈಬಿಡಲಾಯಿತು.ಎಬಿವಿಪಿ ಮುಖಂಡ ದೇವರಾಜ ಹಂಚಿನಮನಿ, ವಿದ್ಯಾರ್ಥಿಗಳಾದ ಅನಿಲ ಹಲ ವಾಗಿಲ, ಪ್ರವೀಣ ಕುರುವತ್ತೇರ, ಅಜಯ ಕಲ್ಯಾಣಿ, ಕಿರಣ ಭಜಂತ್ರಿ, ಪ್ರಕಾಶ ಅರಳೀಕಟ್ಟಿ, ಸ್ಮಿತಾ ಪಾಟೀಲ, ಗೀತಾ ಮಾಯಾಚಾರಿ, ಶ್ರೀದೇವಿ ಗೊರವರ, ರೂಪಾ ಜೋಗಿಹಳ್ಳಿ, ಅಶ್ವಿನಿ ಹಿರೇಮಠ, ರಂಜಿತಾ ಕಲಾಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.