ಶನಿವಾರ, ಮೇ 15, 2021
25 °C

ಉಮಾದೇವಿ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್. ಉಮಾದೇವಿ ನಾಗರಾಜ್ ಅವರು ಇಂಗ್ಲೆಂಡ್‌ನಲ್ಲಿ ನಡೆದ `ವರ್ಲ್ಡ್ ಲೇಡೀಸ್ ಬಿಲಿಯರ್ಡ್ಸ್ ಮತ್ತು ಸ್ನೂಕರ್~ ಸಂಸ್ಥೆ ಆಶ್ರಯದ ವಿಶ್ವ ಚಾಂಪಿಯನ್‌ಷಿಪ್‌ನ ಸೀನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಕೇಂಬ್ರಿಜ್ ಸ್ನೂಕರ್ ಸೆಂಟರ್‌ನಲ್ಲಿ ಸೋಮವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕರ್ನಾಟಕದ ಉಮಾದೇವಿ 2-0 ರಲ್ಲಿ ಎವಾ ಪಾಲ್ಮಿಸ್ ಅವರನ್ನು ಮಣಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಅವರು ಜೆನ್ನಿ ಪಾಲ್ಟೆರ್ ವಿರುದ್ಧ ಜಯ ಪಡೆದಿದ್ದರು.

ಆದರೆ ಚಾಂಪಿಯನ್‌ಷಿಪ್‌ನ ಪ್ರಧಾನ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಚಿತ್ರಾ ಮಗಿಮೈರಾಜ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದರು. ಅವರು 0-3 ರಲ್ಲಿ ರೆನೆ ಎವಾನ್ಸ್ ಕೈಯಲ್ಲಿ ಪರಾಭವಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.