ಸೋಲ್ (ನ್ಯೂಯಾರ್ಕ್ ಟೈಮ್ಸ್): ಉತ್ತರ ಕೊರಿಯಾದ ಯುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಾವ (ತಂದೆಯ ಸಹೋದರಿಯ ಪತಿ) ಜಾಂಗ್ ಸೊಂಗ್ಥೇಕ್ ಅವರಿಗೆ ಸೇನಾಕ್ರಾಂತಿಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಮರಣದಂಡನೆ ಜಾರಿಗೊಳಿಸಲಾಗಿದೆ.

ಹಲವು ವರ್ಷಗಳ ನಂತರ ರಾಜಕುಟುಂಬದ ಸದಸ್ಯರೊಬ್ಬರಿಗೆ ಮರಣದಂಡನೆ ವಿಧಿಸಲಾಗಿದೆ.ಸೊಂಗ್ಥೇಕ್ಗೆ ತಪ್ಪಿತಸ್ಥ ಎಂದು ವಿಶೇಷ ಸೇನಾ ನ್ಯಾಯಾಲಯ ಗುರುವಾರ ಘೋಷಿಸಿದ ನಂತರ ಮರಣದಂಡನೆ ಕಾಯಂಗೊಳಿಸಲಾಯಿತು.

ಸೊಂಗ್ಥೇಕ್ ವಿಶ್ವಾಸಘಾತುಕ ಹಾಗೂ ನಾಯಿಗಿಂತ ಕಡೆ. ಅಧಿಕಾರ ದಾಹದಿಂದ ಆತ ಬುದ್ಧಿಶಕ್ತಿ ಕಳೆದುಕೊಂಡಿದ್ದ ಎಂದು ಸರ್ಕಾರಿ ಒಡೆತನದ ಕೊರಿಯಾ ಸುದ್ದಿಸಂಸ್ಥೆ ಹೇಳಿದೆ.

ಸೇನೆಯನ್ನು ಸಂಘಟಿಸಿಕೊಂಡು ದೇಶದ ಅಧಿಕಾರ ಪಡೆದುಕೊಳ್ಳಲು ಸಂಚು ರೂಪಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಉ. ಕೊರಿಯಾದಲ್ಲಿ ಅಪರಾಧಿಗಳನ್ನು ಗುಂಡಿಕ್ಕಿ ಸಾಯಿಸಲಾಗುತ್ತದೆ. ಆದರೆ ಸೊಂಗ್ಥೇಕ್ನನ್ನು ಯಾವ ರೀತಿ ಸಾಯಿಸಲಾಗಿದೆ ಎಂಬುದನ್ನು ಸುದ್ದಿಸಂಸ್ಥೆ ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.