ಮೈಸೂರು: ‘ಸೀತೆಯ ಬೆತ್ತಲೆಯ ಚಿತ್ರ ಬಿಡಿಸಿದ್ದಕ್ಕೆ ಭಾರಿ ಪ್ರತಿಭಟನೆ ವ್ಯಕ್ತವಾದ ಪರಿಣಾಮ ಬೇಸತ್ತ ಚಿತ್ರಕಲಾವಿದ ಎಂ.ಎಫ್. ಹುಸೇನ್ ಈ ದೇಶ ಬಿಟ್ಟು ಹೋದರು. ಅವರು ಹಿಂದೂ ಆಗಿದ್ದರೆ ಕೇಂದ್ರ ಸರ್ಕಾರ ಸುಮ್ಮನಿರುತ್ತಿತ್ತೆ? ಎಂದು ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ಪ್ರಶ್ನಿಸಿದರು.

ನಗರದ ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಅಂಗವಾಗಿ ಚಲನಚಿತ್ರೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ಚಿತ್ರಕಲಾವಿದರಾಗಿದ್ದ ಎಂ.ಎಫ್. ಹುಸೇನ್ ಅವರಿಗೆ ಈ ದೇಶದಲ್ಲಿ ಸರಿಯಾದ ಮನ್ನಣೆ ಸಿಗಲಿಲ್ಲ. 95ನೇ ವಯಸ್ಸಿನಲ್ಲಿ ಅವರು ಲಂಡನ್ನಲ್ಲಿ ಮೃತಪಟ್ಟರು. ಜೀವಿತಾವಧಿಯಲ್ಲಿ ಮತ್ತೆ ಅವರು ಈ ದೇಶಕ್ಕೆ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ದೇವಾಲಯಗಳಲ್ಲಿನ ವಿಗ್ರಹಗಳು ಬೆತ್ತಲೆಯಾಗಿಯೇ ಇರುತ್ತವೆ. ಅವುಗಳಿಗೆ ವಸ್ತ್ರ, ಆಭರಣವನ್ನು ತೊಡಿಸಲಾಗುತ್ತದೆ. ಬೇಲೂರು– ಹಳೇಬೀಡಿನ ಶಿಲಾಬಾಲಕಿಯರ ಮೇಲೆ ಬಟ್ಟೆಯಿದೆಯೆ? ಹೀಗೆ, ಈ ದೇಶದಲ್ಲಿ ಅಲ್ಲದೆ ಗ್ರೀಕ್, ಯುರೋಪ್ ಮೊದಲಾದ ದೇಶಗಳಲ್ಲಿನ ಅನೇಕ ಪೇಂಟಿಂಗ್ ಹಾಗೂ ವಿಗ್ರಹಗಳು ಬೆತ್ತಲೆಯಾಗಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.