ಶನಿವಾರ, ಜೂನ್ 19, 2021
28 °C

ಎಂಜಿನಿಯರಿಂಗ್‌ ವಿದ್ಯಾರ್ಥಿ ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಹೋಳಿಯಾಡಿದ ನಂತರ ಕೆರೆಯಲ್ಲಿ ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹುಣಸ­ಮಾರ­ನ­ಹಳ್ಳಿಯಲ್ಲಿ ಸೋಮವಾರ ನಡೆದಿದೆ.ಭಾರತಿನಗರ ನಿವಾಸಿ ಗಡಿಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಅಬೂಬಕರ್‌ ಅವರ ಮಗ ಮಹಮ್ಮದ್‌ ಸುಬೇರ್‌ (21) ಮೃತಪಟ್ಟವರು. ಮೂಲತಃ ಕೇರಳದವರಾದ ಅಬೂಬಕರ್‌,  ನಾಲ್ಕು ವರ್ಷಗಳಿಂದ ಭಾರತಿನಗರದಲ್ಲಿ ವಾಸವಿದ್ದಾರೆ.ನಾಗವಾರದ ಎಚ್‌ಕೆಬಿಕೆ ತಾಂತ್ರಿಕ ಮಹಾವಿದ್ಯಾ­ಲಯ­ದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ­ಯಾಗಿದ್ದ ಸುಬೇರ್‌, ಸ್ನೇಹಿತರಾದ ಶಮುಸಿಂಗ್‌, ವಿಜಯ್‌ಸಿಂಗ್‌, ಮಿಲ್ಟು, ಅವಿನಾಶ್‌, ದಿಲೀಪ್‌ ಹಾಗೂ ಪುಷ್ಪೇಂದರ್‌ ಅವರೊಂದಿಗೆ ಮಧ್ಯಾಹ್ನದವರೆಗೆ ಹೋಳಿಯಾಡಿದ್ದಾರೆ. ಸಂಜೆ 4 ಗಂಟೆ  ಸುಮಾರಿಗೆ ಸ್ನೇಹಿತರೆಲ್ಲರು ಕೆರೆಗೆ ಈಜಲು ತೆರಳಿದ್ದಾರೆ.ಕಡಿಮೆ ಆಳವಿರುವ ಕಡೆ ಎಲ್ಲರೂ ಈಜುತ್ತ, ಮೈಗೆ ಅಂಟಿದ್ದ ಹೋಳಿಬಣ್ಣವನ್ನು ಸ್ವಚ್ಚಗೊಳಿಸಿಕೊಂಡಿದ್ದಾರೆ. ಈ ವೇಳೆ ಸುಬೇರ್‌, ಈಜುತ್ತ ಕೆರೆಯ ಮದ್ಯಭಾಗಕ್ಕೆ ತೆರಳಿದ್ದಾರೆ. ಹೆಚ್ಚಿನ ಆಳವಿದ್ದ ಭಾಗದಲ್ಲಿ ಅವರು ಮುಳುಗಿದ್ದಾರೆ. ಸುಬೇರ್‌ ಕಾಣದಿರುವುದರಿಂದ ಗಾಬರಿಗೊಂಡ ಸ್ನೇಹಿತರು ಠಾಣೆಗೆ ವಿಷಯ ತಿಳಿಸಿದರು.ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಶವವನ್ನು ನೀರಿನಿಂದ ಹೊರತೆಗೆದರು ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.