ಆಲಮಟ್ಟಿ (ವಿಜಾಪುರ): ಚಲಿಸುತ್ತಿದ್ದ ರೈಲಿನಿಂದ ಕೃಷ್ಣಾ ನದಿಗೆ ಹಾರಿ ಸಾಫ್ಟ್ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ಇವರನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಅಜಿತ್ಕುಮಾರ ರನ್ನಕುಮಾರ ಹಜಾರೆ (29) ಎಂದು ಗುರುತಿಸಲಾಗಿದೆ.

ಇವರು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರು. ಇತ್ತೀಚೆಗಷ್ಟೇ ನೌಕರಿಗೆ ರಾಜೀನಾಮೆ ನೀಡಿ ಮತ್ತೊಂದು ನೌಕರಿಗೆ ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಮಿತ್ರನೊಬ್ಬನ ಜೊತೆ ಸೇರಿ ವಿಜಾಪುರ-ಯಶವಂತಪುರ ರೈಲಿನಲ್ಲಿ ಆಲಮಟ್ಟಿ ಕಡೆ ಬರುತ್ತಿದ್ದಾಗ, ಆಲಮಟ್ಟಿ ಹತ್ತಿರದ ಕೃಷ್ಣಾ ನದಿಗೆ (ಪಾರ್ವತಿ ಕಟ್ಟಾ ಸೇತುವೆ) ಹಾರಿದರು ಎಂದು ತಿಳಿಸಲಾಗಿದೆ.

ಜೀವನದಲ್ಲಿ ಜಿಗುಪ್ಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇವರ ಚೀಲದಿಂದ ದೊರೆತಿರುವ ಚೀಟಿಯಿಂದ ಗೊತ್ತಾಗಿದೆ.

ವಿಜಾಪುರ ಬಿಎಲ್ಡಿಇ ಎಂಜಿನಿಯರಿಂಗ್ ಕಾಲೇಜಿನಿಂದ ಬಿಇ (ಎಲೆಕ್ಟ್ರಾನಿಕ್ಸ್) ಪದವಿ ಪಡೆದಿದ್ದ ಇವರಿಗೆ ತಂದೆ, ತಾಯಿ, ಒಬ್ಬ ಸಹೋದರ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.