ಬುಧವಾರ, ಆಗಸ್ಟ್ 5, 2020
26 °C

ಎಂಟಿವಿ ಕೋಕ್ ಸ್ಟುಡಿಯೊ ಗಾನ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಟಿವಿ ಕೋಕ್ ಸ್ಟುಡಿಯೊ ಗಾನ ಹಬ್ಬ

ಕೋಕಾ ಕೋಲಾ ಮತ್ತು ಎಂಟಿವಿ ಒಟ್ಟಾಗಿ ಸಂಗೀತ ಪ್ರಿಯರಿಗೆ ರಸದೌತಣ ನೀಡಲಿವೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾಗಿರುವ ಕೋಕಾ ಕೋಲಾ ಸಂಗೀತ ಕಾರ್ಯಕ್ರಮ `ಕೋಕ್ ಸ್ಟುಡಿಯೋ~ದ ಭಾರತೀಯ ಆವೃತ್ತಿಯ ಮೊದಲ ಎಪಿಸೋಡ್ ಶುಕ್ರವಾರ (ಜೂನ್ 17ರ) ಸಂಜೆ 7ಕ್ಕೆ ಎಂಟಿವಿಯಲ್ಲಿ ಪ್ರಸಾರಗೊಳ್ಳಲಿದೆ.ಭಾರತದ ಮಟ್ಟಿಗೆ ಒಂದು ವಿಭಿನ್ನ ಕಾರ್ಯಕ್ರಮವಾಗಿರುವ ಕೋಕ್ ಸ್ಟುಡಿಯೋ ಅಟ್ ಎಂಟಿವಿ ನಾನಾ ಭಾಗದ, ಶೈಲಿಯ ಕಲಾವಿದರನ್ನು ಒಂದೇ ವೇದಿಕೆಗೆ ಕರೆತರಲಿದೆ.ಯಾವುದೇ ಆಡಿಷನ್ ಇಲ್ಲದ, ತೀರ್ಪುಗಾರರು, ಅಂಕಗಳು ಇಲ್ಲದ, ವೋಟ್ ಮಾಡುವ ಗೋಜೆ ಇಲ್ಲದ ಕೇವಲ ಸಂಗೀತಕ್ಕಷ್ಟೇ ಮೀಸಲಾದ ಈ ಕಾರ್ಯಕ್ರಮ ವಿದೇಶದಲ್ಲಿ ಪ್ರಸಾರವಾದ ಕಡೆಯಲ್ಲೆಲ್ಲ ಒಂದು ಹೊಸ ಅಲೆಯನ್ನೆ ಹುಟ್ಟುಹಾಕಿತ್ತು.ಪ್ರತಿ ಎಪಿಸೋಡ್‌ನಲ್ಲಿ ಸಂಗೀತ ಕ್ಷೇತ್ರದ ಒಬ್ಬ ದಿಗ್ಗಜ, ಒಬ್ಬ ಉದಯೋನ್ಮುಖ ಸಂಗೀತ ಕಲಾವಿದ ಮತ್ತು ಮತ್ತೊಬ್ಬ ಜನಪದ ಕಲಾವಿದ ಭಾಗವಹಿಸಲಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ನೀಡಲಿದ್ದಾರೆ.ಗಾಯನ ತಾರೆಗಳಾದ ಶಾನ್, ಷಫ್ಕತ್ ಅಮಂತ್ ಅಲಿ, ಶಂಕರ್ ಮಹದೇವನ್, ಸುನಿಧಿ ಚೌಹಾಣ್, ಕೆಕೆ, ಹರಿಹರನ್, ಕೈಲಾಶ್ ಖೇರ್, ರಿಚಾ ಶರ್ಮಾ, ಬಾಂಬೆ ಜಯಶ್ರೀ, ಕನ್ನಡಿಗ ರಘು ದೀಕ್ಷಿತ್ ಅವರೊಂದಿಗೆ ಜನಪದ ಮಾಂತ್ರಿಕರಾದ ಖೋಗೆನ್ ದಾ, ವಾದಾಲಿ ಸೋದರರು, ರಶೀದ್ ಖಾನ್, ಸಬ್ರಿ ಸೋದರರು ಮತ್ತು ಉದಯೋನ್ಮುಖ ಪ್ರತಿಭೆಗಳಾದ ಅದ್ವೈತ್, ಶ್ರುತಿ ಪಾಠಕ್, ಚಿನ್ನ ಪೊನ್ನ, ಹರ್ಷ ದೀಪ್ ಪಾಲ್ಗೊಳ್ಳಲಿದ್ದಾರೆ. ಸಂಗೀತಗಾರ ಮತ್ತು ಗಾಯಕ ಲೆಸ್ಲಿ ಲೂಯಿಸ್ ತಾಂತ್ರಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಎಂಟಿವಿ ಇಂಡಿಯಾ ಚಾನೆಲ್ ಹೆಡ್ ಆದಿತ್ಯ ಸ್ವಾಮಿ ಹೇಳುವಂತೆ, `ಇದು ಸಂಗೀತ ಎಂಬ ಭಾಷೆಯ ಮೂಲಕ ಭಾರತದ ವೈವಿಧ್ಯತೆ ಹೊರಹಾಕಲಿದೆ. ಏನಾದರೂ ಸಾಧನೆ ಮಾಡುವ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತದೆ. ಈ ನಿಟ್ಟಿನಲ್ಲಿ ಇಂತಹ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ನಾವು ಉತ್ಸುಕರಾಗಿದ್ದೇವೆ~.`ನಮ್ಮ ಈ ಆಕರ್ಷಕ ಕಾರ್ಯಕ್ರಮವನ್ನು ಭಾರತದ ಸಂಗೀತ ಪ್ರಿಯರು ಸ್ವೀಕರಿಸಲಿದ್ದಾರೆ. ಸಮಾಜದಲ್ಲಿನ ಅಡೆತಡೆ ನಿವಾರಿಸಿ ಜನರನ್ನು ಬೆಸೆಯುವ ಕಾರ್ಯವನ್ನು ಸಂಗೀತ ಮಾಡುತ್ತದೆ~ ಎನ್ನುತ್ತಾರೆ ಕೋಕಾ ಕೋಲಾ ಇಂಡಿಯಾದ ಮಾರುಕಟ್ಟೆ ಸಂವಹನ ನಿರ್ದೇಶಕ ವಾಸಿಮ್ ಬಶೀರ್.ರೆಡ್‌ಚಿಲ್ಲಿ ಎಂಟರ್‌ಟೈನ್‌ಮೆಂಟ್ ಸಹಭಾಗಿತ್ವದಲ್ಲಿ ಎಂಟಿವಿ ಇಂಡಿಯಾ ನಿರ್ಮಿಸಿರುವ ಕೋಕ್ ಸ್ಟುಡಿಯೋ ಆಟ್ ಎಂಟಿವಿ ಕಾರ್ಯಕ್ರಮ, ಬಾಲಿವುಡ್‌ನ ಜನಪ್ರಿಯ ಟ್ರ್ಯಾಕ್‌ಗಳು, ಟ್ಯೂನ್‌ಗಳು, ಆಧುನಿಕ, ಪಾಶ್ಚಾತ್ಯ, ಜಾನಪದ ಮತ್ತು ಇನ್ನೂ ಹಲವು ಪ್ರಕಾರಗಳನ್ನು ಒಳಗೊಂಡ ವೇದಿಕೆಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.