ಭದ್ರಾವತಿ: ಇಲ್ಲಿನ ಜನರ ಜೀವನಾಡಿ ಎನಿಸಿರುವ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಸದಾ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಾ ತನ್ನ ಏರುಪೇರಿನ ಹಾದಿಯಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಾ ಸಾಗಿದೆ.

ಈಗ ಕಾರ್ಖಾನೆಗೆ ಎದುರಾಗಿರುವುದು ಕಚ್ಚಾ ಸಾಮಗ್ರಿ ಕೊರತೆ. ಇದರ ಪರಿಣಾಮ ನಾಲ್ಕು ಕಾಗದ ಉತ್ಪನ್ನ ಯಂತ್ರಗಳಲ್ಲಿ ಬರಹ ಕಾಗದ ಉತ್ಪಾದನೆ ಮಾಡುವ ಯಂತ್ರ ಮಾತ್ರ ತನ್ನ ಕೆಲಸ ನಿರ್ವಹಿಸಿದೆ.

ಸಹಸ್ರಾರು ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಲಕ್ಷಾಂತರ ಟನ್ ಅಕೇಶಿಯಾ, ನೀಲಗಿರಿ ಮರದ ಸಂಪತ್ತನ್ನು ಕಾರ್ಖಾನೆ ಹೊಂದಿದ್ದರೂ, ಅದನ್ನು ನಿಗದಿತ ಕಾಲಕ್ಕೆ ಶೇಖರಣೆ ಮಾಡುವಲ್ಲಿ ವಿಫಲವಾದ ಕಾರಣ ಈ ಸಮಸ್ಯೆ ಎದುರಾಗಿದೆ.

ಹಾಲಿ 310 ಟನ್ ಮರ ಶೇಖರಣೆಯಿದ್ದು, ಕಾರ್ಖಾನೆ ಪ್ರತಿದಿನ ಅಂದಾಜು ಕನಿಷ್ಠ 500 ಟನ್ ಕಚ್ಚಾ ಸಾಮಗ್ರಿ ಉಪಯೋಗಿಸುವ ಸಾಮರ್ಥ್ಯ ಹೊಂದಿದೆ. ಮಳೆಗಾಲದ ಮುನ್ನವೇ ಟೆಂಡರ್ ಕರೆದು ಮರದ ಶೇಖರಣೆ ಕಾರ್ಯ ಮುಗಿದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂಬುದು ಕಾರ್ಮಿಕರ ಅಭಿಪ್ರಾಯ.

ಕಾರ್ಖಾನೆ ಸುಮಾರು ಒಂದು ಲಕ್ಷ ಟನ್ ಸಾಮಗ್ರಿಯನ್ನು ಹೊರಗಿನಿಂದ ಹಾಗೂ ಉಳಿಕೆ ಒಂದು ಲಕ್ಷ ಟನ್ನಷ್ಟು ಅಕೇಶಿಯಾ, ನೀಲಗಿರಿ ಮರವನ್ನು ತನ್ನ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಬಳಕೆ ಮಾಡಿಕೊಳ್ಳುತ್ತದೆ.

ಹಿಂದೆ ಕೆಎಫ್ಡಿಸಿ ಕಡೆಯಿಂದ ಖರೀದಿಸುತ್ತಿದ್ದ ಕಚ್ಚಾ ಸಾಮಗ್ರಿಯನ್ನು ಈ ಬಾರಿ ಕೋಲಾರ ಮೂಲದ `ಕಿಂಗ್ಸ್ವುಡ್~ ಸಂಸ್ಥೆಯಿಂದ ಖರೀದಿ ಮಾಡಲು ಕ್ರಮ ತೆಗದುಕೊಳ್ಳಲಾಗಿದೆ. ಎರಡು ದಿನದಿಂದ ಸರಬರಾಜದ 25ಲೋಡ್ ಮರದಲ್ಲಿ 8ಲೋಡ್ ಮರವನ್ನು ಮಾತ್ರ ಸ್ವೀಕಾರ ಮಾಡಿರುವ ಕಾರ್ಖಾನೆ ಉಳಿಕೆ ಮರವನ್ನು ತಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ.

ಈಗ ಸರಬರಾಜಾಗಿರುವ ಮರದ ದಿಮ್ಮಿಗಳ ಆಕಾರ, ಸುತ್ತಳತೆಯಿಂದ ಹೆಚ್ಚಿನ ಉತ್ಪಾದನೆ ಸಾಧ್ಯವಿಲ್ಲ. ಇದರ ಬಳಕೆ ಮಾಡಿದಲ್ಲಿ ಇನ್ನಿತರೆ ಪೂರಕ ಸಾಮಗ್ರಿಗಳ ಖರ್ಚು ಹೆಚ್ಚುತ್ತದೆ. ಇದರಿಂದಾಗಿ ವೆಚ್ಚ ಹೆಚ್ಚಿ, ನಷ್ಟ ಪ್ರಮಾಣ ವೃದ್ಧಿಸುತ್ತದೆ ಎಂಬುದು ಕಾರ್ಮಿಕರ ವಾದ.

`ವುಡ್ ಸ್ಟಾಕ್ ಕಡಿಮೆ ಇರುವ ಕುರಿತಂತೆ ಆಡಳಿತ ಮಂಡಳಿ ಗಮನಕ್ಕೆ ಈ ಹಿಂದೆಯೇ ತಂದಿದ್ದೇವೆ. ಆದರೂ ಶೇಖರಣೆ ಮಾಡದಿರುವ ಕ್ರಮ ಖಂಡನೀಯ~ ಎನ್ನುತ್ತಾರೆ ಕಾರ್ಮಿಕ ಸಂಘದ ಉಪಾಧ್ಯಕ್ಷ ಎಸ್. ಸುರೇಶ್ಬಾಬು.

`ಆಡಳಿತದಲ್ಲಿ ಹೊಂದಾಣಿಕೆ ಸರಿಯಾಗಿಲ್ಲದ ಸಂದರ್ಭದಲ್ಲಿ ಈ ಏರುಪೇರು ಉಂಟಾಗಿದೆ. ಈ ಕುರಿತಂತೆ ಸಂಘದಿಂದ ಸಾಕಷ್ಟು ಬಾರಿ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತಂತೆ ಸಾಕಷ್ಟು ಬಾರಿ ಅಧಿಕಾರಿಗಳ ಮುಂದೆ ಪ್ರತಿಭಟನೆ ಮಾಡ್ದ್ದಿದೇವೆ~ ಎನ್ನುತ್ತಾರೆ ಸುರೇಶ್. `ಖಾಸಗಿ ಕಂಪೆನಿಯಿಂದ ಬರುತ್ತಿರುವ ವುಡ್ ಉತ್ಪಾದನೆಗೆ ಯೋಗ್ಯವಿಲ್ಲ. ಈ ಅಂಶವನ್ನು ಸಹ ಶನಿವಾರ ವ್ಯಕ್ತ ಮಾಡ್ದ್ದಿದೇವೆ. ನಷ್ಟ ಮಾಡಿ ಕೊಂಡು ಇಂತಹ ಸಾಮಗ್ರಿ ತರಿಸುವುದರಲ್ಲಿ ಅರ್ಥವಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂಬುದು ನಮ್ಮ ಬೇಡಿಕೆ~ ಎನ್ನುತ್ತಾರೆ.

ಈ ಹಿಂದೆ ಸಿಎಂಡಿ ಅಧಿಕಾರ ನಡೆಸಿದ ಕೂಟಿನ್ಹೊ ಏರುಪೇರಿನ ನಡುವೆ ಸಹ ಯಶಸ್ವಿಯಾಗಿ ಉತ್ಪಾದನೆ ನಿರ್ವಹಣೆ ಮಾಡುತ್ತಿದ್ದರು. ಅವರು ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ವಹಿಸಿದ ನೀಲಗಿರಿ, ಅಕೇಶಿಯಾ ನರ್ಸರಿ ಇಂದು ಬೃಹತ್ ಗಾತ್ರದ ಮರಗಳಾಗಿವೆ. ಸದ್ಯಕ್ಕೆ ಇವುಗಳನ್ನು ಕಡಿದು ಉಪಯೋಗ ಮಾಡಲಾಗುತ್ತಿದೆ. ಅವರಿದ್ದಾಗ ಎದುರಾಗದ ಕಚ್ಚಾ ಸಾಮಗ್ರಿ ಸಮಸ್ಯೆ ಈಗ ಸೃಷ್ಟಿಯಾಗಲು ಕಾರಣವೇನು? ಎಂದು ಪ್ರಶ್ನಿಸುವ ಉದ್ಯೋಗಿಗಳು ಅವರು ಏನೇ ಕೆಲಸ ಮಾಡಲಿ ಕಾಲಕಾಲಕ್ಕೆ ಉತ್ಪಾದನೆ ನಿಲ್ಲದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದರು ಎಂದೂ ಸ್ಮರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.