ಭಾನುವಾರ, ಜನವರಿ 26, 2020
28 °C

ಎಂಬಿಎ ಕೌಶಲ ವೃದ್ಧಿ

-ಜೆ.ಎ.ಚೌಧುರಿ Updated:

ಅಕ್ಷರ ಗಾತ್ರ : | |

ವೃತ್ತಿ ಬದುಕಿನಲ್ಲಿ ಎಂಬಿಎಗೆ ಮಹತ್ವ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ, ಎಂಬಿಎ ಕಲಿಕೆ ಉಪಯುಕ್ತವೇ ಅಲ್ಲವೇ ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಎದುರಾಗಿದೆ. ಆದರೆ ಎಂಬಿಎ ಕಲಿಕೆ ಉಪಯುಕ್ತ ಎಂದೇ ಹೇಳಬೇಕಾಗುತ್ತದೆ.ಎಂಬಿಎ ವ್ಯಕ್ತಿಯೊಬ್ಬನಿಗೆ ವಾಣಿಜ್ಯ, ಹಣಕಾಸು, ಮಾರುಕಟ್ಟೆ ನಿರ್ವಹಣೆ ಮತ್ತು ಮಾನವ ಸಂಪನ್ಮೂಲದಲ್ಲಿ ಕೌಶಲ ವೃದ್ಧಿಗೆ ಸಹಕರಿಸುತ್ತದೆ. ನಾಯಕತ್ವ ಗುಣ, ಸಂವಹನ, ತಂಡದ ಜತೆ ಹೊಂದಿಕೊಂಡು ಕೆಲಸ ಮಾಡುವ ಗುಣಗಳನ್ನು ಕಲಿಸುತ್ತದೆ. ಈ ಗುಣಗಳಿರುವವರಿಗೆ ಸಂಘಟನೆಯಲ್ಲಿ ವೇಗವಾಗಿ ಬೆಳೆಯಲು ಸಾಧ್ಯ.ಹೀಗಾಗಿ ಪದವಿ ಮುಗಿಸಿದೊಡನೆ ಎಂಬಿಎ ಪಡೆಯುವುದು ಸೂಕ್ತ. ಕೆಲಸದಲ್ಲಿ ಕೆಲವು ವರ್ಷ ಕಳೆದ ಮೇಲೆ ಎಂಬಿಎ ಪದವಿ ಪಡೆಯುವುದು ಕೂಡ ಉಪಯುಕ್ತ ಆಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡುತ್ತದೆ. ಎಂಬಿಎ ಪಠ್ಯಕ್ರಮವನ್ನು ಇತರ ಕೋರ್ಸ್‌ಗಳ ಜತೆ ಹೋಲಿಸಲಾಗದು. ಕಾರ್ಪೊರೇಟ್ ಸಂಸ್ಕೃತಿಗೆ ಹತ್ತಿರವಾದ ಎಂಬಿಎ ಕಾರ್ಯಕ್ರಮಗಳಲ್ಲಿ ಹಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸಲಹೆ ನೀಡುತ್ತಿವೆ.ಸಂಸ್ಥೆಗಳಿಗೆ ಸಂಬಂಧಿಸಿದ ಯೋಜನೆಗಳು ಅಥವಾ ಅಸೈನ್‌ಮೆಂಟ್‌ಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಎಂಬಿಎ ಸಹಕರಿಸುತ್ತದೆ. ಒಂದು ವಾರ, 3 ವಾರ ಅಥವಾ ಎರಡು ತಿಂಗಳಿನ ಯೋಜನೆಗಳನ್ನು ಹಮ್ಮಿಕೊಳ್ಳಲು ಕಲಿಸುತ್ತದೆ. ಇದು ಪ್ರಾಯೋಗಿಕ ಆಗಿರುವುದರಿಂದ ವಿದ್ಯಾರ್ಥಿಗಳ ಕೆರಿಯರ್ ಅಭಿವೃದ್ಧಿಗೆ ಪೂರಕ.

 

ಪ್ರತಿಕ್ರಿಯಿಸಿ (+)