ಸೋಮವಾರ, ಮೇ 23, 2022
30 °C

ಎಂಬೆಡೆಡ್ ಆಳ-ಅಗಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಬೆಡೆಡ್ ಆಳ-ಅಗಲ

ಆಧುನಿಕ ಯುಗದಲ್ಲಿ ಎಂಬೆಡೆಡ್ ತಂತ್ರಜ್ಞಾನದ ಪ್ರೇರಣೆ ದೊಡ್ಡದು. ಫ್ರಿಡ್ಜ್‌ನಿಂದ ಹಿಡಿದು ಆಕಾಶದೆತ್ತರಕ್ಕೆ ನೆಗೆಯಬಲ್ಲ ವಿಮಾನದಂಥ ತಂತ್ರಜ್ಞಾನದಲ್ಲಿ `ಎಂಬೆಡೆಡ್' ಕೊಡುಗೆ ಇದೆ.ಪ್ರಕೃತಿ ಸಹಜವಾದ ಗುರುತ್ವಾಕರ್ಷಣ ಶಕ್ತಿಯ ಸಿದ್ಧಾಂತಕ್ಕೆ ವಿರುದ್ಧವಾಗಿ ಹಾರಾಡಬಲ್ಲ ಕೀಟ, ಹಕ್ಕಿಗಳೇ ಈ ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ಮಹತ್ವದ ಪಾತ್ರಗಳನ್ನು ವಹಿಸಿವೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮಾನವ ರಹಿತ ವಾಹನಗಳ ಸಂಶೋಧನೆಯ ಯಶಸ್ಸಿನ ಹಿಂದೆ ಇರುವುದು ಇದೇ ತಂತ್ರಜ್ಞಾನದ ಪಾತ್ರ.ಗಾಳಿಯನ್ನು ಸೀಳಿಕೊಂಡು ಮುಂದೆ ಸಾಗುವ ರೆಕ್ಕೆಯ ವಿನ್ಯಾಸ, ಬಹು ಎತ್ತರದಿಂದಲೇ ಭೂಮಿಯ ಮೇಲಾಗುತ್ತಿರುವ ವಿದ್ಯಮಾನಗಳನ್ನು ಸೆರೆಹಿಡಿಯಬಲ್ಲ ಹಕ್ಕಿಗಳ ವಿಶೇಷತೆಯ ಬಗ್ಗೆ ಅಧ್ಯಯನ ಕೈಗೊಂಡು, ಆ ಅಂಶಗಳನ್ನು ಅಳವಡಿಸಿಕೊಂಡು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ವಿಜ್ಞಾನಿಗಳು.ಆಯಾ ದೇಶಗಳು ರಕ್ಷಣಾ ವ್ಯವಸ್ಥೆಗಳನ್ನು ಸುಧಾರಿಸಿಕೊಳ್ಳಲು ಅನೇಕ ಸಂಶೋಧನೆಗಳನ್ನು ಕೈಗೊಂಡು ಯಶಸ್ವಿಯಾಗಿವೆ. ಹೀಗೆ ಸಂಶೋಧನೆ ಕೈಗೊಂಡ ವಿಜ್ಞಾನಿಗಳು ಅತಿ ಚಿಕ್ಕ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿದ್ದಾರೆ. ಹೀಗಾಗಿಯೇ ಎಂಬೆಡೆಡ್ ತಂತ್ರಜ್ಞಾನ ಸಂಸ್ಥೆ ಕೀಟ ಹಾಗೂ ಹಕ್ಕಿಗಳ ಚಲನೆಯ ವಿನ್ಯಾಸ ಮತ್ತು ಶೈಲಿಗಳ ಅಳವಡಿಕೆ ಹೊಂದಿರುವ ವ್ಯವಸ್ಥೆಗಳ ಬಗ್ಗೆ ಚರ್ಚಿಸುವ, ಅವುಗಳ ಅಭಿವೃದ್ಧಿಗೆ ಕೈಗೊಳ್ಳಬಹುದಾದ ನವ ಯೋಜನೆಗಳ ಮಾಹಿತಿ ಕಲೆಹಾಕುವ ಕುರಿತು ಸಮ್ಮೇಳನವೊಂದನ್ನು ಜುಲೈ 17ರಿಂದ 19ರವರೆಗೆ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ವಿಶ್ವದಾದ್ಯಂತ ಎಂಬೆಡೆಡ್ ತಂತ್ರಜ್ಞಾನದ ಹಾದಿಯಲ್ಲಿ ಉಂಟಾದ ಸಂಶೋಧನೆಗಳನ್ನು ಪ್ರದರ್ಶಿಸಲಾಗುವುದು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ  ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಶನ್‌ನ ಅಧ್ಯಕ್ಷ ಸಂಜೀವ್ ಕೇಸ್ಕರ್ ಹಾಗೂ ಯುಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅನೀಸ್ ಅಹ್ಮದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಮೇಳದಲ್ಲಿ ಎಂಬೆಡೆಡ್ ತಂತ್ರಜ್ಞಾನದ ಬಗ್ಗೆ ಸಂಶೋಧನೆ ಕೈಗೊಂಡಿರುವ ಅನೇಕ ತಂತ್ರಜ್ಞರು ಮಾಹಿತಿ ನೀಡಲಿದ್ದಾರೆ. ಅವರಲ್ಲಿ ಗನ್ಸೆಲ್ ಗ್ರೂಪ್‌ನ ಅಧ್ಯಕ್ಷ ಜ್ಯಾಕ್ ಗನ್ಸೆಲ್, ಫ್ರೀಸ್ಕೇಲ್‌ನ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ನಿರ್ದೇಶಕ ರಾಬ್ ಓಶನ್, ಗ್ರೀನ್ ಹಿಲ್ಸ್ ಸಾಫ್ಟ್‌ವೇರ್‌ನ ಹಿರಿಯ ಎಫ್‌ಎಇ ಸರ್ಜ್ ಪ್ಲಗನಾಲ್, ಡೆಲ್ ಇಂಡಿಯಾದ ಜನೋರಿಯಸ್ ರಬೀಲ್, ನಿತಿನ್ ಗುಪ್ತಾ ಮುಂತಾದವರು ಎಂಬೆಡೆಡ್ ತಂತ್ರಜ್ಞಾನದ ಕುರಿತು ವಿವರಿಸಲಿದ್ದಾರೆ.ಪಾರ್ಕ್‌ಗೆ ಒತ್ತಾಯ

ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಅಂಡ್ ಸರ್ವಿಸಸ್ ಕಂಪೆನಿಯ ವರದಿ ಪ್ರಕಾರ 2015ರ ವೇಳೆಗೆ ದೇಶದಲ್ಲಿ ಎಂಬೆಡೆಡ್ ವ್ಯವಸ್ಥೆಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಗಳಿಗೆ ಸಿಗುವ ಅವಕಾಶ ಜಾಗತಿಕ ಮಾರುಕಟ್ಟೆಯಲ್ಲಿ 8900 ಕೋಟಿ ಡಾಲರ್‌ನಷ್ಟಾಗಲಿದೆ. ಭಾರತದಲ್ಲಿ ಈ ಮೊತ್ತ 1400 ಕೋಟಿ ಡಾಲರ್ ದಾಟಲಿದೆ. `ಬೆಂಗಳೂರು ತಂತ್ರಜ್ಞಾನ, ಟೆಲಿಕಾಮ್, ಎಲೆಕ್ಟ್ರಾನಿಕ್ಸ್ ಹಬ್ ಆಗಿದೆ. ಹೀಗಾಗಿ ನಗರದಲ್ಲಿ ಎಂಬೆಡೆಡ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಸ್ಥಳ ನಿಗದಿ ಮಾಡಬೇಕೆಂದು ಒತ್ತಾಯ ಪಡಿಸಲಾಗುವುದು' ಎನ್ನುತ್ತಾರೆ ಯುಬಿಎಂ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅನೀಸ್ ಅಹಮದ್.

ಇದು ಏಳನೇ ಸಮ್ಮೇಳನವಾಗಿದ್ದು, ಈಗಾಗಲೇ ವಿಶ್ವದ ತಂತ್ರಜ್ಞಾನ ಸಮ್ಮೇಳನ ಎಂದು ಹೆಸರುವಾಸಿಯಾಗಿದೆ.ಇವರೆಲ್ಲಾ ಭಾಗವಹಿಸಬಹುದು...

ಉತ್ತರ ಅಮೆರಿಕ, ಯುರೋಪ್ ಹಾಗೂ ಏಷ್ಯಾಖಂಡಗಳ ಪ್ರಮಖ ತಜ್ಞರನ್ನು ಒಗ್ಗೂಡಿಸುವ ಈ  ಸಮ್ಮೇಳನದಲ್ಲಿ ಎಂಬೆಡೆಡ್ ತಂತ್ರಜ್ಞಾನದ ಬಗ್ಗೆ ತಿಳಿದಿರುವ ಹಾಗೂ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಭಾಗವಹಿಸಬಹುದಾಗಿದೆ.ನಾಳಿನ ವಿನ್ಯಾಸದ ಎಂಬೆಡೆಡ್ ಸಿಸ್ಟಂಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಹಾಗೂ ಕೌಶಲ ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶವಿದ್ದು, ಮೂರು ದಿನಗಳಿಗೆ ಶುಲ್ಕರೂ15 ಸಾವಿರ.ಸ್ಥಳ: ನಿಮ್ಹಾನ್ಸ್ ಸಮ್ಮೇಳನ ಸಭಾಂಗಣ. ಬೆಳಿಗ್ಗೆ 9. ಮಾಹಿತಿಗೆ: 99005 66513 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.