ಬುಧವಾರ, ಜನವರಿ 22, 2020
18 °C

ಎಎಸ್‌ಐ, ಕಾನ್‌ಸ್ಟೆಬಲ್‌ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸರ ಮಕ್ಕಳು ಯುವತಿಯರ ಮೇಲೆ ಹಲ್ಲೆ ನಡೆಸುತ್ತಿದ್ದರೂ ಅವರನ್ನು ತಡೆ ಯಲು ಮುಂದಾಗದೆ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಆಡು ಗೋಡಿ ಸಂಚಾರ ಠಾಣೆಯ ಎಎಸ್‌ಐ ಶ್ರೀರಾಮಪ್ಪ ಮತ್ತು ಕಾನ್‌ ಸ್ಟೆಬಲ್‌ ಮುನಿತಿಮ್ಮಪ್ಪ ಅವರನ್ನು ಅಮಾನತು ಗೊಳಿಸಲಾಗಿದೆ.



ನಗರ ಸಶಸ್ತ್ರದಳದ ಎಎಸ್‌ಐ ಲಕ್ಕಣ್ಣ ಪಟೇಲ್‌ ಅವರ ಮಕ್ಕಳಾದ ಚಂದನ್ ಪಟೇಲ್ (23), ಚಕ್ರವರ್ತಿ ಪಟೇಲ್ (20) ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಧರ್ಮೇಂದ್ರ ಎಂಬು ವರ ಮಗ ನಯನ (19) ಬುಧವಾರ (ಡಿ.18) ಹೊಸೂರು ಲಸ್ಕರ್ ರಸ್ತೆಯಲ್ಲಿರುವ ಆಡು ಗೋಡಿ ಸಂಚಾರ ಠಾಣೆಯ ಎದುರು ಇಬ್ಬರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ್ದರು.



ಯುವತಿಯರ ಮೇಲೆ ಹಲ್ಲೆ ನಡೆಯುತ್ತಿದ್ದರೂ ತಡೆಯಲು ಮುಂದಾಗದೆ ಶ್ರೀರಾಮಪ್ಪ ಮತ್ತು ಮುನಿತಿಮ್ಮಪ್ಪ ಕರ್ತವ್ಯ ಲೋಪ ಎಸಗಿದ್ದಾರೆ. ಹೀಗಾಗಿ  ಇಬ್ಬರನ್ನೂ ಅಮಾನತುಗೊಳಿಸ ಲಾ ಗಿದೆ ಎಂದು ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ತಿಳಿಸಿದ್ದಾರೆ.



ಆಡುಗೋಡಿ ಸಂಚಾರ ಠಾಣೆಯ ಎದುರು ಯುವತಿಯರಿದ್ದ ಕಾರಿಗೆ ವ್ಯಾನ್‌ ಡಿಕ್ಕಿ ಹೊಡೆದಿತ್ತು. ಕಾರಿ ನಿಂದಿಳಿದ ಯುವತಿಯರು ವ್ಯಾನ್‌ ಚಾಲಕನೊಂದಿಗೆ ಜಗಳ ಮಾಡು ತ್ತಿದ್ದರು. ಈ ವೇಳೆ ಸಮೀಪದಲ್ಲೇ ಇದ್ದ ಮೂವರು ಯುವಕರು, ಯುವತಿಯರ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದರು. ಇದನ್ನು ಪ್ರಶ್ನಿಸಿದ ಯುವತಿಯರ ಮೇಲೆ ಈ ಮೂವರು ಹಲ್ಲೆ ನಡೆಸಿದ್ದರು ಎಂದು  ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)