ನವದೆಹಲಿ: ಭಾರತೀಯ ವೃತ್ತಿಪರರಿಗೆ ನೀಡುತ್ತಿರುವ ಎಚ್1ಬಿ ವೀಸಾ ಕುರಿತಂತೆ ಅಮೆರಿಕ ಭಿನ್ನ ಹೇಳಿಕೆ ನೀಡಿದೆ.

ಕಳೆದ ಆರ್ಥಿಕ ವರ್ಷದಲ್ಲಿ (2010 ಅಕ್ಟೋಬರ್ನಿಂದ 2011 ಸೆಪ್ಟೆಂಬರ್ 30ರವರೆಗೆ) ಎಚ್1ಬಿ ವೀಸಾ ನೀಡಿಕೆ ಪ್ರಮಾಣದಲ್ಲಿ ಶೇ 24ರಷ್ಟು ಏರಿಕೆಯಾಗಿದೆ ಎಂದು ಅಮೆರಿಕ ಹೇಳಿದೆ.

ಆದರೆ, ವೀಸಾಕ್ಕಾಗಿಭಾರತೀಯರು ಸಲ್ಲಿಸುತ್ತಿರುವ ಅರ್ಜಿಗಳನ್ನು ತಿರಸ್ಕರಿಸುತ್ತಿರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಭಾರತ ಸೆಪ್ಟೆಂಬರ್ನಲ್ಲೇ ಹೇಳಿತ್ತು. ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ಭಾರತೀಯರಿಗೆ ನೀಡಿರುವ ಎಚ್1ಬಿ ವೀಸಾಗಳ ಅಂಕಿ ಅಂಶಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

2011ನೇ ಆರ್ಥಿಕ ವರ್ಷದಲ್ಲಿ ಒಟ್ಟು 67,195 ಭಾರತೀಯರಿಗೆ ಎಚ್1ಬಿ ವೀಸಾ ನೀಡಲಾಗಿದೆ ಎಂದು ಹೇಳಿದೆ. 2010ನೇ ಆರ್ಥಿಕ ವರ್ಷದಲ್ಲಿ 54,111 ವೀಸಾಗಳನ್ನು ನೀಡಲಾಗಿತ್ತು ಎಂದು ಅಮೆರಿಕ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಮತ್ತೊಮ್ಮೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂಬ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಆರ್ಥಿಕ ರಕ್ಷಣಾ ನೀತಿಗಳಿಗೆ ಮತ್ತಷ್ಟು ತಡೆಹಾಕುವ ಸಾಧ್ಯತೆಯ ಬಗೆಗಿನ ಭಾರತದ ಕಳವಳವನ್ನು ಹೋಗಾಲಾಡಿಸುವ ಯತ್ನ ಇದಾಗಿದೆ ಎಂದು ಹೇಳಲಾಗಿದೆ.

`ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಇತಿಹಾಸದಲ್ಲೇ ಎಚ್1ಬಿ ವೀಸಾ ನೀಡಿಕೆಯಲ್ಲಿ ಅತಿ ಹೆಚ್ಚು ಅಂದರೆ ಶೇ 24ರಷ್ಟು ಏರಿಕೆಯಾಗಿದೆ. ಇದು ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯ ಸಂಬಂಧವು ಅಭಿವೃದ್ಧಿ ಹೊಂದುತ್ತಿರುವುದನ್ನು ಸೂಚಿಸುತ್ತದೆ~ ಎಂದು ಅಮೆರಿಕ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಭಾರತೀಯರು, ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ವಲಯದ ವೃತ್ತಿಪರರರು ಎಚ್1ಬಿ ವೀಸಾಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ನಿರಾಕರಿಸುತ್ತಿರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಸೆಪ್ಟೆಂಬರ್ನಲ್ಲಿ ಭಾರತ ಹೇಳಿತ್ತು. ಎಚ್1ಬಿ ವೀಸಾ ಅರ್ಜಿಗಳನ್ನು ಅಮೆರಿಕ ತಿರಸ್ಕರಿಸುತ್ತಿರುವ ಪ್ರಮಾಣ ಹೆಚ್ಚಳವಾಗಿರುವುದಕ್ಕೆ ವಾಣಿಜ್ಯ ಸಚಿವ ಆನಂದ ಶರ್ಮ ಕಳವಳ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.