ಸಿಂಧನೂರು: ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆಯಾದಾಗಿನಿಂದ ಬಡ ವರ, ಅಸಹಾಯಕರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಹಲವು ದಿಟ್ಟ ಹೋರಾಟಗಳನ್ನು ಕೈಗೊಂಡು ನ್ಯಾಯ ಒದಗಿಸಿದ ಹಿರಿಮೆ ಪಕ್ಷಕ್ಕಿದೆ. ಜನಸಾಮಾನ್ಯರು ನೆಮ್ಮದಿ ಕಾಣ ಬೇಕಾದರೆ ಎಡ ಮತ್ತು ಜಾತ್ಯತೀತ ಶಕ್ತಿಗಳೇ ಪರ್ಯಾಯ ಎಂದು ಭಾರತ ಕಮ್ಯುನಿಷ್ಟ ಪಕ್ಷದ ರಾಜ್ಯ ಕಾರ್ಯ ದರ್ಶಿ ಡಾ.ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಇಲ್ಲಿ ಪಕ್ಷ ಏರ್ಪಡಿಸಿದ್ದ 85ನೇ ವರ್ಷಾಚರಣೆ ಹಾಗೂ ಕಾರ್ಯಾಲಯದ ಉದ್ಘಾ ಟನೆ ನೆರವೇರಿಸಿ ಮಾತನಾಡಿದರು. ಬಡವರ, ಅಸಹಾಯಕರ ಪರವಾಗಿ ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆ ಯಾದಾಗಿನಿಂದಲೂ ಹೋರಾಟ ಮಾಡುತ್ತ ಬಂದಿದ್ದು, ಜನಸಾ ಮಾನ್ಯರಿಗೆ ನೆಮ್ಮದಿ ಸಿಗಬೇಕಾದರೆ ಎಡಪಂಥೀಯ ರಾಜಕೀಯ ಶಕ್ತಿ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಜಿಲ್ಲಾ ಮಂಡಳಿ ಸದಸ್ಯ ಅಮೀರ ಅಲಿ ಮಾತನಾಡಿ ರೈತರು, ಕಾರ್ಮಿ ಕರು ಮತ್ತು ನೌಕರ ವರ್ಗದಲ್ಲಿ ರಾಜಕೀಯ ಪ್ರಜ್ಞೆ ಬರಬೇಕಾಗಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಗೋನಾಳ, ಚಿದಾನಂದಪ್ಪ, ಚೆನ್ನಪ್ಪ, ಬೊಮ್ಮಣ್ಣ, ಚಂದ್ರಶೇಖರ ಕ್ಯಾತನಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.